ಚಳಿಯಲ್ಲಿ ನಡುಗುತ್ತಿರುವ ಉಕ್ರೇನ್ ಜನರು, ರಷ್ಯಾ ದಾಳಿಯಿಂದ ಕೈಕೊಟ್ಟಿರುವ ವಿದ್ಯುತ್ ಹಾಗೂ ಮೂಲಸೌಕರ್ಯ ವ್ಯವಸ್ಥೆ

ಉಕ್ರೇನ್ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಯುದ್ಧ ಅನ್ನೋ ಮಾತನ್ನು ಹೇಳಿರಬಾರದು, ಅದೇ ರೀತಿ ದೊಡ್ಡದಾಗಿ ದಾಳಿ ಮಾಡುತ್ತಿದೆ ರಷ್ಯಾ. ಇಷ್ಟಾದರೂ ಉಕ್ರೇನ್ ಮಾತ್ರ ರಷ್ಯಾ ಎದುರು ಮಾತುಕತೆಗೆ ಸಿದ್ಧವಾಗುತ್ತಿಲ್ಲ, ಶಾಂತಿ ಮಾತುಕತೆಗೆ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನವನ್ನು ಪಡುತ್ತಿದ್ದರೂ ಅದು ಯಶಸ್ಸು ಕಾಣುತ್ತಿಲ್ಲ. ಇದರ ಪರಿಣಾಮ ರಷ್ಯಾ ಸೇನೆಯಿಂದ ಘೋರ ದಾಳಿ, ಹಿಂಸಾತ್ಮಕ ಕ್ರಮಗಳು ಮುಂದುವರಿದಿದೆ. ಹೀಗೆ ಉಕ್ರೇನ್ ಅಧ್ಯಕ್ಷ ಹಾಗೂ ರಷ್ಯಾ ಅಧ್ಯಕ್ಷರ ನಡುವಿನ ಈ ಜಿದ್ದಿಗೆ ಸಾಮಾನ್ಯ ಜನರು ಬಲಿಯಾಗುವಂತೆ ಆಗಿದೆ. ಅದರಲ್ಲೂ ಉಕ್ರೇನ್ ದೇಶದಲ್ಲಿ ಭಾರಿ ಚಳಿ ಶುರುವಾಗಿದ್ದು, ಜನರು ನಲುಗಿ ಹೋಗಿದ್ದಾರೆ.

ಹೌದು, ಈಗಾಗಲೇ ರಷ್ಯಾ ಸೇನೆಯಿಂದ ನಡೆದಿರುವ ಘೋರ ದಾಳಿಯ ಪರಿಣಾಮ ಉಕ್ರೇನ್ ನೆಲದ ಮೂಲಸೌಕರ್ಯ ಹಾಳಾಗಿ ಹೋಗಿದೆ. ಅದರಲ್ಲೂ ವಿದ್ಯುತ್ ಸಂಪೂರ್ಣ ಕೈಕೊಟ್ಟಿರುವ ಪರಿಣಾಮ ಚಳಿಯಲ್ಲಿ ಬೆಚ್ಚಗೆ ಇರಲು ಜನರಿಗೆ ಸಾಧ್ಯವೇ ಆಗುತ್ತಿಲ್ಲ. ಇದರ ಪರಿಣಾಮ ಈಗಾಗಲೇ ನೂರಾರು ಸಮಸ್ಯೆ ಎದುರಿಸುತ್ತಿರುವ ಉಕ್ರೇನ್ ಪ್ರಜೆಗಳು ಚಳಿಯಲ್ಲಿ ಒದ್ದಾಡಿ ಹೋಗುತ್ತಿದ್ದಾರೆ. ಅದರಲ್ಲೂ ಈ ಪೈಕಿ ಉಕ್ರೇನ್‌ನ ಮಕ್ಕಳು ಕೂಡ ಥರಥರ ನಡುಗುವಂತೆ ಆಗಿದೆ. ಮುಂದೆ ಏನಪ್ಪಾ ಪರಿಸ್ಥಿತಿ? ಎಂಬ ವಾತಾವರಣ ನಿರ್ಮಾಣ ಆಗಿದೆ. ಲಕ್ಷಾಂತರ ಜನರ ಸಾವಿನ ನಡುವೆಯೂ ರಷ್ಯಾ & ಉಕ್ರೇನ್ ಯುದ್ಧದ ಆರ್ಭಟ ಮುಂದುವರಿದಿದೆ.

Ukraine Energy Security Under Russian Strikes Infrastructure Impacts

ಉಕ್ರೇನ್ ಇಂಧನ ಸಚವರಿಂದ ವಾರ್ನಿಂಗ್

ರಷ್ಯಾ ದಾಳಿ ಬಗ್ಗೆ ಉಕ್ರೇನ್‌ನ ನೂತನ ಇಂಧನ ಸಚಿವ ಡೆನಿಸ್ ಶ್ಮಿಹಾಲ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದು, ರಷ್ಯಾ ದಾಳಿ ಉಕ್ರೇನ್ ವಿದ್ಯುತ್ ಜಾಲ ದುರ್ಬಲಗೊಳಿಸಿದೆ. ಇದರಿಂದಾಗಿ ಪ್ರಜೆಗಳಿಗೆ ವಿದ್ಯುತ್ ಇಲ್ಲದೆ ಚಳಿಗಾಲದ ಹಿಮಪಾತದ ತಾಪಮಾನದಲ್ಲಿ ಸಾಕಷ್ಟು ತೊಂದರೆ ಉಂಟಾಗುವ ಭಾರಿ ದೊಡ್ಡ ಅಪಾಯ ಇದೆ. ಉಕ್ರೇನ್‌ನಲ್ಲಿ ಶತ್ರುಗಳು ದಾಳಿ ಮಾಡದ ಒಂದೇ ಒಂದು ವಿದ್ಯುತ್ ಸ್ಥಾವರವೂ ಉಳಿದಿಲ್ಲ. ರಾಜಧಾನಿ ಕೀವ್ ಹಾಗೂ ಡ್ನಿಪ್ರೊಪೆಟ್ರೋವ್ಸ್ಕ್, ಖಾರ್ಕಿವ್ ಮತ್ತು ಒಡೆಸ್ಸಾ ಪ್ರದೇಶಗಳಲ್ಲಿ ಅತ್ಯಂತ ಸವಾಲಿನ ಪರಿಸ್ಥಿತಿ ಇದೆ ಎಂದು ಶ್ಮಿಹಾಲ್ ಉಕ್ರೇನ್‌ನ ಪರಿಸ್ಥಿತಿ ಬಿಚ್ಚಿಟ್ಟಿದ್ದಾರೆ.

20 ದಿನಗಳಲ್ಲಿ ಇಂಧನ ಖಾಲಿ?

ಉಕ್ರೇನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇದ್ದು, ಅಲ್ಲಿ ಭಯಾನಕ ಚಳಿ ಎದುರಾಗುತ್ತದೆ. ಈ ಕಾರಣಕ್ಕೆ ಜನರು ಮನೆಗಳಲ್ಲಿ ಬೆಚ್ಚಗೆ ಇರಲು ವಿದ್ಯುತ್ ಹಾಗೂ ಅನಿಲ ಅಗತ್ಯತೆ ಇದ್ದೇ ಇರುತ್ತದೆ. ಆದರೆ ಯುದ್ಧದ ಕಾರಣಕ್ಕೆ ಅನಿಲ ಸರಬರಾಜು ಕೂಡ ನಿಂತಿದ್ದು, ವಿದ್ಯುತ್ ಈಗ ಕೈಕೊಟ್ಟಿದೆ. ಈ ಎಲ್ಲಾ ಕಾರಣಗಳಿಂದ ಜನರು ಚಳಿಯಲ್ಲಿ ಒದ್ದಾಡಿ ಹೋಗುತ್ತಿದ್ದಾರೆ.

ಪರಿಸ್ಥಿರಿ ಇದೇ ರೀತಿಯಾಗಿ ಮುಂದುವರಿದರೆ ಚಳಿ ಕಾರಣಕ್ಕೆ ಕೂಡ ಹೆಚ್ಚಿನ ಜನರ ಸಾವು ಆಗಬಹುದು, ಹೀಗಾಗಿ ಜನರಿಗೆ ಅಗತ್ಯ ಸೌಕರ್ಯ ಸಿಗುವಂತೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಇಂತಹ ಸಮಯದಲ್ಲೇ ಉಕ್ರೇನ್ ಜನರು ಬೆಚ್ಚಿಬೀಳುವ ಸುದ್ದಿ ಹೇಳಿದ್ದಾರೆ ಇಂಧನ ಸಚಿವರು, ಉಕ್ರೇನ್ ಬಳಿ ಇದೀಗ ಮುಂದಿನ 20 ದಿನಗಳ ತನಕ ಸಾಲುವಷ್ಟು ಇಂಧನ ಮಾತ್ರ ಬಾಕಿ ಉಳಿದಿದೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+