ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಜಾಗೊಂಡ ಉದ್ಯೋಗಿಗಳಿಗೆ ಮರಳಿ ಬರುವಂತೆ ಕೋರಿದ ಟ್ವಿಟ್ಟರ್‌

|
Google Oneindia Kannada News

ಕಳೆದ ವಾರ ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಕಂಪನಿಯನ್ನು ಸ್ವಾಧೀನ ಪಡಿಸಿಕೊಂಡರು. ಆ ನಂತರ ಅರ್ಧದಷ್ಟು ಸಿಬ್ಬಂದಿಯನ್ನು ಕಂಪನಿಯು ವಜಾಗೊಳಿಸಿತ್ತು. ಈ ಸಿಬ್ಬಂದಿಯಲ್ಲಿ ಟ್ರಸ್ಟ್‌ ಹಾಗೂ ಭದ್ರತಾ ನೌಕರರು ಸೇರಿದಂತೆ ಹಲವಾರು ತಂತ್ರಜ್ಞರೂ ಇದ್ದಾರೆ. ಇವರನ್ನು ವಜಾಗೊಳಿಸಿದ ಮೂರು ದಿನದೊಳಗೇ ಮತ್ತೆ ಕೆಲಸಕ್ಕೆ ಹಾಜರಾಗಲು ಟ್ವಿಟ್ಟರ್‌ ಮನವಿ ಮಾಡಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

ಕೆಲಸಕ್ಕೆ ಮರಳಲು ಕೇಳಿಕೊಂಡವರಲ್ಲಿ ಕೆಲವರನ್ನು ತಪ್ಪಾಗಿ ವಜಾಗೊಳಿಸಲಾಗಿದೆ. ಎಲಾನ್‌ ಮಸ್ಕ್‌ ಅವರ ನಿರ್ದೇಶನದಂತೆ ಟ್ವಿಟ್ಟರ್‌ನಲ್ಲಿ ಹೊಸ ವೈಶಿಷ್ಟ್ಯಗಳನ್ನು ವೃದ್ಧಿಪಡಿಸಬೇಕಿದೆ. ಆ ಹಿನ್ನೆಲೆಯಲ್ಲಿ ಅನುಭವಿ ನೌಕರರ ಅವಶ್ಯಕತೆ ಇದೆ. ಇದನ್ನು ಅರಿತುಕೊಳ್ಳುವ ಮೊದಲು ಅನುಭವಿ ನೌಕರರನ್ನು ಕೆಲಸದಿಂದ ಕೈಬಿಡಲಾಗಿತ್ತು. ಅವರ ಅನುಭವ ಹಾಗೂ ಕಾರ್ಯಕ್ಷಮತೆ ಕಂಪನಿಗೆ ಬೇಕಿದೆ. ಈ ಹಿನ್ನೆಲೆಯಲ್ಲಿ ವಜಾಗೊಂಡಿರುವ ಕೆಲವು ನೌಕರರನ್ನು ಮರಳಿ ಕೆಲಸಕ್ಕೆ ಹಾಜರಾಗಲು ಟ್ವಿಟ್ಟರ್‌ ಕೋರಿದೆ ಎಂದು ತಿಳಿದುಬಂದಿದೆ.

ಸರಿಸುಮಾರು 7,500 ಉದ್ಯೋಗಿಗಳ ಪೈಕಿ ಅರ್ಧದಷ್ಟು ಸಿಬ್ಬಂದಿಯನ್ನು ಟ್ವಿಟ್ಟರ್‌ ವಜಾಗೊಳಿಸಿತ್ತು. ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಮಾಲೀಕರಾದ ಒಂದು ವಾರದ ಬಳಿಕ ಈ ಪ್ರಕ್ರಿಯೆ ಆರಂಭವಾಗಿತ್ತು. ಇದರಲ್ಲಿ ಭಾರತದ 200 ನೌಕರರು ಸೇರಿದ್ದಾರೆ.

Twitter now asks some fired employees to come back

ಮಸ್ಕ್‌ ವಿರುದ್ಧ ಕಿಡಿಕಾರದ ಬೈಡನ್‌

ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಅನ್ನು ಸ್ವಾಧೀನ ಪಡಿಸಿಕೊಂಡಾಗಿನಿಂದ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ಮಸ್ಕ್‌ ಅವರು ಟ್ವಿಟ್ಟರ್‌ ಖರೀದಿ ಮಾಡಿದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕಿಡಿಕಾರಿದ್ದಾರೆ. ಶ್ರೀಮಂತ ಉದ್ಯಮಿಯೊಬ್ಬರು ಜಗತ್ತಿನಾದ್ಯಂತ ಸುಳ್ಳು ಹರಡುವ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಖರೀದಿಸಿದ್ದಾರೆ ಎಂದು ಬೈಡನ್‌ ಟೀಕಿಸಿದ್ದಾರೆ.

ಶೇ 50ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದ ಸಂದರ್ಭದಲ್ಲಿ ಬೈಡನ್‌ ಈ ಹೇಳಿಕೆ ನೀಡಿದ್ದಾರೆ. ತಪ್ಪು ಹಾಗೂ ಸುಳ್ಳು ಮಾಹಿತಿಗಳ ಹರಡುವಿಕೆಯನ್ನು ತಡೆಗಟ್ಟಲು ಜವಾಬ್ದಾರಿಯುತ ನೌಕರರು ಕೆಲಸ ಮಾಡುತ್ತಿದ್ದರು. ಅವರನ್ನು ನೌಕರಿಯಿಂದ ವಜಾಗೊಳಿಸಿದ್ದು ಸರಿ ಅಲ್ಲ ಎಂದು ಬೈಡನ್‌ ಅಭಿಪ್ರಾಯ ಪಟ್ಟಿದ್ದಾರೆ.

ಟ್ವಿಟರ್‌ ಮೇಲೆ ಸಾಮಾಜಿಕ ಹೋರಾಟಗಾರರ ಒತ್ತಡ

ತಾವು ಖರೀದಿಸಿರುವ ಟ್ವಿಟರ್‌ ಮೇಲೆ ಸಾಮಾಜಿಕ ಹೋರಾಟರಾರರ ಒತ್ತಡವಿದೆ ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ. ಟ್ವಿಟರ್‌ ಅನ್ನು ಖರೀದಿಸಿದ ಬಳಿಕ ಪ್ರತಿದಿನ ಹೆಚ್ಚು ಪ್ರಮಾಣದ ನಷ್ಟ ಅನುಭವಿಸುತ್ತಿದ್ದೇವೆ. ದೊಡ್ಡ ಜಾಹೀರಾತುದಾರರು ಇದುವರೆಗೆ ಜಾಹೀರಾತುಗಳನ್ನು ಕೊಡುತ್ತಿಲ್ಲ. ಅವರು ತಮ್ಮ ಸ್ವಾಧೀನ ಪ್ರಕ್ರಿಯೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಲೇ ಇದ್ದಾರೆ. ಇವರ ಮೇಲೆ ಸಾಮಾಜಿಕ ಹೋರಾಟಗಾರರ ಒತ್ತಡವಿದೆ ಎಂದು ಮಸ್ಕ್‌ ತಿಳಿಸಿದ್ದಾರೆ.

Twitter now asks some fired employees to come back

ಕಂಪನಿಗೆ ದಿನವೊಂದಕ್ಕೆ $ 4 ಮಿಲಿಯನ್ ನಷ್ಟವಾಗುತ್ತಿದೆ. ನೌಕರರ ವಜಾಗೊಳಿಸುವುದು ಬಿಟ್ಟು ತಮಗೆ ಬೇರೆ ಆಯ್ಕೆಗಳಿಲ್ಲ ಎಂದು ಎಲಾನ್‌ ಮಸ್ಕ್‌ ಹೇಳಿದ್ದರು. ವಜಾಗೊಂಡ ಎಲ್ಲರಿಗೂ ಮೂರು ತಿಂಗಳ ಹೆಚ್ಚುವರಿ ವೇತನ ನೀಡಲಾಗಿದೆ. ಕಾನೂನಿನ ಪ್ರಕಾರ ಶೇ.50ರಷ್ಟು ಹೆಚ್ಚುವರಿ ವೇತನ ಕೊಡಲಾಗಿದೆ ಎಂದು ಎಲಾನ್‌ ಮಸ್ಕ್‌ ತಿಳಿಸಿದ್ದರು.

ಭಾರತದ ನೌಕರರ ವಜಾ

ಕಂಪನಿಯ ಸಿಇಒ ಆಗಿದ್ದ ಪರಾಗ್ ಅಗರ್ವಾಲ್ ಮತ್ತು ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಮತ್ತು ಇತರ ಕೆಲವು ಉನ್ನತ ಅಧಿಕಾರಿಗಳನ್ನು ಎಲಾನ್‌ ಮಸ್ಕ್ ವಜಾಗೊಳಿಸಿದ್ದರು. ಎಲಾನ್‌ ಮಸ್ಕ್‌ ಟ್ವಿಟ್ಟರ್‌ನ ಹೊಸ ಮಾಲೀಕರಾಗುತ್ತಿದ್ದಂತೆ, ಆಡಳಿತ ಮಂಡಳಿಯ ಉನ್ನತ ಸ್ಥಾನದಲ್ಲಿ ಇರುವವರು ರಾಜೀನಾಮೆ ನೀಡಿದ್ದರು.

ಭಾರತದಲ್ಲಿ ತನ್ನ ಹೆಚ್ಚಿನ ಉದ್ಯೋಗಿಗಳನ್ನು ಟ್ವಿಟ್ಟರ್ ವಜಾ ಮಾಡಿತ್ತು. ವಜಾಗೊಳಿಸುವ ಪ್ರಕ್ರಿಯೆಗೂ ಮೊದಲು ಕಂಪನಿಯು ಭಾರತದಲ್ಲಿ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿತ್ತು. ಇದು ಟ್ವಿಟ್ಟರ್‌ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.

English summary
Some of those who are being asked to return were laid off by mistake, according to two people familiar with the moves. Others were let go before management realized that their work and experience may be necessary to build the new features Elon Musk envisions, the people said,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X