Russia & Ukraine: ರಷ್ಯಾ ಕೊಡುತ್ತಿರುವ ಏಟಿಗೆ ಮಕಾಡೆ ಮಲಗುತ್ತಿದೆ ಉಕ್ರೇನ್!

ಉಕ್ರೇನ್ & ರಷ್ಯಾ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಬ್ರೇಕ್ ಬೀಳುತ್ತಿಲ್ಲ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಕ್ಕಾ ಪ್ಲಾನ್ ಮಾಡಿ ಉಕ್ರೇನ್ ಸೇನೆಯನ್ನು ಖೆಡ್ಡಾಗೆ ಬೀಳಿಸಿದ್ದಾರೆ. ಹೀಗೆ ಹಳ್ಳಕ್ಕೆ ಬಿದ್ದಿರುವ ಉಕ್ರೇನ್ ಮಿಲಿಟರಿಗೆ ಬೆನ್ನೆಲುಬಾಗಿ ನಿಲ್ಲುವ ದೇಶವೂ ಇಲ್ಲ. ಅತ್ತ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿ ಬಂದಿರುವುದು ಕೂಡ ಉಕ್ರೇನ್‌ಗೆ ದೊಡ್ಡ ಆಘಾತ ನೀಡಿದೆ. ಹೀಗಿದ್ದಾಗಲೇ ರಷ್ಯಾ ಕೂಡ ದೊಡ್ಡ ಮಟ್ಟದಲ್ಲಿ ಅಟ್ಯಾಕ್ ಮಾಡುತ್ತಿದೆ.

ರಷ್ಯಾ ಮಿಲಿಟರಿ ಬಳಿ ಇರುವ ಅಸ್ತ್ರಗಳು ಒಂದೊಂದಲ್ಲ, ರಷ್ಯಾ ತನ್ನಲ್ಲಿ ಇರುವ ಭಯಾನಕ ವೆಪನ್ಸ್ ಹೊರಗೆ ತೆಗೆದರೆ ಆಗುವುದೇ ಬೇರೆ. ಯಾಕಂದ್ರೆ ರಷ್ಯಾ ಬಳಿ ಆ ರೀತಿಯ ಅಸ್ತ್ರಗಳು ಕೊಳೆಯುತ್ತಿವೆ. ಹೀಗಿದ್ದರೂ, ಇಷ್ಟು ದಿನಗಳ ಕಾಲ ಸಾಮಾನ್ಯ ಅಸ್ತ್ರಗಳನ್ನು ಬಳಸಿ ದಾಳಿ ಮಾಡುತ್ತಿತ್ತು ರಷ್ಯಾ ಸೇನೆ. ಆದರೆ ಯಾವಾಗ ರಷ್ಯಾ ವಿರುದ್ಧ ಉಕ್ರೇನ್ ದೂರಗಾಮಿ ಕ್ಷಿಪಣಿ ಬಳಕೆ ಮಾಡಿ ದಾಳಿ ಮಾಡಿತ್ತೋ, ಅಲ್ಲಿಂದಲೇ ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗಿತ್ತು!

Ukraine Is Suffering More In The War Against Russia

ರಷ್ಯಾ ಕೊಡುತ್ತಿರುವ ಏಟಿಗೆ ಉಕ್ರೇನ್ ಮಕಾಡೆ!

ಹೌದು, ಉಕ್ರೇನ್‌ನ ವಿದ್ಯುತ್ & ನೀರು ಸರಬರಾಜು, ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯ ವ್ಯವಸ್ಥೆಗಳನ್ನ ಚಿಂದಿ ಉಡಾಯಿಸಿದೆ ರಷ್ಯಾ. ಹೀಗಾಗಿ ಉಕ್ರೇನ್ ಸಂಪೂರ್ಣವಾಗಿ ಕುಸಿದು ಹೋಗುತ್ತಿದ್ದು, ಮುಂದಿನ ಪರಿಸ್ಥಿತಿ ಇನ್ನಷ್ಟ ಭಯಾನಕವಾಗಿ ಇರಲಿದೆಯಾ? ಎಂಬ ಪ್ರಶ್ನೆ ಈಗ ಮೂಡಿದೆ. ಮತ್ತೊಂದು ಕಡೆ ರಷ್ಯಾ ಅಧ್ಯಕ್ಷರಾದ ವ್ಲಾದಿಮಿರ್ ಪುಟಿನ್ ರಷ್ಯಾ ಸೇನೆ ಇನ್ನಷ್ಟು ಜೋರಾಗಿ ದಾಳಿ ಮಾಡಬೇಕು ಎಂಬ ಆದೇಶ ನೀಡಿದ್ದಾರೆ, ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇನ್ನೊಂದು ಕಡೆ ಉಕ್ರೇನ್‌ಗೆ ಅಮೆರಿಕ ಅನುದಾನ ನೀಡಿದರೂ ಪರಿಸ್ಥಿತಿ ಸರಿಯಾಗುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+