ರಷ್ಯಾ ವಿರುದ್ಧ ಹೋರಾಟಕ್ಕಿಳಿದ ಉಕ್ರೇನಿಯನ್ ಬ್ಯೂಟಿ ಕ್ವೀನ್
ಕೀವ್, ಫೆಬ್ರವರಿ 28: ರಷ್ಯನ್ನರು ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ರಷ್ಯಾದ ಪಡೆಗಳನ್ನು ಎದುರಿಸಲು ಸಾಮಾನ್ಯರು ಭದ್ರತಾ ಪಡೆಗಳೊಂದಿಗೆ ಸೇರಿಕೊಂಡಿದ್ದಾರೆ. ಉಕ್ರೇನ್‌ನ ಬ್ಯೂಟಿ ಕ್ವೀನ್ ಮತ್ತು ಮಾಜಿ ಮಿಸ್ ಗ್ರ್ಯಾಂಡ್ ಉಕ್ರೇನ್ ಆದ ಅನಸ್ತಾಸಿಯಾ ಲೆನ್ನಾ ಕೂಡಾ ರಷ್ಯಾದ ಆಕ್ರಮಣದ ವಿರುದ್ಧ ಹೋರಾಡಲು ಉಕ್ರೇನಿಯನ್ ಮಿಲಿಟರಿಗೆ ಸೇರಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತನ್ನ ಸಾಮಾಜಿಕ ಮಾಧ್ಯಮದಲ್ಲಿ ಉಕ್ರೇನ್‌ನ ಬ್ಯೂಟಿ ಕ್ವೀನ್ ಅನಸ್ತಾಸಿಯಾ ಲೆನ್ನಾ ಈ ಬಗ್ಗೆ ತಿಳಿಸಿದ್ದಾರೆ. ತನ್ನ ಮನೆಯನ್ನು ರಕ್ಷಿಸುವ ಕರೆಗೆ ಉತ್ತರಿಸಿದ್ದೇನೆ ಎಂದು ಅನಸ್ತಾಸಿಯಾ ಲೆನ್ನಾ ಹೇಳಿದ್ದಾರೆ. "ಆಕ್ರಮಣ ಮಾಡುವ ಉದ್ದೇಶದಿಂದ ಉಕ್ರೇನಿಯನ್ ಗಡಿಯನ್ನು ದಾಟಿದ ಪ್ರತಿಯೊಬ್ಬರೂ ಕೊಲ್ಲಲ್ಪಡುತ್ತಾರೆ," ಎಂದು ಶನಿವಾರದಂದು ಇಂಗ್ಲಿಷ್‌ನಲ್ಲಿ ಮಾಡಿದ ಒಂದು ಪೋಸ್ಟ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ. ತಾನು ಗನ್ ಹಿಡಿದು ನಿಂತ ಫೋಟೋವನ್ನು ಕೂಡಾ ಪೋಸ್ಟ್ ಮಾಡಿದ್ದಾರೆ.
2015 ರಲ್ಲಿ ಮಿಸ್ ಗ್ರ್ಯಾಂಡ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಲೆನ್ನಾ ಉಕ್ರೇನ್ ಅನ್ನು ಪ್ರತಿನಿಧಿಸಿದರು. ಇನ್‌ಸ್ಟಾಗ್ರಾಮ್‌ನಲ್ಲಿನ ಮತ್ತೊಂದು ಪೋಸ್ಟ್‌ನಲ್ಲಿ, ಮಾಡೆಲ್ ಆಯುಧದೊಂದಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ.

ಗನ್ ಹಿಡಿದ ಉಕ್ರೇನ್ ಸಂಸತ್ ಸದಸ್ಯೆ
ಇದಕ್ಕೂ ಮುನ್ನ ಉಕ್ರೇನ್ ಸಂಸತ್ ಸದಸ್ಯೆ ಕಿರಾ ರುಡಿಕ್ ಗನ್ ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದರು. "ನಾನು ಕಲಾಶ್ನಿಕೋವ್ ಅನ್ನು ಬಳಸಲು ಕಲಿಯುತ್ತೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊರಲು ತಯಾರಿ ಮಾಡುತ್ತೇನೆ. ಇದು ಅತಿವಾಸ್ತವಿಕವಾಗಿದೆ, ಕೆಲವೇ ದಿನಗಳ ಹಿಂದೆ ಅದು ನನ್ನ ಮನಸ್ಸಿಗೆ ಆಲೋಚನೆ ಕೂಡಾ ಬಂದಿಲ್ಲ. ನಮ್ಮ ಮಹಿಳೆಯರು ನಮ್ಮಮಹಿಳೆಯರು ನಮ್ಮ ಪುರುಷರಂತೆಯೇ ನಮ್ಮ ಮಣ್ಣನ್ನು ರಕ್ಷಿಸುತ್ತಾರೆ," ಎಂದು ಉಕ್ರೇನ್ ಸಂಸತ್ ಸದಸ್ಯೆ ಕಿರಾ ರುಡಿಕ್ ಬರೆದುಕೊಂಡಿದ್ದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕೂಡ ಯುದ್ಧದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಉಕ್ರೇನಿಯನ್ ಸೈನಿಕರೊಂದಿಗೆ ಅಕ್ಕಪಕ್ಕದಲ್ಲಿ ನಿಂತು ಹೋರಾಡುತ್ತಿದ್ದಾರೆ ಎಂದು ವರದಿಗಳು ಉಲ್ಲೇಖ ಮಾಡಿದೆ.
ಉಕ್ರೇನ್‌ನ 26 ವರ್ಷದ ಸಂಸದರ ಕೈಯಲ್ಲಿ AK-47
ಸ್ವಿಯಾಟೋಸ್ಲಾವ್ ಯುರಾಶ್ ಉಕ್ರೇನ್ ಸಂಸತ್ತಿನ ಸದಸ್ಯರಾದಾಗ, ಅವರು ಉಕ್ರೇನ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಸಂಸದರಾಗಿದ್ದರು. ಮೂರು ವರ್ಷಗಳ ನಂತರ, ಉಕ್ರೇನ್ ವಿರುದ್ಧ ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ 26 ವರ್ಷದ ಸಂಸದರು AK-47 ರೈಫಲ್‌ನೊಂದಿಗೆ ಶಸ್ತ್ರಸಜ್ಜಿತರಾಗಿದ್ದಾರೆ. ಅವರು ಸೈನಿಕರಲ್ಲ, ಆದರೆ ಅಂತಹ ಪರಿಸ್ಥಿತಿಯಲ್ಲಿ ಒಬ್ಬರು ತಮ್ಮ ಜೀವನಕ್ಕಾಗಿ ಹೋರಾಡಬೇಕಾದಾಗ ವಿಷಯಗಳನ್ನು ಕಲಿಯುವುದು ಸುಲಭವಾಗುತ್ತದೆ ಎಂದು ಹೇಳಿದ್ದಾರೆ.

ಪುಟಿನ್ ಯುದ್ಧದಲ್ಲಿ ಗೆದ್ದರೆ ಉಕ್ರೇನಿಯನ್ನರು ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಉಕ್ರೇನ್ ಸಂಸತ್ತಿನ ಅತ್ಯಂತ ಕಿರಿಯ ಸಂಸದ 26 ವರ್ಷದ ಸ್ವಿಯಾಟೋಸ್ಲಾವ್ ಯುರಾಶ್, "ಅದಕ್ಕಾಗಿಯೇ ನಾನು ನನ್ನ ಎಕೆ 47 ಅನ್ನು ನನ್ನ ಕೈಯಲ್ಲಿ ಹಿಡಿದಿದ್ದೇನೆ. ಉಕ್ರೇನ್‌ನ ನಾಗರಿಕರು ಈಗಾಗಲೇ ನೇಮಕಾತಿ ಕೇಂದ್ರಗಳಲ್ಲಿ ಸೇರುತ್ತಿದ್ದಾರೆ ಮತ್ತು ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳಲು ಬಯಸುವವರಿಗೆ ಸರ್ಕಾರವೇ ಶಸ್ತ್ರಾಸ್ತ್ರ ಒದಗಿಸಲಿದೆ. ಈ ಬಗ್ಗೆ ಈಗಾಗಲೇ ಸರ್ಕಾರ ಘೋಷಣೆ ಮಾಡಿದೆ. ಶುಕ್ರವಾರ ಸರ್ಕಾರವು ಮನೆಯಲ್ಲಿ ಪೆಟ್ರೋಲ್ ಬಾಂಬ್‌ಗಳನ್ನು ತಯಾರಿಸಲು ಜನರಲ್ಲಿ ಹೇಳಿದೆ," ಎಂದು ಮಾಹಿತಿ ನೀಡಿದ್ದಾರೆ.
"ನಾವು ಯುರೋಪ್‌ನ ಅತಿದೊಡ್ಡ ರಾಷ್ಟ್ರ, ನಾವು 40 ಮಿಲಿಯನ್ ಜನರ ರಾಷ್ಟ್ರ ಮತ್ತು ರಷ್ಯಾ ತನ್ನ ಗಡಿಯುದ್ದಕ್ಕೂ ಬಯಸಿದಂತೆ ನಾವು ಸುಮ್ಮನೆ ನಿಲ್ಲುವುದಿಲ್ಲ. ನಮ್ಮಲ್ಲಿರುವ ಎಲ್ಲದರೊಂದಿಗೆ ಮತ್ತು ಎಲ್ಲಾ ಬೆಂಬಲದೊಂದಿಗೆ ನಾವು ಹೋರಾಡುತ್ತೇವೆ. ಜಗತ್ತು ನಮಗೆ ಬೆಂಬಲ ನೀಡುತ್ತದೆ," ಎಂದು ಸ್ವಿಯಾಟೋಸ್ಲಾವ್ ಯುರಾಶ್ ರೇಡಿಯೊ ಚಾನೆಲ್‌ಗೆ ತಿಳಿಸಿದರು. ಸ್ವಿಯಾಟೋಸ್ಲಾವ್ ಯುರಾಶ್ ಅವರು ಟ್ವಿಟ್ಟರ್‌ನಲ್ಲಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮುಖದ ಮೇಲೆ ನಗುವಿನೊಂದಿಗೆ ಎಕೆ -47 ಅನ್ನು ಹಿಡಿದಿರುವುದನ್ನು ಕಾಣಬಹುದು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications