ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್ ವಿಮಾನ ಪತನಕ್ಕೆ ಹೊಸ ತಿರುವು: ನಿಜವಾಗಲು ನಡೆದಿದ್ದೇನು?

|
Google Oneindia Kannada News

ಟೆಹ್ರಾನ್, ಜನವರಿ 11: ಉಕ್ರೇನ್ ವಿಮಾನ ಪತನವಾಗಿ ಮೂರು ದಿನಗಳ ಬಳಿಕ ಘಟನೆಗೆ ಹೊಸ ತಿರುವು ದೊರೆತಿದೆ.

ಉಕ್ರೇನ್ ವಿಮಾನ ಪತನಕ್ಕೆ ನಾವೇ ಕಾರಣ ಆದರೆ ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ಇರಾನ್ ಒಪ್ಪಿಕೊಂಡಿದೆ.

ಟೆಹ್ರಾನ್‌ನಲ್ಲಿ 176 ಮಂದಿ ಪ್ರಯಾಣಿಕರನ್ನು ಹೊತ್ತ 732 ಬೋಯಿಂಗ್ ವಿಮಾನವು ಇಮಾಮ್ ಖೊಮೈನಿ ಏರ್‌ಪೋರ್ಟ್‌ನಿಂದ ಟೇಕ್ ಆಫ್ ಆದ ಬಳಿಕ ವಿಮಾನ ಅಪಘಾತ ಸಂಭವಿಸಿ ಎಲ್ಲಾ ಪ್ರಯಾಣಿಕರು ಮೃತಪಟ್ಟಿದ್ದರು.

ನಿಲ್ದಾಣಕ್ಕೆ ಮರಳಲು ಯತ್ನಿಸುತ್ತಿದ್ದ ವಿಮಾನವನ್ನು ಇರಾನ್ ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಅಮೆರಿಕ ಆರೋಪಿಸಿತ್ತು. ಆದರೆ ಈ ಆರೋಪ ಹೌದು ಎಂದು ಇರಾನ್ ಇದೀಗ ಒಪ್ಪಿಕೊಂಡಿದೆ.

ಉಕ್ರೇನ್ ವಿಮಾನ ಪತನ; ಇರಾನ್ ಕೈವಾಡಕ್ಕೆ ಸಾಕ್ಷಿ ಕೊಟ್ಟ ಅಮೆರಿಕಉಕ್ರೇನ್ ವಿಮಾನ ಪತನ; ಇರಾನ್ ಕೈವಾಡಕ್ಕೆ ಸಾಕ್ಷಿ ಕೊಟ್ಟ ಅಮೆರಿಕ

ಆದರೆ ಉದ್ದೇಶಪೂರ್ವಕವಾಗಿ ವಿಮಾನದ ಮೇಲೆ ದಾಳಿ ನಡೆಸಿಲ್ಲ ಇದೆಲ್ಲವೂ ಆಕಸ್ಮಿಕವಾಗಿ ನಡೆದು ಹೋಗಿದೆ ಎಂದು ಸಮಜಾಯಿಷಿ ನೀಡಿದೆ. ವಿಮಾನದಲ್ಲಿ 82 ಮಂದಿ ಇರಾನ್ ಪ್ರಯಾಣಿಕರು, 63 ಮಂದಿ ಕೆನಡಾದವರು, 11 ಮಂದಿ ಉಕ್ರೇನಿಯನ್‌ ಗಳಿದ್ದರು.

 ವಿಮಾನವು ಸೂಕ್ಷ್ಮ ಮಿಲಿಟರಿ ತಾಣದ ಹತ್ತಿರ ಹಾರಿತ್ತು

ವಿಮಾನವು ಸೂಕ್ಷ್ಮ ಮಿಲಿಟರಿ ತಾಣದ ಹತ್ತಿರ ಹಾರಿತ್ತು

ವಿಮಾನವು ಸೂಕ್ಷ್ಮ ಮಿಲಿಟರಿ ತಾಣವೊಂದರ ಹತ್ತಿರ ಹಾರಿತ್ತು, ಮಾನವ ದೋಷದಿಂದಾಗಿ ಅದು ನೆಲಕ್ಕುಳಿತು ಎಂದು ಹೇಳಿದೆ.ಆದರೆ ಅಮೆರಿಕ ಮತ್ತು ಕೆನಡಾ ಮಾತ್ರ ಇರಾನ್‌ ತನ್ನ ವಿಮಾನವನ್ನು ಆಕಸ್ಮಿಕವಾಗಿ ಹೊಡೆದುರುಳಿಸಿದೆ ಎಂದು ಹೇಳಿತ್ತು.

ಜನವರಿ 8ರಂದು ಟೆಹ್ರಾನ್‌ನಿಂದ ವಿಮಾನ ಉಕ್ರೇನ್‌ಗೆ ಹೊರಟಿತ್ತು

ಜನವರಿ 8ರಂದು ಟೆಹ್ರಾನ್‌ನಿಂದ ವಿಮಾನ ಉಕ್ರೇನ್‌ಗೆ ಹೊರಟಿತ್ತು

ಜನವರಿ 8ರಂದು ಇರಾನ್‌ನಲ್ಲಿ ಟೆಹರಾನ್‌ನಿಂದ ಉಕ್ರೇನ್‌ಗೆ ಹೊರಟಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದಲ್ಲಿಯೇ ಪತನಗೊಂಡಿತ್ತು. 168 ಪ್ರಯಾಣಿಕರು ಮತ್ತು 9 ಸಿಬ್ಭಂದಿಗಳು ಮೃತಪಟ್ಟಿದ್ದರು.

ಇರಾಕ್‌ನಲ್ಲಿರುವ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ

ಇರಾಕ್‌ನಲ್ಲಿರುವ ಅಮೆರಿಕ ಸೇನೆ ಮೇಲೆ ಕ್ಷಿಪಣಿ ದಾಳಿ

ವಿಮಾನ ಪತನಗೊಳ್ಳುವ ಕೆಲವು ಗಂಟೆಗಳ ಮೊದಲು ಇರಾನ್ ಇರಾಕ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿ ದಾಳಿ ನಡೆಸಿತ್ತು. ಉಕ್ರೇನ್ ವಿಮಾನ ಪತನಕ್ಕೂ ಮೊದಲು ಇರಾನ್ ಎರಡು ಕ್ಷಿಪಣಿ ಹಾರಿಸಿದೆ. ಇದು ಉದ್ದೇಶಪೂರ್ವಕ ದಾಳಿಯಲ್ಲ ಎಂಬುದು ಅಮೆರಿಕದ ಅಧಿಕಾರಿಗಳ ವಿಶ್ಲೇಷಣೆಯಾಗಿದೆ.

ಉದ್ದೇಶಪೂರ್ವಕವಾಗಿ ವಿಮಾನದ ಮೇಲೆ ದಾಳಿ ಮಾಡಿಲ್ಲ

ಉದ್ದೇಶಪೂರ್ವಕವಾಗಿ ವಿಮಾನದ ಮೇಲೆ ದಾಳಿ ಮಾಡಿಲ್ಲ

ನಾವು ಉದ್ದೇಶಪೂರ್ವಕವಾಗಿ ವಿಮಾನದ ಮೇಲೆ ದಾಳಿ ನಡೆಸಿಲ್ಲ, ಆಕಸ್ಮಿಕವಾಗಿ ನಡೆದೇ ಹೋಯಿತು ಎಂದು ವಿಮಾನ ಪತನವಾಗಿ 3 ದಿನಗಳ ಬಳಿಕ, ಅಮೆರಿಕ, ಕೆನಡಾ ಇರಾನ್ ಮೇಲೆ ಬೊಟ್ಟು ಮಾಡಿ ತೋರಿಸಿದ ಬಳಿಕ ಇದೀಗ ಒಪ್ಪಿಕೊಂಡಿದೆ.

English summary
Iranian state TV, citing a military statement, says the country 'unintentionally' shot down a Ukrainian jetliner, killing all 176 aboard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X