ರಷ್ಯಾ ವಿರುದ್ಧ ಉಕ್ರೇನ್ ಸೇನೆಯಿಂದ ದಾಳಿ, ಘಟನೆಯಲ್ಲಿ 7 ಜನ ಬಲಿ ಆರೋಪ | Ukraine Military
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 4 ವರ್ಷಗಳೇ ಮುಗಿದ ಹೋಗಿದ್ದು, ಇದೀಗ ಬರೋಬ್ಬರಿ ಅರ್ಧ ದಶಕ ಎಂದರೆ 5ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ ಈ ಯುದ್ಧ. ಹೀಗಿದ್ದಾಗ ಎರಡೂ ದೇಶಗಳ ನಡುವೆ ಸಂಧಾನ ಮಾಡಿಸಲು ಒಂದು ಕಡೆ ಅಮೆರಿಕ ಪರದಾಡುತ್ತಿದೆ. ಯುರೋಪ್ ದೇಶಗಳು ಉಕ್ರೇನ್‌ಗೆ ಸಹಾಯ ಮಾಡಿ ಮಾಡಿ ನಲುಗಿ ಹೋಗಿವೆ. ಇಂತಹ ವಾತಾವರಣದಲ್ಲಿ ಮತ್ತೆ ರಷ್ಯಾ ವಿರುದ್ಧವೇ ಭೀಕರ ದಾಳಿ ಮಾಡಿದೆ ಉಕ್ರೇನ್ ಸೇನೆ. ರಷ್ಯಾದ ರಸಗೊಬ್ಬರ ಕಾರ್ಖಾನೆ ಮೇಲೆ ಉಕ್ರೇನ್‌ನ ಸೇನೆಯಿಂದ ಭೀಕರ ದಾಳಿ ನಡೆದಿರುವ ಆರೋಪ ಮಾಡಲಾಗಿದೆ.
ರಷ್ಯಾ & ಉಕ್ರೇನ್ ಯುದ್ಧ ಬೆಂಕಿ ಆರುತ್ತಿಲ್ಲ, ಬದಲಾಗಿ ಇನ್ನಷ್ಟು ಜಾಗಗಳಿಗೆ ಹಬ್ಬುತ್ತಾ ಭಯ ಸೃಷ್ಟಿದೆ. ಹೀಗಿದ್ದರೂ ಯುದ್ಧ ನಿಲ್ಲಿಸಲು ಆಗದೇ ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡುತ್ತಾ ಬಂದಿದ್ದಾರೆ. ಮತ್ತೊಂದು ಕಡೆ ದಿಢೀರ್ ಉಕ್ರೇನ್ ನಡೆಸಿರುವ ದಾಳಿಯಲ್ಲಿ ರಷ್ಯಾದ 7 ಜನ ಬಲಿಯಾಗಿರುವ ಭಾರಿ ಗಂಭೀರ ಆರೋಪ ಮಾಡಲಾಗಿದೆ. ಹಾಗೇ ಈ ದಾಳಿಗೆ ಪ್ರತಿಕಾರ ತೆಗೆದುಕೊಳ್ಳಲು ರಷ್ಯಾ ಸೇನೆಯು ಈಗ ಮರುದಾಳಿ ನಡೆಸುವ ಭಯ ಉಕ್ರೇನ್‌ಗೆ ಶುರುವಾಗಿದ್ದು, ಭದ್ರತೆ ಮತ್ತಷ್ಟು ಹೆಚ್ಚು ಮಾಡಿದೆ.

ಡೊನಾಲ್ಡ್ ಟ್ರಂಪ್ ಅವರ ಮಾತಿಗೂ ಬೆಲೆ ಇಲ್ವಾ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಅಂದುಕೊಂಡ ಕೆಲಸ ಸಾಧಿಸುವ ತನಕ ಕೂಡ ಪದೇ, ಪದೇ ಅದೇ ವಿಚಾರ ಜಪ ಮಾಡುತ್ತಾ ಇರುತ್ತಾರೆ. ಹೀಗೆ ಎಷ್ಟೋ ಕೆಲಸಗಳು ಆಗಿಯೂ ಹೋಗಿವೆ, ಹೀಗಿದ್ದಾಗ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆ ಡೊನಾಲ್ಡ್ ಟ್ರಂಪ್ ಅವರು ಪದೇ, ಪದೇ ಮಾತನಾಡಿದ್ದರು. ಅದರಲ್ಲೂ ಕದನ ವಿರಾಮ ಘೋಷಣೆ ಮಾಡಿಸಿ ತೀರುತ್ತೇನೆ ಎಂಬ ಶಪಥ ಕೂಡ ಮಾಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಚಾಲೆಂಜ್ ವಿಚಾರದಲ್ಲಿ ಭಾಗಶಃ ಗೆದ್ದು ಬೀಗಿದ್ದ ಟ್ರಂಪ್ ಅವರು ರಷ್ಯಾ, ಉಕ್ರೇನ್ ಯುದ್ಧ ಇನ್ನೇನು ನಿಂತು ಹೋಯ್ತು ಅಂತಾ ಖುಷಿಯಾಗಿದ್ದರು. ಆದರೆ ಮತ್ತೆ ಬಡಿದಾಟ ಹೆಚ್ಚಾಗಿದ್ದು ಅಮೆರಿಕದ ಕೋಪ ಹೆಚ್ಚು ಮಾಡಿದೆ.
ಉಕ್ರೇನ್ ಸೇನೆಯಿಂದ ದೊಡ್ಡ ಪ್ರಮಾದ?
2022ರ ಫೆಬ್ರವರಿ ತಿಂಗಳಲ್ಲಿ ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿತ್ತು, ಉಕ್ರೇನ್ ಮಿಲಿಟರಿ ಪ್ರತಿದಾಳಿ ನಡೆಸಿ ಗೆಲ್ಲುವುದಾಗಿ ಆರಂಭದಲ್ಲಿ ಹೇಳಿತ್ತು. ಆದರೆ ಮುಂದೆ ಆಗಿದ್ದೇ ಬೇರೆ ಅಧಿಕಾರಿಗಳು ರಷ್ಯಾದ ಸೇನೆ ವಿರುದ್ಧ ಹೆಚ್ಚುತ್ತಿರುವ ನಷ್ಟ ಕಂಡು ಬೆಚ್ಚಿದ್ದಾರೆ, ಉಕ್ರೇನ್ ಸರ್ಕಾರ ಕೂಡ ಆದಷ್ಟು ಬೇಗನೇ ಈ ಒದ್ದಾಟ ನಿಂತರೆ ಸಾಕು ಅಂತಾ ಕಾಯುತ್ತಿದೆ. ಇಷ್ಟೆಲ್ಲಾ ಒತ್ತಡ ಇದ್ದರೂ ಸಂಧಾನ ಮಾತುಕತೆ ಮಾತ್ರ ಯಶಸ್ಸು ಕಾಣುತ್ತಿಲ್ಲ, ಯುದ್ಧ ಬೆಂಕಿ ಇನ್ನಷ್ಟು ಹೆಚ್ಚಾಗುತ್ತಾ ಸಾಗಿದೆ. ನ್ಯಾಟೋ ದೇಶಗಳು ಉಕ್ರೇನಿಯನ್ ಗಡಿ ಬಳಿ ದೊಡ್ಡ ಪ್ರಮಾಣದ ಬೆಂಬಲ ನೀಡಿದರೂ ಅದೆಲ್ಲಾ ಪ್ರಯೋಜನಕ್ಕೆ ಬಂದೇ ಇಲ್ಲ.
ಹಾಗೇ ಉಕ್ರೇನ್ ಸೇನೆ ಇದೀಗ ರಷ್ಯಾದ ರಸಗೊಬ್ಬರ ಘಟಕದ ಮೇಲೆ ನಡೆಸಿರುವ ದಾಳಿಯು, ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ದೊಡ್ಡ ತಿಕ್ಕಾಟಕ್ಕೆ ದಾರಿ ಮಾಡಿಕೊಡುವ ಆತಂಕ ಇದೆ. ಕೆಲವು ದಿನಗಳಿಂದ ರಷ್ಯಾ ಸೇನೆ ಕೂಡ ಯಾವುದೇ ರೀತಿಯ ದೊಡ್ಡ ದೊಡ್ಡ ದಾಳಿಗಳನ್ನು ನಡೆಸದೆ ಸೈಲೆಂಟ್ ಆಗಿತ್ತು. ಆದರೆ ಇದೀಗ ಉಕ್ರೇನ್ ಸೇನೆ ನಡೆಸಿರುವ ದಾಳಿ ಪರಿಣಾಮ ಮತ್ತೆ ಇಬ್ಬರೂ ದೊಡ್ಡ ಮಟ್ಟದಲ್ಲಿ ತಿಕ್ಕಾಟ ನಡೆಸುವ ಭೀತಿ ಮೂಡಿದೆ. ಇಬ್ಬರ ಜಗಳದಲ್ಲಿ ಈಗ ಸಾಮಾನ್ಯ ಜನರ ಬದುಕು ಬೀದಿಗೆ ಬೀಳುವ ರೀತಿ ಆಗಿದೆ ಎಂಬ ಆಕ್ರೋಶ ವ್ಯಕ್ತ ಆಗುತ್ತಿದೆ.












Click it and Unblock the Notifications