ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಲ್ಲಿ ಯುದ್ಧ ವಿರೋಧಿ ಅಲೆ: 900ಕ್ಕೂ ಅಧಿಕ ಮಂದಿಯ ಬಂಧನ

|
Google Oneindia Kannada News

ಮಾಸ್ಕೋ, ಮಾರ್ಚ್ 21: ಉಕ್ರೇನ್‌ ಮೇಲೆ ರಷ್ಯಾವು ದಾಳಿ ಆರಂಭ ಮಾಡಿದ ಬಳಿಕ ರಷ್ಯಾದಲ್ಲಿ ಯುದ್ಧ ವಿರೋಧಿ ಅಲೆಯು ಭುಗಿಲೆದ್ದಿದೆ. ಈಗಾಗಲೇ ರಷ್ಯಾದಲ್ಲಿ ಉಕ್ರೇನ್‌ ಮೇಲಿನ ಯುದ್ಧದ ವಿರುದ್ಧ ಹೋರಾಟ ಮಾಡಿದ ಹಲವಾರು ಮಂದಿಯು ಬಂಧನಕ್ಕೆ ಒಳಗಾಗಿದ್ದಾರೆ. ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸುಮಾರು 900ಕ್ಕೂ ಅಧಿಕ ರಷ್ಯನ್ನರು ಬಂಧನಕ್ಕೆ ಒಳಗಾಗಿದ್ದಾರೆ ಎಂದು ಕೀವ್‌ ವರದಿ ಉಲ್ಲೇಖ ಮಾಡಿದೆ.

ಪ್ರತಿಭಟನೆಗಳ ಬಗ್ಗೆ ಮೇಲ್ವಿಚಾರಣೆ ಮಾಡುತ್ತಿರುವ ಗುಂಪಿನ ಮಾಹಿತಿ ಪ್ರಕಾರ ರಷ್ಯಾವು ಉಕ್ರೇನ್‌ ಮೇಲೆ ಮಾಡಿರುವ ದಾಳಿಯನ್ನು ವಿರೋಧ ಮಾಡಿ ಪ್ರತಿಭಟನೆ ಮಾಡಿದ ಸುಮಾರು 900ಕ್ಕೂ ಅಧಿಕ ಮಂದಿಯನ್ನು ಬಂಧನ ಮಾಡಲಾಗಿದೆ. ಮಾರ್ಚ್ 21 ರಂದು ರಷ್ಯಾದ 37 ನಗರಗಳಲ್ಲಿ 936 ಜನರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.

ಉಕ್ರೇನ್‌ ದಾಳಿಯ ವಿರುದ್ಧ ಪ್ರತಿಭಟಿಸಿದ ನೂರಾರು ರಷ್ಯನ್ನರ ಬಂಧನಉಕ್ರೇನ್‌ ದಾಳಿಯ ವಿರುದ್ಧ ಪ್ರತಿಭಟಿಸಿದ ನೂರಾರು ರಷ್ಯನ್ನರ ಬಂಧನ

ರಷ್ಯಾವು ಉಕ್ರೇನ್‌ ಮೇಲೆ ಫೆಬ್ರವರಿ 24ರಂದು ದಾಳಿ ಆರಂಭ ಮಾಡಿದೆ. ಫೆಬ್ರವರಿ 24ರಿಂದ ಈವರೆಗೆ ರಷ್ಯಾದಲ್ಲಿ ಒಟ್ಟು ಬಂಧಿತರ ಸಂಖ್ಯೆ 15,000 ಜನರನ್ನು ಮೀರಿದೆ ಎಂದು ಕೂಡಾ ಈ ವರದಿಯು ಹೇಳಿದೆ. ಇನ್ನು ಈಗಾಗಲೇ ಹಲವಾರು ರಷ್ಯನ್ನರು ಸರ್ಕಾರದ ವಿರುದ್ಧ ಅಭಿಯಾನವನ್ನು ಕೂಡಾ ಆರಂಭ ಮಾಡಿದ್ದಾರೆ ಎಂದು ವರದಿಯು ಹೇಳಿದೆ.

Ukraine-Russia War: Over 900 people were detained during anti-war protests in Russia

ರಷ್ಯಾ ಸರ್ಕಾರದ ವಿರುದ್ಧ ಹಲವಾರು ಮಂದಿ ರಷ್ಯನ್ನರ ಆಕ್ರೋಶ

24 ಫೆಬ್ರವರಿ 2022 ರಂದು ರಷ್ಯಾದ ಉಕ್ರೇನ್ ಆಕ್ರಮಣದ ನಂತರ, ರಷ್ಯಾದಾದ್ಯಂತ ಯುದ್ಧ ವಿರೋಧ ಪ್ರತಿಭಟನೆಗಳು ಭುಗೆಲೆದ್ದಿದೆ. ಯುದ್ಧವನ್ನು ವಿರೋಧಿಸಿ ಹಲವಾರು ಅರ್ಜಿಗಳು ಮತ್ತು ಮುಕ್ತ ಪತ್ರಗಳನ್ನು ಬರೆಯಲಾಗಿದೆ. ಹಲವಾರು ಸಾಂಸ್ಕೃತಿಕ ಮತ್ತು ರಾಜಕೀಯ ವ್ಯಕ್ತಿಗಳು ಯುದ್ಧದ ವಿರುದ್ಧ ಹೇಳಿಕೆಗಳನ್ನು ಬಿಡುಗಡೆ ಮಾಡಿದ್ದಾರೆ.

ಫೆಬ್ರವರಿ 24 ರಿಂದ 14,000 ಕ್ಕೂ ಹೆಚ್ಚು ಮಂದಿ ಬಂಧನಕ್ಕೆ ಒಳಗಾಗಿದ್ದಾರೆ. ಮಾನವ ಹಕ್ಕುಗಳ ಸಂಘಟನೆಗಳು ಮತ್ತು ವರದಿಗಾರರು ಬಂಧನದ ಸಮಯದಲ್ಲಿ ಪೊಲೀಸ್ ದೌರ್ಜನ್ಯ ಮತ್ತು ಪ್ರತಿಭಟನಾಕಾರರನ್ನು ಬಂಧನದಲ್ಲಿ ಹಿಂಸಿಸುತ್ತಿರುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶದ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅನುಮತಿಸಲು ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮನವಿದೇಶದ ವೈದ್ಯಕೀಯ ಕಾಲೇಜು ಪ್ರವೇಶಕ್ಕೆ ಅನುಮತಿಸಲು ಉಕ್ರೇನ್‌ನಿಂದ ಬಂದ ವಿದ್ಯಾರ್ಥಿಗಳ ಮನವಿ

ಮಾರ್ಚ್ 14 ರಂದು, ಚಾನೆಲ್ ಒನ್ ರಷ್ಯಾ ಸಂಪಾದಕರಾದ ಮರೀನಾ ಒವ್ಸ್ಯಾನಿಕೋವಾ ಅವರು ಯುದ್ಧ-ವಿರೋಧಿ ಸಂದೇಶವನ್ನು ಹೊಂದಿರುವ ಫಲಕವನ್ನು ಹಿಡಿದುಕೊಂಡು ಪ್ರೈಮ್‌ ನ್ಯೂಸ್‌ ಸಮಯದಲ್ಲಿ ಚಾನೆಲ್‌ನ ಮುಖ್ಯ ಸುದ್ದಿ ಕಾರ್ಯಕ್ರಮ ವ್ರೆಮ್ಯಾದ ಸೆಟ್‌ಗೆ ಅಡ್ಡಿಪಡಿಸಿದರು. "ಯುದ್ಧ ಬೇಡ. ಯುದ್ಧವನ್ನು ನಿಲ್ಲಿಸಿ. ಪ್ರಚಾರವನ್ನು ನಂಬಬೇಡಿ, ಇಲ್ಲಿ ನಿಮಗೆ ಸುಳ್ಳು ಹೇಳಲಾಗುತ್ತಿದೆ. ಯುದ್ಧದ ವಿರುದ್ಧ ರಷ್ಯನ್ನರು," ಇದ್ದಾರೆ ಎಂದು ಉಕ್ರೇನಿಯನ್ ತಂದೆ ಮತ್ತು ರಷ್ಯಾದ ತಾಯಿಯ ಮಗಳಾದ ಓವ್ಸ್ಯಾನಿಕೋವಾ ಒವಿಡಿ-ಇನ್ಫೋದಲ್ಲಿ ಮೊದಲೇ ರೆಕಾರ್ಡ್ ಮಾಡಿದ ವೀಡಿಯೊವನ್ನು ಬಿಡುಗಡೆ ಮಾಡಿದ್ದರು.

ಇದರಲ್ಲಿ ಅವರು ಚಾನೆಲ್ ಒನ್‌ನಲ್ಲಿ "ಕ್ರೆಮ್ಲಿನ್ ಪ್ರಚಾರ" ವನ್ನು ಹರಡಲು ನಾಚಿಕೆಪಡುತ್ತಾರೆ ಎಂದು ಹೇಳಿದ್ದರು. ಆ ಸಂಜೆಯ ನಂತರ ಆಕೆಯನ್ನು ಪೊಲೀಸರು ಬಂಧಿಸಿದರು. ಆದಾಗ್ಯೂ, ಮಾನವ ಹಕ್ಕುಗಳ ವಕೀಲರು ಆಕೆಯನ್ನು ಬಂಧಿಸಿದ ಹನ್ನೆರಡು ಗಂಟೆಗಳಿಗೂ ಹೆಚ್ಚು ಸಮಯದ ನಂತರವೂ ಆಕೆಯ ಬಗ್ಗೆ ತಿಳಿಯಲು ಸಾಧ್ಯವಾಗಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ ಮೇಲೆ ದಾಳಿಗೈದ ಒಂದು ದಿನದಲ್ಲೇ 1,74 ಪ್ರತಿಭಟನಾಕಾರರ ಬಂಧನ

ರಷ್ಯನ್ನರು ಉಕ್ರೇನ್‌ನ ಮೇಲೆ ತಮ್ಮ ದೇಶದ ಆಕ್ರಮಣವನ್ನು ಖಂಡಿಸಿ ಸಾವಿರಾರು ಜನರು ಪ್ರತಿಭಟನೆ ನಡೆಸಲು ಈ ಆಕ್ರಮಣದ ಆರಂಭದಲ್ಲೇ ಶುರು ಮಾಡಿದ್ದಾರೆ. ರಷ್ಯಾದ 54 ನಗರಗಳಲ್ಲಿ ಸುಮಾರು 1,745 ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಕನಿಷ್ಠ 957 ಜನರು ಮಾಸ್ಕೋದಲ್ಲಿದ್ದಾರೆ. ಮಾನವ ಹಕ್ಕುಗಳ ವಕೀಲ ಲೆವ್ ಪೊನೊಮಾವಿಯೋವ್ ಪ್ರಾರಂಭಿಸಿದ ಒಂದು ಅರ್ಜಿಯು ಹಲವಾರು ಗಂಟೆಗಳ ಒಳಗೆ 150,000 ಕ್ಕೂ ಹೆಚ್ಚು ಸಹಿಗಳನ್ನು ಗಳಿಸಿತು. ದಿನದ ಅಂತ್ಯದ ವೇಳೆಗೆ 330,000 ಕ್ಕೂ ಹೆಚ್ಚು ಸಹಿಗಳನ್ನು ಗಳಿಸಿತು. 250ಕ್ಕೂ ಹೆಚ್ಚು ಪತ್ರಕರ್ತರು ತಮ್ಮ ಹೆಸರನ್ನು ಬಹಿರಂಗ ಪತ್ರದಲ್ಲಿ ಬರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

ಉಕ್ರೇನ್ ನಾಶಕ್ಕೆ ಕಿಂಜಾಲ್ ಕ್ಷಿಪಣಿ ಪ್ರಯೋಗಿಸಿದ ರಷ್ಯಾ... ಇದೆಷ್ಟು ಡೇಂಜರಸ್ ಗೊತ್ತಾ? | Oneindia Kannada

English summary
Ukraine-Russia War: Over 900 people were detained during anti-war protests in Russia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X