ಚಳಿ ಮತ್ತು ಕತ್ತಲೆಯಲ್ಲಿ ಕರಗುತ್ತಿರುವ ಉಕ್ರೇನ್, ರಷ್ಯಾ ವಿರುದ್ಧ ರೊಚ್ಚಿಗೆದ್ದ ಉಕ್ರೇನ್ ಅಧ್ಯಕ್ಷ... Ukraine Peace Deal

ಉಕ್ರೇನ್ ವಿರುದ್ಧ ರಷ್ಯಾ ಸೇನೆ ಎಡಬಿಡದೆ ದಾಳಿ ಮಾಡುತ್ತಿದ್ದು, ಪುಟಿನ್ ಪಡೆಗಳು ಕೊಡುತ್ತಿರುವ ಒಂದೊಂದು ಏಟಿಗೂ ಉಕ್ರೇನ್ ಶೇಕ್ ಆಗಿದೆ. ಅದರಲ್ಲೂ ಸಾಕಷ್ಟು ಪ್ರದೇಶವನ್ನ ಈಗಾಗಲೇ ಉಕ್ರೇನ್ ಕಳೆದುಕೊಂಡು ನಲುಗಿ ಹೋಗಿದ್ದು, ನೋಡ ನೋಡುತ್ತಲೇ ಆರ್ಥಿಕವಾಗಿ ಬೀದಿಗೆ ಬಿದ್ದಿದೆ. ಜೊತೆಗೆ ರಷ್ಯಾ ಸೇನೆಯಿಂದ ಉಕ್ರೇನ್‌ನ ಎಲ್ಲಾ ವಿದ್ಯುತ್ ಸ್ಥಾವರಗಳಿಗೆ ಹಾನಿ ಆಗಿದೆ ಎಂದು ಉಕ್ರೇನ್‌ನ ಅಧ್ಯಕ್ಷ ಝೆಲೆನ್ಸ್ಕಿ ಆರೋಪಿಸಿದ್ದಾರೆ. ಈಗಾಗಲೇ ರಷ್ಯಾ ಸೇನೆ ನಡೆಸಿದ ದಾಳಿ ಪರಿಣಾಮ ಬಹುತೇಕ ಉಕ್ರೇನ್ ದೇಶ ಇದೀಗ ಕತ್ತಲೆಯಲ್ಲಿ ಮುಳುಗಿದ್ದು, ಚಳಿ ಕಾರಣಕ್ಕೆ ಕೋಟ್ಯಂತರ ಉಕ್ರೇನ್ ಪ್ರಜೆಗಳು ನಲುಗುವಂತೆ ಆಗಿದೆ.

ಅಂದಹಾಗೆ ಉಕ್ರೇನ್‌ನ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧವು ಆದಷ್ಟು ಬೇಗ ನಿಲ್ಲಬೇಕಿದ್ದು, ಯುದ್ಧ ನಿಂತಾಗ ಮಾತ್ರ ಉಕ್ರೇನ್ ನೆಮ್ಮದಿಯಾಗಿ ಬದುಕಲು ಸಾಧ್ಯ. ಅಕಸ್ಮಾತ್ ಇದೇ ರೀತಿಯಾಗಿ ಯುದ್ಧವನ್ನು ರಷ್ಯಾ ಮುಂದುವರಿಸಿದರೆ ಅದು ಭವಿಷ್ಯದಲ್ಲಿ ಯುರೋಪ್ ದೇಶಗಳನ್ನೇ ಸಂಕಷ್ಟಕ್ಕೆ ಸಿಲುಕಿಸುವ ಭೀತಿ ಆವರಿಸಿದೆ. ಇದೇ ಸಮಯದಲ್ಲಿ ಉಕ್ರೇನ್ ಅಧ್ಯಕ್ಷ ಇದೀಗ ರಷ್ಯಾ ವಿರುದ್ಧ ನೇರವಾಗಿ ವಾಗ್ದಾಳಿಯನ್ನ ನಡೆಸಿದ್ದು, ಉಕ್ರೇನ್ ದೇಶ ಕತ್ತಲೆಯಲ್ಲಿ ವಿಲವಿಲ ಒದ್ದಾಡಲು ರಷ್ಯಾ ನಡೆಸುತ್ತಿರುವ ದಾಳಿ ಕಾರಣ ಎಂದು ಆರೋಪಿಸಿದ್ದಾರೆ ಝೆಲೆನ್ಸ್ಕಿ.

Ukraine Peace Deal

ನರಳುತ್ತಾ ಬದುಕುತ್ತಿರುವ ಉಕ್ರೇನ್ ಪ್ರಜೆಗಳು

ಮ್ಯೂನಿಚ್ ಭದ್ರತಾ ಸಮ್ಮೇಳನ ವೇದಿಕೆಯಲ್ಲಿ ರಷ್ಯಾ ದಾಳಿ ಕುರಿತು ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಯುದ್ಧದ ಗುಲಾಮ ಎಂದು ಕರೆದಿದ್ದಾರೆ. ಅಲ್ಲದೆ ಲಕ್ಷಾಂತರ ಜನರನ್ನು ಕೊಂದ, ಪೂರ್ವ ಉಕ್ರೇನ್ ಅನ್ನು ನಾಶಮಾಡಿದ ಮತ್ತು ಲಕ್ಷಾಂತರ ಜನರನ್ನು ಪಲಾಯನ ಮಾಡುವಂತೆ ಮಾಡಿದ ಮಾಸ್ಕೋ ಆಕ್ರಮಣವನ್ನು ಎಲ್ಲರೂ ವಿರೋಧಿಸಬೇಕು ಎಂದು ಝೆಲೆನ್ಸ್ಕಿ ಹೇಳಿರುವುದು ತಲ್ಲಣ ಎಬ್ಬಿಸಿದೆ. ಮತ್ತೊಂದು ಕಡೆ, ರಷ್ಯಾದ ದಾಳಿಯಿಂದಾಗಿ ಹಾನಿಗೊಳಗಾಗದ ಒಂದೇ ಒಂದು ವಿದ್ಯುತ್ ಸ್ಥಾವರ ಉಕ್ರೇನ್‌ನಲ್ಲಿ ಉಳಿದಿಲ್ಲ ಎನ್ನುವ ಮೂಲಕ ಝೆಲೆನ್ಸ್ಕಿ ಉಕ್ರೇನ್ ಪರಿಸ್ಥಿತಿ ಬಿಡಿಸಿಟ್ಟಿದ್ದಾರೆ.

ಯುದ್ದ ಬೇಗ ನಿಲ್ಲಿಸಲು ಒತ್ತಾಯ

ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧ ಒಂದು ರೀತಿ ಹಾವು ಸಾಯಬಾರ್ದು ಹಾಗೂ ಕೋಲು ಮುರಿಬಾರ್ದು ಎಂಬ ರೀತಿ ಆಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏನೆಲ್ಲಾ ಪ್ರಯತ್ನ ಮಾಡಿದರೂ ಇಲ್ಲಿ ಇಬ್ಬರ ನಡುವಿನ ಯುದ್ಧ ನಿಲ್ಲಿಸಲು ಸಂಧಾನ ಮಾಡುತ್ತಿದ್ದರೂ ಪ್ರಯೋಜನಕ್ಕೆ ಬಂದೇ ಇಲ್ಲ. ಒಂದು ದಿನ ರಷ್ಯಾ ದಾಳಿ ಮಾಡಿದರೆ, ಮರುದಿನ ಉಕ್ರೇನ್ ದಾಳಿ ಮಾಡುತ್ತದೆ. ಹೀಗಾಗಿ ಇಬ್ಬರ ನಡುವೆ ಪದೇ ಪದೇ ಕಿರಿಕ್ ಆಗುತ್ತಲೇ ಇದೆ. ಎಲ್ಲವನ್ನೂ ಮೀರಿ ಇದೀಗ ಜನರು ಚಳಿಯಲ್ಲಿ ನರಳಾಡುತ್ತಿದ್ದು, ಈಗ ತಕ್ಷಣಕ್ಕೆ ಯುದ್ದ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

ಒಟ್ನಲ್ಲಿ ಈ ಯುದ್ಧ ನಿಲ್ಲದೇ ಹೋದರೆ ಜಗತ್ತಿಗೆ ನೆಮ್ಮದಿ ಇಲ್ಲ ಎಂಬುದು ಮತ್ತೆ ಮತ್ತೆ ಪ್ರೂವ್ ಆಗಿ ಭಯ ಹೆಚ್ಚು ಮಾಡುತ್ತಿದೆ. ಯುದ್ಧ ನಿಲ್ಲಿಸಲು ಅಮೆರಿಕ ಪರದಾಡುತ್ತಿದ್ದರೂ ಇದರ ಬಗ್ಗೆ ಯಾವುದೇ ಟೆನ್ಷನ್ ಇಲ್ಲದೆ ರಷ್ಯಾ & ಉಕ್ರೇನ್ ಬಡಿದಾಡುತ್ತಿವೆ. ಇದು ಒಂದು ಕಡೆ ಇರಲಿ, ಮತ್ತೊಂದು ಕಡೆ ಇನ್ನು ಕೆಲವೇ ದಿನಗಳಲ್ಲಿ 5ನೇ ವರ್ಷಕ್ಕೆ ರಷ್ಯಾ & ಉಕ್ರೇನ್ ಯುದ್ಧ ಎಂಟ್ರಿ ಕೊಡಲಿದೆ. ಹೀಗಾಗಿ, ಕೂಡಲೇ ಯುದ್ಧ ನಿಲ್ಲಿಸಲು ಇದೀಗ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ಅಗತ್ಯ ಕ್ರಮವನ್ನು ಕೈಗೊಂಡಿವೆ. ಆದ್ರೆ ಇದೆಲ್ಲಾ ಪ್ರಯೋಜಕ್ಕೆ ಬರುತ್ತಾ? ಉಕ್ರೇನ್ ಯುದ್ಧ ನಿಲ್ಲುತ್ತಾ? ಎಂಬುದನ್ನು ಈಗ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+