Ukraine: ಯುರೋಪ್ ಒಕ್ಕೂಟ ಸೇರಲು ಸಿದ್ಧವಾದ ಉಕ್ರೇನ್? ಝೆಲೆನ್ಸಿ ನೀಡಿದ ಸ್ಪಷ್ಟನೆ ಇಲ್ಲಿದೆ

ರಷ್ಯಾ ಜೊತೆಗೆ ಯುದ್ಧ ಮಾಡಿ ನರಳಾಡಿ ಹೋಗಿರುವ ಉಕ್ರೇನ್‌ಗೆ ಈಗ ಬದುಕಿದರೆ ಸಾಕು ಎನ್ನುವ ಪರಿಸ್ಥಿತಿ ಇದೆ. ಹೀಗಿದ್ದಾಗ ಉಕ್ರೇನ್ ಸಹಾಯಕ್ಕೆ ನಿಂತಿರುವುದು ಯುರೋಪ್ ಒಕ್ಕೂಟ ಮಾತ್ರ. ಈ ನಡುವೆ ಯುದ್ಧದಲ್ಲಿ ರಷ್ಯಾ ವಿರುದ್ಧ ಹೋರಾಡಲು ಶಸ್ತ್ರಾಸ್ತ್ರ ಕೊಡುತ್ತಿರುವುದೂ ಇದೇ ಯುರೋಪ್ ದೇಶಗಳು. ರಷ್ಯಾ ದಾಳಿ ಪರಿಣಾಮ ಮೂಲ ಸೌಕರ್ಯ ಹಾಳಾಗಿ ಹೋಗಿದ್ದು, ವಿದ್ಯುತ್ ಸಂಪರ್ಕವೇ ಇಲ್ಲದೆ ಉಕ್ರೇನ್ ನರಳಾಡಿ ಹೋಗಿದೆ. ಆದರೆ ಭವಿಷ್ಯದ ಬಗ್ಗೆ ಉಕ್ರೇನ್‌ಗೆ ಸಾಕಷ್ಟು ಆತಂಕ ಇದೀಗ ಎದುರಾಗಿದ್ದು, ಇಂತಹ ಸಮಯದಲ್ಲೇ ಯುರೋಪ್ ಒಕ್ಕೂಟ ಸೇರಲು ಸಿದ್ಧವಾದ ಉಕ್ರೇನ್?

ಉಕ್ರೇನ್ ಪರಿಸ್ಥಿತಿ ಹೀನಾಯವಾಗಿದ್ದು, ರಷ್ಯಾ ಜೊತೆ ಯುದ್ಧ ಮಾಡುತ್ತಾ ಮಾಡುತ್ತಾ ಇನ್ನೇನು ಎಲ್ಲಾ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಹೀಗಾಗಿಯೇ ಹೇಗಾದರೂ ಮಾಡಿ ಯುರೋಪ್ ಒಕ್ಕೂಟಕ್ಕೆ ಸೇರ್ಪಡೆ ಆದರೆ ಅದು ತನಗೆ ಭವಿಷ್ಯದಲ್ಲಿ ಸಹಾಯ ಮಾಡಬಹುದು ಎಂಬುದು ಉಕ್ರೇನ್ ಲೆಕ್ಕಾಚಾರ. ಆದರೆ ಈಗಾಗಲೇ ನ್ಯಾಟೋ ಒಕ್ಕೂಟಕ್ಕೆ ಸೇರಲು ಹೋಗಿ ಒಂದು ಯುದ್ಧದ ಪೆಟ್ಟು ತಿಂದಿರುವ ಉಕ್ರೇನ್‌ಗೆ ಇದು ಬೇಕಿತ್ತಾ? ಎಂಬ ಚರ್ಚೆಗಳು ಜೋರಾಗಿವೆ. ಆದರೆ ಈ ಬಗ್ಗೆ ಖುದ್ದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನೀಡಿರುವ ಉತ್ತರ ಮತ್ತೊಮ್ಮೆ ಇಡೀ ಜಗತ್ತಿನ ಗಮನ ಸೆಳೆದಿದೆ.

Ukraine

2027ರ ಒಳಗೆ ಯುರೋಪ್ ಒಕ್ಕೂಟಕ್ಕೆ ಉಕ್ರೇನ್?

ಮೊದಲೇ ಹೇಳಿದಂತೆ ಸಾಕಷ್ಟು ಅನಿವಾರ್ಯತೆಗಳ ನಡುವೆ ಆತುರದಲ್ಲಿ ಯುರೋಪ್ ಒಕ್ಕೂಟಕ್ಕೆ ಈ ಉಕ್ರೇನ್ ಸೇರಲು ಪ್ರಯತ್ನ ಮಾಡುತ್ತಿದೆ. ಇಲ್ಲವಾದರೆ ಬದಕಲು ಆಗುವುದೇ ಇಲ್ಲ ಎಂಬ ಸ್ಥಿತಿ ಈಗ ಉಕ್ರೇನ್ ನೆಲದಲ್ಲಿ ನಿರ್ಮಾಣ ಆಗಿದೆ. ಕೈಯಲ್ಲಿ ಹಣ ಇಲ್ಲ, ರಷ್ಯಾ ಜೊತೆಗೆ ಯುದ್ಧ ಮಾಡಿ ಮಾಡಿ ಇರುವ ಎಲ್ಲಾ ಸಂಪತ್ತು ನಾಶವಾಗಿ ಹೋಗಿದೆ. ಹೀಗಿದ್ದಾಗ ಭವಿಷ್ಯಕ್ಕೆ ಏನು ಮಾಡುವುದು? ಎಂಬ ಚಿಂತೆ ಕೂಡ ಕಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಯುರೋಪ್ ಒಕ್ಕೂಟಕ್ಕೆ ಉಕ್ರೇನ್ ಯಾವಾಗ ಸೇರ್ಪಡೆ ಆಗಲಿದೆ? ಎಂಬ ಪ್ರಶ್ನೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಉತ್ತರ ನೀಡಿದ್ದು, 2027ರ ಒಳಗೆ ಯುರೋಪ್ ಒಕ್ಕೂಟಕ್ಕೆ ಸೇರ್ಪಡೆ ಆಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ರಷ್ಯಾ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು?

ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಈ ಬಗ್ಗೆ ಮಾತನಾಡುತ್ತಾ, ಯುರೋಪ್ ಒಕ್ಕೂಟಕ್ಕೆ ಉಕ್ರೇನ್‌ ಪ್ರವೇಶದಿಂದ ನಮಗಷ್ಟೇ ಅಲ್ಲ ಇಡೀ ಯುರೋಪ್‌ಗೆ ಒಂದು ಪ್ರಮುಖ ಭದ್ರತಾ ಖಾತರಿ ಸಿಕ್ಕಂತಾಗಲಿದೆ ಎಂದಿದ್ದಾರೆ. ಇದು ಶೀಘ್ರದಲ್ಲೇ ಉಕ್ರೇನ್ ದೇಶವು ಯುರೋಪ್ ಒಕ್ಕೂಟ ಸೇರುವ ಬಗ್ಗೆ ಮುನ್ಸೂಚನೆ ನೀಡುತ್ತಿರುವ ರೀತಿ ಕಂಡಿದೆ. ಅಲ್ಲದೆ 2027ರ ಒಳಗೆ ಯುರೋಪ್ ಒಕ್ಕೂಟಕ್ಕೆ ಸೇರ್ಪಡೆ ಆಗುವ ಭರವಸೆಯಲ್ಲಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ. ಆದರೆ ರಷ್ಯಾ ಇದಕ್ಕೆ ಯಾವ ರೀತಿಯಲ್ಲಿ ಸ್ಪಂದಿಸುತ್ತದೆ? ಎಂಬುದೇ ಈಗ ಗಮನ ಸೆಳೆದಿದೆ. ಈಗಾಗಲೇ ಉಕ್ರೇನ್ ಯುದ್ಧ ಮಾಡಿ ಮಾಡಿ ಸೊರಗಿ ಹೋಗಿದೆ, ಭವಿಷ್ಯದಲ್ಲಿ ಜೀವನ ನಡೆಸುವುದೇ ಕಷ್ಟ ಎಂಬ ಪರಿಸ್ಥಿತಿ ಇದೆ. ಹೀಗಾಗಿ ಭವಿಷ್ಯದಲ್ಲಿ ಉಕ್ರೇನ್‌ಗೆ ಯುರೋಪ್ ದೇಶಗಳೇ ಅನಿವಾರ್ಯ ಆಗಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+