ನಿಂತ ನೆಲವೇ ಬಾಯ್ತೆರೆದು ನುಂಗಲು ಹೊರಟಿತು!: ಎದೆ ಝಲ್ಲೆನಿಸುವ ದೃಶ್ಯ ಸೆರೆ

ದಿಯಾರ್ಬಕಿರ್ (ಟರ್ಕಿ), ಅಕ್ಟೋಬರ್ 26: ಪಾದಚಾರಿ ಮಾರ್ಗವೊಂದು ಹಠಾತ್ತಾಗಿ ಕುಸಿದು ಅದರೊಳಗೆ ಇಬ್ಬರು ಮಹಿಳೆಯರು ಬಿದ್ದ ಘಟನೆ ಟರ್ಕಿಯ ದಿಯಾರ್ಬಕಿರ್ ನಗರದಲ್ಲಿ ನಡೆದಿದೆ.

ಅದೃಷ್ಟವಶಾತ್ ಮಹಿಳೆಯರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನೆಲ ಬಾಯ್ತೆರೆದು ನುಂಗಲು ಹೊರಟಂತೆ ಕಾಣುವ ಈ ಎದೆನಡುಗಿಸುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬುಧವಾರ ಸಂಝೆ ನಾಲ್ಕು ಗಂಟೆ ಸುಮಾರಿಗೆ ನಡೆದ ಈ ಘಟನೆ ಈಗ ಎಲ್ಲೆಡೆ ವೈರಲ್ ಆಗಿದೆ.

Turkey sinkhole sidewalk collapsed cctv footage two women injured

ಶಾಪಿಂಗ್‌ಗೆ ತೆರಳಿದ್ದ ಇಬ್ಬರು ಮಹಿಳೆಯರು ರಸ್ತೆ ಬದಿಯ ಪಾದಚಾರಿ ಮಾರ್ಗದಲ್ಲಿ ಹರಟುತ್ತಾ ನಡೆದುಕೊಂಡು ಬರುತ್ತಿದ್ದರು. ಆಗ ಬಚ್ಚಲಿನ ಗುಂಡಿ ಇದ್ದ ಸ್ಥಳ ಇದ್ದಕ್ಕಿದ್ದಂತೆ ಕುಸಿದಿದೆ. ಇಬ್ಬರೂ ಅದರೊಳಗೆ ಬಿದ್ದಿದ್ದಾರೆ.

ಅಲ್ಲಿಯೇ ಓಡಾಡುತ್ತಿದ್ದ ಪಾದಚಾರಿಗಳು ಅದನ್ನು ಗಮನಿಸಿ ಕೂಡಲೇ ಮಹಿಳೆಯರ ಸಹಾಯಕ್ಕೆ ಧಾವಿಸಿದರು. ಅವರ ಮೇಲೆ ಬಿದ್ದಿದ್ದ ಕಲ್ಲು, ಇಟ್ಟಿಗೆ, ಮಣ್ಣನ್ನು ತೆಗೆದು ಅವರನ್ನು ಹೊರಗೆತ್ತಿದರು. ಆಘಾತಕಾರಿಯ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಇಬ್ಬರೂ ಬಚಾವಾಗಿದ್ದಾರೆ.

ಈ ವಿಡಿಯೋವನ್ನು ಟರ್ಕಿಶ್ ಭದ್ರತಾ ಪಡೆ ಬಿಡುಗಡೆ ಮಾಡಿದ್ದು, ಎಲ್ಲೆಡೆ ಹರಿದಾಡುತ್ತಿದೆ.

ಚೀನಾದಲ್ಲಿ ಆಗಸ್ಟ್ ತಿಂಗಳಿನಲ್ಲಿ ಇಂತಹದ್ದೇ ಘಟನೆ ಸಂಭವಿಸಿತ್ತು. ಬಚ್ಚಲಿನ ಗುಂಡಿಯ ಮೇಲ್ಭಾಗದ ನೆಲ ಕುಸಿದು ಎರಡು ಕಾರ್‌ಗಳು ಅದರೊಳಗೆ ಬಿದ್ದಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+