ಉಕ್ರೇನ್ ಮತ್ತು ರಷ್ಯಾ ಯುದ್ಧ 5ನೇ ವರ್ಷಕ್ಕೆ ಎಂಟ್ರಿ, ಶಾಂತಿ ಎನ್ನುವುದೇ ಅನುಮಾನ | Ukraine Issue
ಅದು 2022 ಫೆಬ್ರವರಿ 24 ಗುರುವಾರ, ಅಂದು ರಷ್ಯಾ ಮತ್ತು ಉಕ್ರೇನ್ ನಡುವೆ ದೊಡ್ಡ ಬೆಂಕಿ ಕಿಡಿ ಹೊತ್ತಿಕೊಂಡಿತ್ತು. ಉಕ್ರೇನ್ ತಮ್ಮ ಮಾತು ಕೇಳದೆ ನ್ಯಾಟೋ ಒಕ್ಕೂಟ ಸೇರಿ ಪಾಶ್ಚಿಮಾತ್ಯ ದೇಶಗಳ ಜೊತೆಗೆ ನಿಲ್ಲುತ್ತಿದೆ ಎಂಬ ಆರೋಪ ಮಾಡಲಾಗಿತ್ತು. ಇದೇ ಕಾರಣಕ್ಕೆ ರಷ್ಯಾ ನೇರವಾಗಿ ಉಕ್ರೇನ್‌ನ ಮೇಲೆ ದಾಳಿ ಶುರು ಮಾಡಿತ್ತು, ಆ ಮೂಲಕ ಘೋರ ಯುದ್ಧವೇ ಶುರುವಾಗಿ ಲಕ್ಷಾಂತರ ಜನ ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗೆ 2022 ಫೆಬ್ರವರಿ 24ಕ್ಕೆ ಶುರುವಾಗಿದ್ದ ಉಕ್ರೇನ್ ಮತ್ತು ರಷ್ಯಾ ಯುದ್ಧ ಇದೀಗ 5ನೇ ವರ್ಷಕ್ಕೆ ಎಂಟ್ರಿ ಕೊಟ್ಟಿದೆ. ಹಾಗಾದರೆ ಈ ಯುದ್ಧ ನಿಲ್ಲುವುದು ಯಾವಾಗ? ಈ ಯುದ್ಧ ನಿಲ್ಲಿಸುವ ಬಗ್ಗೆ ಉಕ್ರೇನ್ ಮತ್ತು ರಷ್ಯಾ ನಿಲುವು ಏನು? ಬನ್ನಿ ತಿಳಿಯೋಣ.
ಹೌದು, ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ನಿಲ್ಲಿಸಲು ಏನೆಲ್ಲಾ ಪ್ರಯತ್ನ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ. ರಷ್ಯಾ & ಉಕ್ರೇನ್ ಯುದ್ಧ ಜ್ವಾಲೆ ದಿನದಿಂದ ದಿನಕ್ಕೆ ಮತ್ತಷ್ಟು ಜೋರಾಗುತ್ತಾ ಧಗಧಗಿಸುತ್ತಾ ಇದೆ. ಹೀಗೆ ರಷ್ಯಾ & ಉಕ್ರೇನ್ ಬಡಿದಾಡುತ್ತಿದ್ರೆ ಅತ್ತ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಈ ಯುದ್ಧ ನಿಲ್ಲಿಸಿಯೇ ತೀರಬೇಕು ಎಂಬ ಗುರಿ ಇಟ್ಟುಕೊಂಡು ಶಾಂತಿ ಒಪ್ಪಂದಕ್ಕೆ ಪ್ರಯತ್ನ ಮಾಡುತ್ತಾ ಇದ್ದಾರೆ. ಆದರೆ ಒಂದು ಕಡೆ ಅಮೆರಿಕ ಶಾಂತಿ ಒಪ್ಪಂದಕ್ಕೆ ಪ್ರಯತ್ನ ಮಾಡುತ್ತಿದ್ದರೆ, ಇನ್ನೊಂದೆಡೆ ಉಕ್ರೇನ್ ವಿರುದ್ಧ ಭೀಕರ ದಾಳಿ ಆರಂಭಿಸಿರುವ ರಷ್ಯಾ ಸೇನೆ ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ ಎಂಬ ಆರೋಪ ಇದೆ. ಹಾಗೇ ಉಕ್ರೇನ್ ಕೂಡ ತಾನು ಏನು ಕಮ್ಮಿ ಇಲ್ಲ ಎಂದು ಮರು ದಾಳಿಯ ನಡೆಸುತ್ತಿದೆ.

ಉಕ್ರೇನ್ ದೇಶಕ್ಕೆ ಮೈತುಂಬಾ ಸಾಲ
ರಷ್ಯಾ 2022ರಲ್ಲಿ ಯುದ್ಧ ಶುರು ಮಾಡಿದಾಗ ರೊಚ್ಚಿಗೆದ್ದು ಮರುದಾಳಿ ಆರಂಭಿಸಿ ತಾನು ಗೆದ್ದೇ ಗೆಲ್ಲುವೆ ಎಂದು ಗುಟುರು ಹಾಕಿತ್ತು ಉಕ್ರೇನ್ ಮಿಲಿಟರಿ. ಆದರೆ ಈಗ ರಷ್ಯಾ ಸೇನೆ ವಿರುದ್ಧ ಗೆಲ್ಲುವ ಮಾತು ಬಿಡಿ, ಉಕ್ರೇನ್ ಸೇನೆಗೆ ಜೀವ ಉಳಿಸಿಕೊಳ್ಳುವುದು ಕೂಡ ಕಷ್ಟ ಆಗಿದೆ. ಹೀಗಾಗಿ, ನ್ಯಾಟೋ ದೇಶಗಳು ಉಕ್ರೇನ್ ಗಡಿಯಲ್ಲಿ ಭಾರಿ ಪ್ರಮಾಣದಲ್ಲಿ ಸಹಾಯ ಹಸ್ತ ಚಾಚುತ್ತಿವೆ. ಇದರ ಜೊತೆಗೆ ಉಕ್ರೇನ್ ಮಾಡಿಕೊಂಡಿದ್ದ ಸಾಲಗಳ ಪ್ರಮಾಣ ಕೂಡ ಹೆಚ್ಚಾಗುತ್ತಿದೆ. ಈ ಎಲ್ಲಾ ಕಾರಣಕ್ಕೆ ಕೊನೆಗೂ ಯುದ್ಧ ನಿಂತರೆ ಸಾಕಪ್ಪಾ ಎಂಬ ನಿಲುವಿಗೆ ಬಂದಿದೆ ಉಕ್ರೇನ್. ಇನ್ನೊಂದು ಕಡೆ ರಷ್ಯಾ ಸೇನೆ ತನ್ನ ಶತ್ರು ಉಕ್ರೇನ್ ವಿರುದ್ಧ, ಭಯಾನಕ ಅಸ್ತ್ರಗಳನ್ನು ಬಳಸಿ ದಾಳಿ ಮಾಡುತ್ತಿದೆ.












Click it and Unblock the Notifications