ಬೇಡ.. ಬೇಡ.. ಅಂದ್ರೂ ಅದನ್ನೇ ಮಾಡುತ್ತಿದ್ದಾರಾ ಉಕ್ರೇನ್ ಅಧ್ಯಕ್ಷ?

ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಇಡೀ ಜಗತ್ತು ಇದೀಗ ಒಂದಾಗುತ್ತಿದೆ. ಅದ್ರಲ್ಲೂ ಈ ಜಂಜಾಟದ ಪರಿಣಾಮ ಬೇಸತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಜಗತ್ತಿನ ಎದುರು ಬೇಡಿಕೊಂಡಿದ್ದರು. ಪ್ರಪಂಚವೇ ಒಂದಾಗಿ, ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಿ ದಯವಿಟ್ಟು ಎಂದು ವಿಶ್ವಸಂಸ್ಥೆಯಲ್ಲಿ ಬೇಡಿಕೆಯನ್ನ ಸಲ್ಲಿಸಿದ್ದರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ. ಇಷ್ಟೆಲ್ಲದರ ನಡುವೆ ದೊಡ್ಡಣ್ಣ ಅಮೆರಿಕ ಕೂಡ ಈ ವಿಷಯಕ್ಕೆ ಎಂಟ್ರಿಯಾಗಿದ್ದು, ರಷ್ಯಾ ಆಕ್ರೋಶ ಮತ್ತಷ್ಟು ಹೆಚ್ಚಾಗುತ್ತಾ? ಬನ್ನಿ ಈ ಬಗ್ಗೆ ಮಾಹಿತಿಯನ್ನು ಸಂಪೂರ್ಣ ತಿಳಿಯೋಣ.

ಉಕ್ರೇನ್ & ರಷ್ಯಾ ಯುದ್ಧ ಹಲವು ರೀತಿಯಲ್ಲಿ ಜಗತ್ತನ್ನು ಕಾಡುತ್ತಿದ್ದು, ಜನರು ಕೂಡ ಈ ವಿಚಾರದಲ್ಲಿ ಭಯಗೊಂಡಿದ್ದಾರೆ. 2020 ರಲ್ಲಿ 'ಕೊರೊನಾ' ಕಂಟಕ ಅಂಟಿದ ನಂತರ ಇಡೀ ಜಗತ್ತು ನರಳಿ ಹೋಗಿದ್ದು, ಆರ್ಥಿಕವಾಗಿ ಕೂಡ ಸಂಕಷ್ಟ ಎದುರಾಗಿದೆ. ಪರಿಸ್ಥಿತಿ ಕೈಮೀರಿ ಬಡ ದೇಶಗಳು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟ ಇದ್ದಾಗಲೇ 2022 ರಲ್ಲಿ ಶುರುವಾಗಿದ್ದ ಉಕ್ರೇನ್ & ರಷ್ಯಾ ಯುದ್ಧ ಸಾಕಷ್ಟು ಅಲ್ಲೋಲ & ಕಲ್ಲೋಲ ಸೃಷ್ಟಿ ಮಾಡುತ್ತಿದೆ. ಈ ಯುದ್ಧದ ಪರಿಣಾಮ ಈಗಾಗಲೇ ಹಲವು ಕಡೆ ತಿಕ್ಕಾಟ ಕೂಡ ಶುರುವಾಗಿದೆ. ಹೀಗಾಗಿ ಉಕ್ರೇನ್ & ರಷ್ಯಾ ಯುದ್ಧ ನಿಲ್ಲಿಸಲು ಮಹತ್ವದ ಯೋಜನೆ ರೂಪಿಸಿದಂತೆ ಕಾಣುತ್ತಿದೆ.

Ukraine President Volodymyr Zelenskyy Discussed With American President Joe Biden

ಬೈಡನ್ + ಝೆಲೆನ್‌ಸ್ಕಿ = ಯುದ್ಧಕ್ಕೆ ಬ್ರೇಕ್?

ಅಂದಹಾಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವಿಶ್ವಸಂಸ್ಥೆ ಮಹಾ ಅಧಿವೇಶನ ಉದ್ದೇಶಿಸಿ ಮಾತನಾಡಿದ ನಂತರ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆಗೆ ಮಾತುಕತೆಯನ್ನ ನಡೆಸಿದ್ದಾರೆ. ವೊಲೊಡಿಮಿರ್ ಝೆಲೆನ್‌ಸ್ಕಿ & ಜೋ ಬೈಡನ್ ನಡುವೆ ನಡೆದಿರುವ ಮಹತ್ವದ ದ್ವಿಪಕ್ಷೀಯ ಮಾತುಕತೆಯಲ್ಲಿ, ಯುದ್ಧಕ್ಕೆ ಬ್ರೇಕ್ ಹಾಕುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಮತ್ತೊಂದು ಕಡೆ ಜೋ ಬೈಡನ್ ಅವರ ಜೊತೆಗಿನ ಮಾತುಕತೆ ಬಗ್ಗೆ ಉಕ್ರೇನ್ ಅಧ್ಯಕ್ಷರಾದ ವೊಲೊಡಿಮಿರ್ ಝೆಲೆನ್‌ಸ್ಕಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಮೆರಿಕ ನೆರವು ಸ್ಮರಿಸಿದ ಉಕ್ರೇನ್

ರಷ್ಯಾ ವಿರುದ್ಧ ಉಕ್ರೇನ್‌ಗೆ ನೆರವು ನೀಡುತ್ತಿರುವ ಅಮೆರಿಕದ ಸಹಾಯವನ್ನು ಈಗ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ, ಮತ್ತೊಮ್ಮೆ ಮೆಲುಕು ಹಾಕಿಕೊಂಡಿದ್ದಾರೆ. ಅಲ್ಲದೆ, ಅಮೆರಿಕದ ನೆರವಿನ ಕಾರಣಕ್ಕೆ ಉಕ್ರೇನ್‌ಗೆ ತನ್ನ ಸ್ವಾತಂತ್ರ್ಯ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹಾಗೇ ಅಮೆರಿಕ ನೀಡುತ್ತಿರುವ ನೆರವಿನ ಪರಿಣಾಮ ಉಕ್ರೇನ್ ನೆಲದಲ್ಲಿ ಜೀವ ರಕ್ಷಣೆ ಕೂಡ ಸಾಧ್ಯವಾಗಿದೆ ಎಂದು ಬರೆದುಕೊಂಡಿದ್ದಾರೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ.

ಹಾಗೇ ಇದೇ ಸಮಯದಲ್ಲಿ ಯುದ್ಧ ಮುಗಿದ ನಂತರ ಕೂಡ ಜಿ7 ಒಕ್ಕೂಟ ಉಕ್ರೇನ್ ದೇಶಕ್ಕೆ ನೆರವು ನೀಡಲಿದೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ ವೊಲೊಡಿಮಿರ್ ಝೆಲೆನ್‌ಸ್ಕಿ. ಆದರೆ, ಈ ಬೆಳವಣಿಗೆ ರಷ್ಯಾಗೆ ಕೋಪ ತರಿಸುತ್ತಾ? ಯುದ್ಧ ನಿಲ್ಲಿಸಲು ಜಗತ್ತು ಪಡುತ್ತಿರುವ ಯತ್ನ ಫಲ ನೀಡುತ್ತಾ? ಮುಂದಿನ ದಿನಗಳಲ್ಲಿ ಮತ್ತೆ ಜಗತ್ತು ಶಾಂತವಾಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+