• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UK-India Week 2022: 75 ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟನ್ ಸ್ಕಾಲರ್‌ಶಿಪ್

|
Google Oneindia Kannada News

ಲಂಡನ್, ಜುಲೈ 1: ಭಾರತ ಮತ್ತು ಬ್ರಿಟನ್ ದೇಶಗಳ ನಡುವಿನ ಸಂಬಂಧವನ್ನು ಆಚರಿಸಲು ಮತ್ತು ಗಟ್ಟಿಗೊಳಿಸಲು ನಡೆಸಲಾಗುತ್ತಿರುವ ಯುಕೆ-ಇಂಡಿಯಾ ವೀಕ್ ಕಾರ್ಯಕ್ರಮದ ಈ ವರ್ಷದ ಅವತರಣಿಗೆ ಮುಕ್ತಾಯದ ಹಂತದಲ್ಲಿದೆ. ಇಂದು ಶುಕ್ರವಾರ 2022ರ ಆವೃತ್ತಿಯ ಯುಕೆ-ಇಂಡಿಯಾ ವೀಕ್ ಕಾರ್ಯಕ್ರಮ ಮುಗಿಯುತ್ತಿದೆ.

ನಿನ್ನೆ ಗುರುವಾರ ನಡೆದ ಕಾರ್ಯಕ್ರಮದ ಮೂರನೇ ದಿನದಂದು ಹಲವು ಮಹತ್ವದ ಗೋಷ್ಠಿ, ಉಪನ್ಯಾಸ, ಚರ್ಚೆಗಳು ನಡೆದವು. ಮಂಗಳವಾರ ಆರಂಭವಾದ ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಸಾಂಸ್ಕೃತಿಕ ಸಂಬಂಧ, ವ್ಯಾವಹಾರಿಕ ಸಂಬಂಧ, ರಾಜಕೀಯ ಸಂಬಂಧ, ಸಾಮಾಜಿಕ ಸಂಬಂಧದ ಒಳಹೊರಗುಗಳನ್ನು ಆಳವಾಗಿ ಅವಲೋಕಿಸಲಾಗಿದೆ.

UK-India Week 2022 ಎರಡನೇ ದಿನ: ಹವಾಮಾನ ಬದಲಾವಣೆ ಸಮಸ್ಯೆ ಮತ್ತು ತಂತ್ರಜ್ಞಾನ ಪರಿಹಾರ ಬಗ್ಗೆ ಚರ್ಚೆUK-India Week 2022 ಎರಡನೇ ದಿನ: ಹವಾಮಾನ ಬದಲಾವಣೆ ಸಮಸ್ಯೆ ಮತ್ತು ತಂತ್ರಜ್ಞಾನ ಪರಿಹಾರ ಬಗ್ಗೆ ಚರ್ಚೆ

ಇಂಡಿಯಾ ಗ್ಲೋಬಲ್ ಫೋರಂ ಸಂಸ್ಥೆ ಪ್ರತೀ ವರ್ಷ ಈ ಕಾರ್ಯಕ್ರಮ ಆಯೋಜಿಸುತ್ತಿದೆ. ಎರಡೂ ದೇಶಗಳ ನಡುವಿನ ಬಾಂಧವ್ಯಕ್ಕೆ ೭೫ ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ವರ್ಷದ ಕಾರ್ಯಕ್ರಮದ ಥೀಮ್ ಆಗಿ ಮರುಕಲ್ಪನೆ (ರೀಇಮ್ಯಾಜಿನ್@೭೫) ಎಂದು ಇಟ್ಟುಕೊಳ್ಳಲಾಗಿದೆ.

75 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್

ಇದೇ ವೇಳೆ ಬ್ರಿಟನ್ ಸರಕಾರ 75 ಭಾರತೀಯ ವಿದ್ಯಾರ್ಥಿಗಳಿಗೆ ಬ್ರಿಟನ್‌ನಲ್ಲಿ ಓದು ಪೂರ್ಣ ಸ್ಕಾಲರ್ಶಿಪ್ ವ್ಯವಸ್ಥೆ ಮಾಡುವುದಾಗಿ ಘೋಷಣೆ ಮಾಡಿದೆ. ಬ್ರಿಟನ್ ಸರಕಾರದೊಂದಿಗಿನ ಸಹಭಾಗಿತ್ವದಲ್ಲಿ ಹೆಚ್‌ಎಸ್‌ಬಿಸಿ ಇಂಡಿಯಾ, ಹಿಂದೂಸ್ತಾನ್ ಯುನಿಲಿವರ್, ಟಾಟಾ ಸನ್ಸ್, ಪಿಯರ್ಸನ್ ಇಂಡಿಯಾ ಮೊದಲಾದ ಸಂಘ ಸಂಸ್ಥೆಗಳು ಈ ಯೋಜನೆಯಲ್ಲಿ ಕೈ ಜೋಡಿಸಿವೆ.

75 ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುತ್ತಿರುವ ವಿಚಾರವನ್ನು ಬ್ರಿಟನ್‌ನ ರಾಯಭಾರಿ ಅಲೆಕ್ಸ್ ಎಲಿಸ್ ತಿಳಿಸಿದ್ದಾರೆ. "ಬ್ರಿಟನ್‌ನಲ್ಲಿ ಅತ್ಯುತ್ತಮ ಶಿಕ್ಷಣದ ಅನುಭವ ಪಡೆಯಲು 75 ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪ್ರಕಟಿಸುತ್ತಿದ್ದೇವೆ. ಇವರಲ್ಲಿ ಶೇ. 30ರಷ್ಟು ಮಕ್ಕಳು ಸಣ್ಣ ನಗರಗಳಿಂದ ಬಂದರಾಗಿದ್ಧಾರೆ" ಎಂದು ಅವರು ಹೇಳಿದ್ದಾರೆ.

UK-India Week 2022 Day 3: Scholarship Project for Indian Students Announced

ಫ್ರೀ ಟ್ರೇಡ್ ಅಗ್ರೀಮೆಂಟ್

ಭಾರತ ಮತ್ತು ಬ್ರಿಟನ ದೇಶಗಳ ಮಧ್ಯೆ ಮುಕ್ತ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಮಾತುಕತೆ ನಡೆಯುತ್ತಿದೆ. ಈ ವಿಚಾರವು ಯುಕೆ-ಇಂಡಿಯಾ ವೀಕ್ ಸಮಾವೇಶದಲ್ಲಿ ಪ್ರತಿಧ್ವನಿಸಿದೆ. ಈ ಬಗ್ಗೆ ಬ್ರಿಟನ್ ದೇಶದ ಮಾಜಿ ವಿದೇಶಾಂಗ ಕಾರ್ಯದರ್ಶಿ ಸರ್ ಮಾಲ್ಕಂ ರಿಫ್‌ಕೈಂಡ್ ಜೊತೆ ಸಂವಾದದಲ್ಲಿ ಭಾಗಿಯಾಗಿದ್ದ ಭಾರತದ ವಿದೇಶಾಂಗ ಸಚಿವಾಲಯದ ನೀತಿ ಸಲಹೆಗಾರ ಅಶೋಕ್ ಮಲಿಕ್ ಮಾತನಾಡಿದರು.

UK-India Week 2022, ಲಂಡನ್‌ನಲ್ಲಿ ವಜ್ರಮಹೋತ್ಸವ ಆರಂಭUK-India Week 2022, ಲಂಡನ್‌ನಲ್ಲಿ ವಜ್ರಮಹೋತ್ಸವ ಆರಂಭ

"ಬ್ರಿಟನ್ ಜೊತೆ ನಾವು ಚರ್ಚಿಸುತ್ತಿರುವ ಮುಕ್ತ ವ್ಯಾಪಾರ ಒಪ್ಪಂದವು ನಮ್ಮ ಕೆಲ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸಲು ನೆರವಾಗಬಹುದು. ಬ್ರಿಟನ್ ಬಳಿ ಪರಿಣಿತಿ ಇದೆ. ಭಾರತದಲ್ಲಿ ಅಗಾಧತೆ ಇದೆ. ಎರಡೂ ಒಟ್ಟಿಗೆ ಸೇರಿದರೆ ಬಹಳಷ್ಟು ಸಾಧಿಸಬಹುದು" ಎಂದು ಅಶೋಕ್ ಮಲಿಕ್ ಆಶಿಸಿದ್ದಾರೆ.

ಮಹಿಳಾ ನಾಯಕತ್ವ

ಯುಕೆ ಇಂಡಿಯಾ ವೀಕ್ ಸಮಾವೇಶದ ಮೂರನೇ ದಿನದಂದು ಮಹಿಳಾ ನಾಯಕತ್ವದ ವಿಚಾರಗಳು ಚರ್ಚೆಗೆ ಬಂದವು. ಭಾರತ ಮತ್ತು ಬ್ರಿಟನ್ ವ್ಯವಹಾರದಲ್ಲಿ ಮಹಿಳಾ ನಾಯಕರ ಕೊಡುಗೆಗಳನ್ನು ಸ್ಮರಿಸಲಾಯಿತು. ಯುಕೆ ಮಂಚ್‌ನ ಸಹ ಸಂಸ್ಥಾಪಕಿ ಮೀರಾ ಕೌಶಿಕ್, ಹೂಡಿಕೆ ಉದ್ಯಮಿ ಪ್ರಿಯಾಂಕಾ ಗಿಲ್, ತಾಜ್ ಲಂಡನ್‌ನ ಮೆಹರ್‌ನವಾಜ್ ಆವರಿ ಮೊದಲಾದ ಮಹಿಳಾ ನಾಯಕಿಯರು ಪಾಲ್ಗೊಂಡರು.

ಪ್ರಮುಖ ಭಾಷಣಕಾರರು ಸಮಾವೇಶದಲ್ಲಿ ಮಾತನಾಡಿದ ಪ್ರಮುಖರು

ಮಾಜಿ ಕೇಂದ್ರ ಸಚಿವ ಶಶಿ ತರೂರ್, ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್, ಬ್ರಿಟನ್ ಹಣಕಾಸು ಸಚಿವರು ಮೊದಲಾದವರು ಈ ಸಮಾವೇಶದ ಮುಖ್ಯ ಭಾಷಣಕಾರರಾಗಿದ್ದಾರೆ.
* ರಿಷಿ ಸುಣಕ್, ಬ್ರಿಟನ್ ಸರಕಾರದ ಹಣಕಾಸು ಸಚಿವ
* ಡಾ. ಎಸ್ ಜೈಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ
* ಸಾಜಿದ್ ಜಾವಿದ್, ಬ್ರಿಟನ್‌ನ ಆರೋಗ್ಯ ಮತ್ತು ಸಾಮಾಜಿಕ ಪೋಷಣೆ ವಿಭಾಗದ ಕಾರ್ಯದರ್ಶಿ
* ಡಾ. ಮನಸುಖ್ ಮಾಂಡವೀಯ, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
* ಧರ್ಮೇಂದ್ರ ಪ್ರಧಾನ್, ಕೇಂದ್ರ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಖಾತೆಗಳ ಸಚಿವ
* ಭೂಪೇಂದ್ರ ಯಾದವ್, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ, ಪರಿಸರ, ಅರಣ್ಯ, ಹವಾಮಾವ ಬದಲಾವಣೆ ಖಾತೆಗಳ ಸಚಿವ
* ಡಾ. ರಾಜೀವ್ ಚಂದ್ರಶೇಖರ್, ಕೇಂದ್ರ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಐಟಿ ರಾಜ್ಯ ಖಾತೆಗಳ ಸಚಿವ
* ಅರ್ಜುನ್ ರಾಮ್ ಮೇಘವಾಲ್, ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ
* ಅಲೋಕ್ ಶರ್ಮಾ, ಸಿಒಪಿ 26ನ ಅಧ್ಯಕ್ಷ
* ಲಾರ್ಡ್ ಜೆರಿ ಗ್ರಿಮ್‌ಸ್ಟೋನ್, ಬ್ರಿಟನ್‌ನ ಹೂಡಿಕೆ ಸಚಿವ
* ಆನ್-ಮೇರೀ ಟ್ರೆವೆಲಯಾನ್, ಬ್ರಿಟನ್‌ನ ಅಂತಾರಾಷ್ಟ್ರೀಯ ವ್ಯಾಪಾರ ಇಲಾಖೆ ಕಾರ್ಯದರ್ಶಿ, ಮತ್ತು ವ್ಯಾಪಾರ ಮಂಡಳಿ ಅಧ್ಯಕ್ಷೆ
* ಬಿಲ್ ವಿಂಟರ್ಸ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್‌ನ ಗ್ರೂಪ್ ಚೀಫ್ ಎಕ್ಸಿಕ್ಯೂಟಿವ್
* ಆರಿಯಾನಾ ಹಫಿಂಗ್ಟನ್, ಥ್ರೈವ್ ಕಂಪನಿಯ ಸಂಸ್ಥಾಪಕಿ ಮತ್ತು ಸಿಇಒ
* ಹರ್ಮೀನ್ ಮೆಹತಾ, ಬ್ರಿಟಿಷ್ ಟೆಲಿಕಾಂ ಕಂಪನಿಯ ಚೀಫ್ ಡಿಜಿಟಲ್ ಅಂಡ್ ಇನ್ನೋವೇಶನ್ ಆಫೀಸರ್.
* ಡಾ. ಶಶಿ ತರೂರ್, ಸಂಸದರು
* ಭವೀಶ್ ಅಗರ್ವಾಲ್, ಒಲಾದ ಸಹ-ಸಂಸ್ಥಾಪಕರು ಮತ್ತು ಸಿಇಒ
* ಅಮಿತ್ ಕಪುರ್, ಟಿಸಿಎಸ್‌ನ ಯುಕೆ, ಐರ್‌ಲೆಂಡ್ ವಿಭಾಗದ ಮುಖ್ಯಸ್ಥರು
* ಸದ್ಗುರು ಜಗ್ಗಿ ವಾಸುದೇವ್, ಈಶ ಫೌಂಡೇಶನ್ ಸ್ಥಾಪಕರು.

ಗ್ಲೋಬಲ್ ಇಂಡಿಯಾ ಫೋರಂ ಬಗ್ಗೆ ಏನಿದು ಇಂಡಿಯಾ ಗ್ಲೋಬಲ್ ಫೋರಂ?

ಐಜಿಎಫ್ ಅಥವಾ ಇಂಡಿಯಾ ಗ್ಲೋಬಲ್ ಫೋರಂ ಎಂಬುದು ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಜಾಗತಿಕ ನಾಯಕರಿಗೆ ವಿಚಾರ ಹಂಚುವ ವೇದಿಕೆಯಾಗಿದೆ. ವಿವಿಧ ವಲಯಗಳಲ್ಲಿ ಕಾರ್ಪೊರೇಟ್ ಕಂಪನಿಗಳಿಗೆ ಮತ್ತು ನೀತಿರೂಪಕರಿಗೆ ಆ ವಲಯ ಸಂಬಂಧಿತ ಪ್ರಮುಖ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಸಂವಾದ ನಡೆಸಲು ಅವಕಾಶ ಕಲ್ಪಿಸುವ ವೇದಿಕೆ ಇದಾಗಿದೆ. ಬಹಳ ಆಳವಾದ ವಿಶ್ಲೇಷಣೆ, ಸಂದರ್ಶನ, ಸಂವಾದಗಳು ಇಂಡಿಯಾ ಗ್ಲೋಬಲ್ ಫೋರಂನ ವಿಶೇಷತೆಗಳಾಗಿವೆ ಎಂದು ಫೋರಂನ ವೆಬ್‌ಸೈಟ್‌ನಲ್ಲಿ ಹೇಳಿಕೊಳ್ಳಲಾಗಿದೆ.

ಇಂಡಿಯಾ ಇನ್ಕ್ ಗ್ರೂಪ್ ಎಂಬ ಸಂಸ್ಥೆಯು ಇಂಡಿಯಾ ಗ್ಲೋಬಲ್ ಫೋರಂ ಅನ್ನು ಆಯೋಜಿಸುತ್ತದೆ. ಭಾರತಕ್ಕೆ ಸಂಬಂಧಿಸಿದ ಜಾಗತಿಕವಾಗಿ ಮಹತ್ವವಾಗಿರುವ ಆರ್ಥಿಕ ವ್ಯವಹಾರ ಮತ್ತಿತರ ವಿಚಾರಗಳನ್ನು ಇಟ್ಟುಕೊಂಡು ಹೂಡಿಕೆ, ವ್ಯಾಪಾರ ಮತ್ತು ನೀತಿ ವಿಚಾರಗಳ ಬಗ್ಗೆ ಇಂಡಿಯಾ ಇನ್ಕ್ ಗ್ರೂಪ್ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ, ಲೇಖನಗಳನ್ನು ಪ್ರಕಟಿಸುತ್ತದೆ. ಇದರ ಕೇಂದ್ರ ಕಚೇರಿ ಲಂಡನ್‌ನಲ್ಲಿದೆ.

Recommended Video

   Rohit ಗಾಗಿ ಕಾಯುತ್ತಿರುವ ಟೀಮ್ ಇಂಡಿಯಾ ಕೋಚ್ ರಾಹುಲ್ ! | *Cricket | OneIndia Kannada

   (ಒನ್ಇಂಡಿಯಾ ಸುದ್ದಿ)

   English summary
   To coincide with UK-India Week, The UK govt has announced 75 fully funded scholarships for Indian students to study in Britain from September.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X