ರಷ್ಯಾ ಸೇನೆ ಅಬ್ಬರಕ್ಕೆ ಉಕ್ರೇನ್ ಅರಣ್ಯದಲ್ಲಿ ಘೋರ ಬೆಂಕಿ!
ರಷ್ಯಾ ಸೇನೆ ಉಕ್ರೇನ್ ವಿರುದ್ಧ ತನ್ನ ಘೋರ ದಾಳಿಯ ಮತ್ತೊಂದು ಮುಖ ತೋರಿಸುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರ ದಾಳಿ ನಡೆಸುತ್ತಿರುವ ರಷ್ಯನ್ ಮಿಲಿಟರಿ, ಈಗ ನೇರ ಅರಣ್ಯ ಪ್ರದೇಶವನ್ನೂ ಬಿಡದೆ ಅಟ್ಯಾಕ್ ಮಾಡಿದೆ. ಹೀಗೆ ಉಕ್ರೇನ್ ಅರಣ್ಯದಲ್ಲಿ ಬಿದ್ದಿರುವ ಸ್ಫೋಟಕದ ಪರಿಣಾಮ ಕಾಡಿಗೆ ಬೆಂಕಿ ಹೊತ್ತಿದೆ ಎಂದು ಆರೋಪ ಮಾಡಲಾಗಿದೆ. ಹೀಗಾಗಿ ಸಾವಿನ ಪ್ರಮಾಣ ಕಡಿಮೆ ಇದ್ದರೂ, ಹಲವರು ಗಾಯಗೊಂಡು ಇದೀಗ ಆಸ್ಪತ್ರೆ ಸೇರುವಂತೆ ಆಗಿದೆ. ಇದು ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗುವಂತೆ ಮಾಡಿದೆ.
ಒಂದೋ ಉಕ್ರೇನ್ ಸೋತು ಓಡಿ ಹೋಗಬೇಕು, ಇಲ್ಲವಾದರೆ ಉಕ್ರೇನ್ ಸಂಪೂರ್ಣ ನಾಶವೇ ಆಗಬೇಕು ಎಂಬುದು ರಷ್ಯಾ ಸೇನೆಯ ನಿರ್ಧಾರ ಎಂಬಂತೆ ಕಾಣುತ್ತಿದೆ. ಯಾಕಂದ್ರೆ ಇದೀಗ ರಷ್ಯಾ ಮಿಲಿಟರಿ ಆ ರೇಂಜ್‌ಗೆ ದಾಳಿ ಮಾಡುತ್ತಿದೆ. ಇಷ್ಟುದಿನ ಜನ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುತ್ತಿದ್ದ ರಷ್ಯಾ ಮಿಲಿಟರಿ ಇದೀಗ ತನ್ನ ಯುದ್ಧದ ಮಾದರಿಯನ್ನೇ ಬದಲಾಯಿಸಿ ಮುಂದೆ ನುಗ್ಗುತ್ತಿರುವ ರೀತಿ ಕಾಣುತ್ತಿದೆ. ಇದೇ ಕಾರಣಕ್ಕೆ ಭಯ ಕೂಡ ಆವರಿಸಿದ್ದು, ಯಾವ ಪರಿಸ್ಥಿತಿಯಲ್ಲಿ ಏನಾಗುತ್ತೋ? ಎಂಬ ಆತಂಕ ಕೂಡ ಆವರಿಸಿದೆ. ಹೀಗಿದ್ದಾಗಲೇ ರಷ್ಯಾ ಸೇನೆ ನಡೆಸಿದ ದಾಳಿಯಲ್ಲಿ ಉಕ್ರೇನ್ ಕಾಡಿಗೆ ಬೆಂಕಿ ಬಿದ್ದಿದೆ.

ಐಯೋ ಕಾಪಾಡಿ ಅಂತಿದ್ದಾರೆ ಜನ
ರಷ್ಯಾ ಮಿಲಿಟರಿ ಉಕ್ರೇನ್ ವಿರುದ್ಧ ದಾಳಿಗೆ ಅತ್ಯಾಧುನಿಕ ತಂತ್ರಜ್ಞಾನ ಇರುವ ಬಾಂಬ್ & ಮಿಸೈಲ್ ಬಳಕೆ ಮಾಡುತ್ತಿದೆ. ಇದರ ಜೊತೆಗೆ ಡ್ರೋನ್‌ಗಳ ಸಂಖ್ಯೆ ಕೂಡ ಲಕ್ಷ ಲಕ್ಷ ಇದೆ ಎಂಬ ಆರೋಪ ಇದೆ. ಮತ್ತೊಂದು ಕಡೆ ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ಇದೀಗ ಉಕ್ರೇನ್‌ಗೆ ಅದೆಷ್ಟೇ ಬೆಂಬಲ ನೀಡಿದರೂ ಅದು ವರ್ಕೌಟ್ ಆಗುತ್ತಿಲ್ಲ. ಹೀಗಾಗಿ ರಷ್ಯಾದಿಂದ ನಿರಂತರ & ಘೋರ ದಾಳಿ ನಡೆಯುತ್ತಿದೆ. ಹೀಗೆ ರಷ್ಯಾ ಇದೀಗ ಉಕ್ರೇನ್ ವಿರುದ್ಧ ನಡೆಸಿದ ಭೀಕರ ದಾಳಿಯಲ್ಲಿ ಕಾಡಿಗೆ ಬೆಂಕಿ ಬಿದ್ದಿದ್ದು, ಪರಿಸ್ಥಿತಿ ಕೈಮೀರಿ ಹೋಗುತ್ತಿದೆ. ಅಲ್ಲದೆ ಈ ರೀತಿ ರಷ್ಯಾ ದಾಳಿ ಮಾಡುತ್ತಿರುವ ಕಾರಣಕ್ಕೆ ಉಕ್ರೇನ್ ಪ್ರಜೆಗಳು ಕೂಡ ಬೆಚ್ಚಿಬಿದ್ದಿದ್ದಾರೆ.
ಅಮೆರಿಕದ ಬೆಂಬಲ ಕೋರಿದ ಉಕ್ರೇನ್
ಉಕ್ರೇನ್ ವಾಯುಪಡೆಯು ರಷ್ಯಾದ ಎಲ್ಲ ಡ್ರೋನ್ ಮತ್ತು ಕ್ಷಿಪಣಿಗಳನ್ನು ಹೊಡೆದುರುಳಿಸಿದೆ, ಅಲ್ಲದೆ ಈ ಬಗ್ಗೆ ಹೈಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹೀಗಿದ್ದರೂ ರಷ್ಯಾ ಕೊಡುತ್ತಿರುವ ಏಟಿಗೆ ಉಕ್ರೇನ್ ನರಳಿ ಹೋಗಿದೆ. ಉಕ್ರೇನ್‌ನ ಕ್ರೀವಿ ರಿಹ ಈಗ ರಷ್ಯಾ ಮಿಲಿಟರಿ ನಡೆಸುತ್ತಿರುವ ಡೆಡ್ಲಿ ಅಟ್ಯಾಕ್‌ಗೆ ನಲುಗಿ ಹೋಗಿದೆ. ಹೀಗಿದ್ದಾಗಲೇ ಅರಣ್ಯದಲ್ಲಿ ಕೂಡ ಬೆಂಕಿ ಹೊತ್ತಿಕೊಂಡ ಪರಿಣಾಮ ಪರಿಸರಕ್ಕೂ ಭಾರಿ ಹಾನಿ ಆಗುತ್ತಿದೆ ಎನ್ನುವ ಭಾರಿ ಗಂಭೀರ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ನಮಗೆ ಇನ್ನಷ್ಟು ಬೆಂಬಲ ನೀಡಿ, ಈ ಮೂಲಕ ನಾವು ಕೂಡ ರಷ್ಯಾಗೆ ತಕ್ಕ ಉತ್ತರ ಕೊಡಲು ಸಾಧ್ಯ ಎನ್ನುತ್ತಿದೆ ಉಕ್ರೇನ್.












Click it and Unblock the Notifications