ಯುದ್ಧ & ಹಿಂಸಾಚಾರದ ನಡುವೆ ಚುನಾವಣೆಗೆ ರೆಡಿಯಾದ ಉಕ್ರೇನ್? ಅಧ್ಯಕ್ಷನಿಂದಲೇ ಸಿಕ್ಕಿದೆ ಮಹತ್ವದ ಮಾಹಿತಿ!
ಉಕ್ರೇನ್ ಅಧ್ಯಕ್ಷ ತನ್ನ ಹಠ ಬಿಟ್ಟು ರಷ್ಯಾ ಜೊತೆಗೆ ಸಂಧಾನ ಮಾಡಿಕೊಂಡು ಯುದ್ಧ ನಿಲ್ಲಿಸುವ ನಿರ್ಧಾರ ಮಾಡುತ್ತಿಲ್ಲ. ಇನ್ನೊಂದು ಕಡೆ ಅಮೆರಿಕ ಮಾಡುತ್ತಿರುವ ಪ್ರಯತ್ನಗಳಿಗೆ ಬೆಲೆ ಇಲ್ಲದ ರೀತಿ ಆಗಿ ಹೋಗಿದೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ಯಾವುದೇ ಅಡೆತಡೆ ಇಲ್ಲದಂತೆ ಮುಂದುವರಿದು, ಆತಂಕ ಇನ್ನಷ್ಟು ಹೆಚ್ಚು ಮಾಡಿದೆ. ಇಂತಹ ಸಮಯದಲ್ಲೇ ಉಕ್ರೇನ್ ದೇಶದ ಸಾರ್ವತ್ರಿಕ ಚುನಾವಣೆ ಬಗ್ಗೆ ಚರ್ಚೆ ಶುರುವಾಗಿತ್ತು. ಹೀಗಿದ್ದಾಗ ಯುದ್ಧ & ಹಿಂಸಾಚಾರದ ನಡುವೆ ಚುನಾವಣೆಗೆ ರೆಡಿಯಾದ ಉಕ್ರೇನ್? ಅಧ್ಯಕ್ಷನಿಂದಲೇ ಸಿಕ್ಕಿದೆ ಮಹತ್ವದ ಮಾಹಿತಿ!
ಹೌದು, ಉಕ್ರೇನ್ ನೆಲದಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲಿಸುವುದು ಒಂದು ರೀತಿಯಾಗಿ ಹಾವು ಸಾಯಬಾರದು & ಕೋಲು ಕೂಡ ಮುರಿಯಬಾರದು ಎಂಬಂತೆ ಆಗಿದೆ. ಹೀಗೆ ಒಂದು ಕಡೆ ರಷ್ಯಾ ಸೇನೆಯನ್ನು ಸಮಾಧಾನ ಮಾಡಬೇಕು ಹಾಗೂ ಇನ್ನೊಂದು ಕಡೆ ಉಕ್ರೇನ್ ಸೇನೆಯನ್ನ ಒಪ್ಪಿಸಿ ಈ ಯುದ್ಧ ನಿಲ್ಲುವಂತೆ ಮಾಡಬೇಕು. ಎರಡೂ ಆಸೆಗಳು ಆಸೆಯಾಗಿಯೇ ಉಳಿದು ಅಮೆರಿಕಗೆ ಈ ಯುದ್ಧ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರಷ್ಯಾ ವಿರುದ್ಧ ಹೊಸ ಅಸ್ತ್ರ!
ಈ ಸಮಯದಲ್ಲೇ ರಷ್ಯಾ ಕೂಡ ಉಕ್ರೇನ್ ನೆಲದಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗುತ್ತಿದೆ, ಹೀಗಾಗಿ ಬೇಗನೇ ಉಕ್ರೇನ್ ದೇಶದ ಸಾರ್ವತ್ರಿಕ ಚುನಾವಣೆ ನಡೆಸಬೇಕು ಎಂಬ ಒತ್ತಾಯ ಮಾಡಿತ್ತು. ರಷ್ಯಾ ಒತ್ತಡದ ನಡುವೆಯೇ ಉಕ್ರೇನ್ ಈಗ ಮಹತ್ವದ ನಿರ್ಧಾರ ಕೈಗೊಂಡಿದ್ದು, ಉಕ್ರೇನ್ ದೇಶದಲ್ಲಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸುವ ಸಂಬಂಧ ಇದೇ ಮೊದಲ ಬಾರಿಗೆ ಝೆಲೆನ್ಸ್ಕಿ ಮಾತನಾಡಿ ಮಾಹಿತಿ ನೀಡಿದ್ದಾರೆ. ಚುನಾವಣೆ ನಡೆಸಲು ಸಿದ್ಧ ಎಂಬ ಮುನ್ಸೂಚನೆ ನೀಡುವ ಮೂಲಕ ಹೊಸ ಅಸ್ತ್ರವನ್ನು ರಷ್ಯಾ ವಿರುದ್ಧ ಪ್ರಯೋಗ ಮಾಡಿದ್ದಾರೆ.












Click it and Unblock the Notifications