ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಯುಕೆ ಆಂತರಿಕ ಸಚಿವ ಸ್ಥಾನಕ್ಕೆ ಬ್ರೆವರ್‌ಮನ್ ರಾಜೀನಾಮೆ

|
Google Oneindia Kannada News

ಲಂಡನ್, ಅಕ್ಟೋಬರ್ 20: ಯುನೈಟೆಡ್ ಕಿಂಗ್ ಡಮ್ ಸಚಿವೆ ಸುಯೆಲ್ಲಾ ಬ್ರೆವರ್‌ಮನ್ ಕೇವಲ 43 ದಿನಗಳಲ್ಲೇ ತಮ್ಮ ಆಂತರಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಬುಧವಾರ ಘೋಷಿಸಿದರು. ನಿಯಮಗಳ ಉಲ್ಲಂಘನೆ ಮತ್ತು ಸರ್ಕಾರದ ನಿರ್ದೇಶನದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು.

ಬ್ರೆವರ್‌ಮನ್ ಸ್ಥಾನಕ್ಕೆ ಮಾಜಿ ಸಾರಿಗೆ ಕಾರ್ಯದರ್ಶಿ ಗ್ರಾಂಟ್ ಶಾಪ್ಸ್ ಅನ್ನು ನೇಮಿಸಲಾಗಿದೆ. ಗೋವಾ ಮೂಲದ ತಂದೆ ಮತ್ತು ತಮಿಳು ಮೂಲದ ತಾಯಿಯ ಮಗಳಾದ ಬ್ರಾವರ್ ಮನ್, 43 ದಿನಗಳ ಹಿಂದೆ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಾಗ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು.

ಕೊಹಿನೂರ್ ವಜ್ರ ಮರಳಿ ಭಾರತಕ್ಕೆ ತರುವ ಬಗ್ಗೆ ಸರ್ಕಾರ ಹೇಳಿದ್ದೇನು?ಕೊಹಿನೂರ್ ವಜ್ರ ಮರಳಿ ಭಾರತಕ್ಕೆ ತರುವ ಬಗ್ಗೆ ಸರ್ಕಾರ ಹೇಳಿದ್ದೇನು?

ಬುಧವಾರ ಟ್ರಸ್‌ ಜೊತೆಗೆ ಮುಖಾಮುಖಿ ಸಭೆ ನಂತರ ಅವರು ಗೃಹ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಟ್ವಿಟರ್‌ಗೆ ಪೋಸ್ಟ್ ಮಾಡಿದ ರಾಜೀನಾಮೆ ಪತ್ರದಲ್ಲಿ, ಬ್ರೆವರ್‌ಮನ್, "ನನ್ನ ರಾಜೀನಾಮೆಯನ್ನು ನೀಡಲು ನಾನು ಅತ್ಯಂತ ವಿಷಾದವನ್ನು ವ್ಯಕ್ತಪಡಿಸುತ್ತೇನೆ," ಎಂದು ಹೇಳಿದ್ದಾರೆ.

UK interior minister Suella Braverman resigns

ಟ್ರಸ್‌ನ ಇಕ್ಕಟ್ಟಿನ ನಾಯಕತ್ವ ಬುಡಮೇಲು:

ಕಳೆದ ಶುಕ್ರವಾರ ವಜಾಗೊಂಡ ಕ್ವಾಸಿ ಕ್ವಾರ್ಟೆಂಗ್ ಅವರ ಸ್ಥಾನಕ್ಕೆ ಬಂದ ನೂತನ ಹಣಕಾಸು ಮುಖ್ಯಸ್ಥ ಜೆರೆಮಿ ಹಂಟ್ ಹೊಸ ಮಾರುಕಟ್ಟೆಯ ಅವ್ಯವಸ್ಥೆಯನ್ನು ತಪ್ಪಿಸಲು ಕಳೆದ ತಿಂಗಳು ಘೋಷಿಸಲಾಗಿದ್ದ ತನ್ನ ಎಲ್ಲಾ ಸಾಲ-ಇಂಧನ ತೆರಿಗೆ ಕಡಿತಗಳನ್ನು ರದ್ದುಗೊಳಿಸಿದರು. ಈ ಕ್ರಮವು ಟ್ರಸ್‌ನ ಇಕ್ಕಟ್ಟಿನ ನಾಯಕತ್ವವನ್ನು ಮತ್ತಷ್ಟು ಬುಡಮೇಲು ಮಾಡುವ ನಿರೀಕ್ಷೆಯಿದೆ.

ಸಂಸದೀಯ ಸಹೋದ್ಯೋಗಿಗೆ ಅಧಿಕೃತ ದಾಖಲೆ:

ಅದೇ ಪತ್ರದಲ್ಲಿ ಬ್ರೆವರ್‌ಮನ್ ತಮ್ಮ ನೀತಿಗೆ ಬೆಂಬಲವನ್ನು ಪಡೆಯುವ ಸಲುವಾಗಿ ತಮ್ಮ ವೈಯಕ್ತಿಕ ಇಮೇಲ್‌ನಿಂದ ಸಂಸದೀಯ ಸಹೋದ್ಯೋಗಿಗೆ ಅಧಿಕೃತ ದಾಖಲೆಯನ್ನು ಕಳುಹಿಸಿದ್ದಾರೆ. ಇದು "ನಿಯಮಗಳ ತಾಂತ್ರಿಕ ಉಲ್ಲಂಘನೆಯಾಗಿದೆ" ಎಂದು ಅವರು ಹೇಳಿದ್ದಾರೆ. ಬ್ರೇವರ್‌ಮನ್ ತಮ್ಮ ತಪ್ಪನ್ನು ಅರಿತು ಅದನ್ನು ಅಧಿಕೃತವಾಗಿ ಚಾನೆಲ್‌ಗಳಿಗೆ ವರದಿ ಮಾಡಿದ್ದಾರೆ, ಆದರೆ ರಾಜೀನಾಮೆ ನೀಡುವುದು ಸರಿಯಾದ ಕೆಲಸ ಎಂದು ತಿಳಿಸಿದ್ದಾರೆ.

English summary
K interior minister Suella Braverman resigns; former Transport Secretary Grant Shapps to replace her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X