ನೇತಾಜಿ ಸಾವಿನ ಬಗ್ಗೆ ಬ್ರಿಟಿಷ್ ವೆಬ್ ಸೈಟ್ ಹೊರಹಾಕಿದ ಸತ್ಯವೇನು?
ಲಂಡನ್, ಜ. 10: ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ಎಲ್ಲ ಗೊಂದಲಗಳಿಗೆ ಮಹಾತ್ಮ ಗಾಂಧೀಜಿ ಕಾರಣ ಎಂಬ ಸುದ್ದಿ ಹೊರ ಬಂದ ಬೆನ್ನಲ್ಲೇ ನೇತಾಜಿ ಸುಭಾಷ್ ಚಂದ್ರಬೋಸ್ ನಿಗೂಢ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟಿಷ್ ವೆಬ್ ಸೈಟ್ ಮಹತ್ವ ವಿಷಯಗಳನ್ನು ಬಹಿರಂಗಪಡಿಸಿದೆ.
ತೈವಾನ್ನಲ್ಲಿ ಸಂಭವಿಸಿದ ವಿಮಾನ ದುರಂತ (ಆಗಸ್ಟ್ 18, 1945)ದ ಬಳಿಕವೂ ಕೆಲ ದಿನ ನೇತಾಜಿ ಬದುಕಿದ್ದರು ಎಂದು ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನು ಉಲ್ಲೇಖಿಸಿ ಬ್ರಿಟನ್ ವೆಬ್ಸೈಟ್ ಪ್ರಕಟಣೆ ಹೊರಡಿಸಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ವಿಮಾನ ದುರಂತದ ಬಳಿಕ ನೇತಾಜಿ ಬದುಕಿದ್ದರಾದರೂ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು.[ಕಡತದೊಳಗಿನ ಸತ್ಯ: ನೇತಾಜಿ 1945ರ ನಂತರವೂ ಬದುಕಿದ್ದರು]
ಹೀಗಾಗಿ ಅವರು ಆಸ್ಪತ್ರೆಯಲ್ಲೇ ಅಸುನೀಗಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ವೆಬ್ಸೈಟ್ನಲ್ಲಿ ದಾಖಲಾಗಿದೆ. ಆದರೆ, ನೇತಾಜಿ ಅವರ ಅಂತ್ಯಕ್ರಿಯೆ ವಿವರಗಳನ್ನು ಹೊರ ಹಾಕಿಲ್ಲ. ವಿಮಾನ ದುರಂತ ನಡೆದ ಸ್ಥಳಕ್ಕೆ ಬ್ರಿಟಿಷ್ ಗುಪ್ತಚರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಲೆ ಹಾಕಿದ ಮಾಹಿತಿ ಆಧಾರದ ಮೇಲೆ ಈ ವರದಿ ಪ್ರಕಟಿಸಲಾಗಿದೆ.[ಬೋಸ್ ಸಂಬಂಧಿಸಿದ 64 ರಹಸ್ಯ ಫೈಲ್ಸ್ ಬಹಿರಂಗ]
'ಭಾರತಕ್ಕೆ ವಾಪಸ್ ಹೋದ ಬಳಿಕ ನನ್ನ ಕೊನೆಯುಸಿರಿರುವ ತನಕ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತೇನೆ, ಹಿಂದುಸ್ತಾನ ಖಂಡಿತ ಸ್ವತಂತ್ರವಾಗಲಿದೆ' ಎಂಬುದು ಬಹುಶಃ ನೇತಾಜಿ ಅವರ ಕೊನೆ ವಾಕ್ಯ ಎಂದು ಬೋಸ್ ಫೈಲ್ಸ್. ಇನ್ಫೋ ವೆಬ್ ಸೈಟ್ ಹೇಳಿದೆ. ಇನ್ನಷ್ಟು ವಿವರ ಮುಂದೆ ಓದಿ...

ಜತೆಗಾರ ಹಬೀಬ್ ಉರ್ ರೆಹಮಾನ್ಗೆ ಹೇಳಿದ ಮಾತು
"Jab Apney Mulk Wapis Jayen To Mulki Bhaiyon Ko Batana Ki Mein Akhri Dam Tak Mulk Ki Azadi Ke Liyay Larta Raha Hoon; Woh Jangi Azadi Ko Jari Rakhen. Hindustan Zaroor Azad Hoga, Oos Ko Koi Gulam Nahin Rakh Sakta] ಎಂದು ನೇತಾಜಿ ತನ್ನ ಜತೆಗಾರ ಹಬೀಬ್ ಉರ್ ರೆಹಮಾನ್ಗೆ ಕೊನೆ ಬಾರಿ ಹೇಳಿದ್ದರು

ಘಟನೆ ದಿನ ನಡೆದಿದ್ದೇನು? ನೇತಾಜಿ ಉಳಿದಿದ್ದು ಹೇಗೆ?
ವೆಬ್ ಸೈಟ್ ಕಡತಗಳ ಪ್ರಕಾರ ಸುಭಾಷ್ಚಂದ್ರ ಬೋಸ್ ಜತೆ ಅವರ ಬೆಂಬಲಿಗರು ಮತ್ತು ವಿಮಾನ ಸಿಬ್ಬಂದಿ ಸೇರಿ 12ರಿಂದ 13 ಜನರಿದ್ದರು. 18 ಆಗಸ್ಟ್ 1945ರಲ್ಲಿ ಜಪಾನ್ ಸೇನಾ ಮುಖ್ಯಸ್ಥ ಲೆ.ಜ. ಸುನಮಸಾ ಶಿಡೈ ಕೂಡ ವಿಮಾನದಲ್ಲಿದ್ದರು. ಹಿಟೊ-ತೈಪೆ-ಡೇರನ್ ಮಾರ್ಗದ ಮೂಲಕ ಜಪಾನ್ ರಾಜಧಾನಿ ಟೊಕಿಯೊ ತಲುಪುವ ಕಾರ್ಯಕ್ರಮ ನಿಗದಿಯಾಗಿತ್ತು.

ಮುಂಭಾಗದಿಂದ ನೇತಾಜಿ ಹಾರಿ ಜೀವ ಉಳಿಸಿಕೊಂಡರು
ವಿಮಾನ ಟೇಕ್ ಆಫ್ ಆದ ಕೆಲ ಕ್ಷಣಗಳಲ್ಲೇ ದೊಡ್ಡ ಸ್ಫೋಟದೊಂದಿಗೆ ವಿಮಾನದ ಪ್ರೊಪೆಲರ್ ಕಳಚಿತು. ರನ್ ವೇ ನಿಂದ 100 ಮೀಟರ್ ದೂರದಲ್ಲಿ ವಿಮಾನ ಬೆಂಕಿಗೆ ಆಹುತಿಯಾಯಿತು. ವಿಮಾನದ ಮುಂಭಾಗದಿಂದ ನೇತಾಜಿ ಹಾರಿ ಜೀವ ಉಳಿಸಿಕೊಂಡರು. ಆದರೆ, ಬೆಂಕಿಗೆ ಅವರ ದೇಹದ್ ಭಾಗ ಸುಟ್ಟು ಹೋಗಿತ್ತು ಎಂದು ಬೋಸ್ ಜತೆ ಪ್ರಯಾಣಿಸುತ್ತಿದ್ದ ಕರ್ನಲ್ ಹಬೀಬ್ ಉರ್ ರೆಹಮಾನ್ ಹೇಳಿದ್ದಾರೆ.

ನೇತಾಜಿ ಸಾವಿನ ನಿಗೂಢತೆ- ಭಾರತಕ್ಕೆ ಸ್ವಾತಂತ್ರ್ಯ
ಘಟನೆಯಾದ 5 ತಿಂಗಳ ನಂತರ 1946ರ ಜನವರಿಯಲ್ಲಿ ಮಹಾತ್ಮಾ ಗಾಂಧೀಜಿ ಅವರು 'ನೇತಾಜಿ ಬದುಕಿದ್ದಾರೆ. ಸೂಕ್ತ ಸಮುಯದಲ್ಲಿ ನಮ್ಮ ಮುಂದೆ ಕಾಣಿಸಿಕೊಳ್ಳಲಿದ್ದಾರೆ' ಎಂಬ ಆಶಾಭಾವನೆ ವ್ಯಕ್ತಪಡಿಸುತ್ತಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಬಗ್ಗೆ ನೇತಾಜಿ ಹೇಳಿದ ಮಾತುಗಳು ಅಲ್ಲಲ್ಲಿ ಉಲ್ಲೇಖವಾಗುತ್ತದೆ. ಭಾರತ ಕೂಡಾ ಸ್ವಾತಂತ್ರ್ಯ ಪಡೆಯುವ ಹೊಸ್ತಿಲಲ್ಲಿರುತ್ತದೆ. ಈ ಸಂದರ್ಭದಲ್ಲಿ ಗೊಂದಲ ಸೃಷ್ಟಿಯಾಗಿದ್ದು ಹೇಗೆ ಇನ್ನೂ ತಿಳಿದಿಲ್ಲ.

ಗೊಂದಲ ಸೃಷ್ಟಿಸಿದ್ದು ಮಹಾತ್ಮಾ ಗಾಂಧೀಜಿಯೇ?
1946ರ ಮಾರ್ಚ್‌ನಲ್ಲಿ ಗಾಂಧೀಜಿ 'ಹರಿಜನ್' ಪತ್ರಿಕೆಯಲ್ಲಿ ' ನೇತಾಜಿ ಬದುಕಿರಬಹುದು ಅಂತಾ ತಮಗೆ ಭಾವನೆ ಬರುವುದು ಸಹಜ. ಅದರೆ, ನೇತಾಜಿ ಬದುಕಿರಬಹುದು ಎಂದಿದ್ದ ತಮ್ಮ ಮಾತನ್ನು ಮರೆತುಬಿಡಿ. ನೇತಾಜಿ ಬದುಕುಳಿದಿಲ್ಲ. ತಮ್ಮನ್ನೆಲ್ಲಾ ಅಗಲಿದ್ದಾರೆ.. ಎಂದು ದೇಶದ ಜನತೆಗೆ ಮನವಿ ಮಾಡುತ್ತಾರೆ. ಹೀಗಾಗಿ ನೇತಾಜಿ ಸಾವಿನ ನಿಗೂಢತೆ ಮುಂದುವರೆಯುತ್ತದೆ.
-
Gas Bill: ಇಡ್ಲಿ-ವಡೆ ಜೊತೆಗೆ ಗ್ಯಾಸ್ ಶುಲ್ಕ ವಿಧಿಸಿದ ರೆಸ್ಟೋರೆಂಟ್!: ದಂಗಾದ ಗ್ರಾಹಕರು, ಇಲ್ಲಿವೆ ನೋಡಿ ದರಗಳು -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ












Click it and Unblock the Notifications