Donald Trump: ಗ್ರೀನ್‌ಲ್ಯಾಂಡ್ ದೇಶವನ್ನೇ ಖರೀದಿ ಮಾಡುತ್ತಾ ಅಮೆರಿಕ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಕಿರಿಕ್ ನಿಲ್ಲಿಸುವ ಯಾವುದೇ ಲಕ್ಷಣಗಳು ಈ ಸಮಯದಲ್ಲಿ ಕಾಣುತ್ತಿಲ್ಲ. ಒಂದಾದ ನಂತರ ಒಂದೊಂದು ವಿವಾದ ಸೃಷ್ಟಿ ಮಾಡುವಂತೆ ಹೇಳಿಕೆ ನೀಡುತ್ತಾ ಡೊನಾಲ್ಡ್ ಟ್ರಂಪ್ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಟ್ರಂಪ್ ಅವರು ಇನ್ನೂ ಅಧಿಕಾರಕ್ಕೆ ಬಂದೇ ಇಲ್ಲ, ಅದಾಗಲೇ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಸಂಚಲನ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ!
ಹೌದು, ಇತ್ತೀಚೆಗೆ ಪನಾಮ ಕಾಲುವೆ ವಿಚಾರದಲ್ಲಿ ಕಿರಿಕ್ ನಡೆದಿತ್ತು. ಡೊನಾಲ್ಡ್ ಟ್ರಂಪ್ ಅವರು ಪನಾಮ ದೇಶದ ಕಾಲುವೆಯ ಅಧಿಕಾರವನ್ನು ಅಮೆರಿಕಗೆ ವಹಿಸಿಕೊಡಿ ಎನ್ನುವಂತೆ ಕೇಳಿದ್ದರು. ಹೀಗಿದ್ದಾಗ ಪನಾಮ ದೇಶದ ನಾಯಕರು ಕೂಡ ಡೊನಾಲ್ಡ್ ಟ್ರಂಪ್ ಅವರಿಗೆ ಖಡಕ್ ತಿರುಗೇಟು ನೀಡಿದ್ದರು. ಹೀಗೆ ಪನಾಮ ಕಾಲುವೆ ತಿಕ್ಕಾಟದ ಮಧ್ಯೆ ಇದೀಗ ಹೊಸ ಕಿರಿಕ್ ಶುರುವಾಗಿದೆ. ಅದರಲ್ಲೂ ಈ ಬಾರಿ ಟ್ರಂಪ್ ಅವರು, ಭಾರತದ ಭೂಭಾಗದ ಮುಕ್ಕಾಲು ಭಾಗದಷ್ಟು ಭೂಮಿ ಹೊಂದಿರುವ ದೇಶವನ್ನೇ ಖರೀದಿ ಮಾಡುವ ಮಾತು ಆಡಿದ್ದಾರೆ.

ಗ್ರೀನ್‌ಲ್ಯಾಂಡ್ ಖರೀದಿಸುತ್ತಾ ಅಮೆರಿಕ?
ಡೊನಾಲ್ಡ್ ಟ್ರಂಪ್ ಅವರಿಗೂ, ವಿವಾದಗಳಿಗೂ ಭಾರಿ ದೊಡ್ಡ ಸಂಬಂಧ ಇದೆ ಅಂತಾನೇ ಕಾಣುತ್ತೆ. ಯಾಕಂದ್ರೆ ಡೊನಾಲ್ಡ್ ಟ್ರಂಪ್ ಅವರು ಬಾಯಿ ಬಿಟ್ಟರೆ ಸಾಕು ಏನಾದರು ಒಂದು ಕಿರಿಕ್ ಗ್ಯಾರಂಟಿ ಎನ್ನುವಂತೆ ಆಗಿಬಿಟ್ಟಿದೆ. ಹೀಗಿದ್ದಾಗ, ಗ್ರೀನ್‌ಲ್ಯಾಂಡ್ ದೇಶವನ್ನೇ ಖರೀದಿ ಮಾಡುವ ಮಾತು ಆಡಿದ್ದಾರೆ ಡೊನಾಲ್ಡ್ ಟ್ರಂಪ್. ಈ ಮೂಲಕ ಮತ್ತೊಮ್ಮೆ ಅಮೆರಿಕದ ನೂತನ ಅಧ್ಯಕ್ಷರ ಮಾತು ಹಲ್‌ಚಲ್ ಎಬ್ಬಿಸಿದೆ. ಅಲ್ಲದೆ ಈ ವಿಚಾರ ಮತ್ತಷ್ಟು ತಿಕ್ಕಾಟಕ್ಕೆ ಕಾರಣವಾಗುವ ಮುನ್ಸೂಚನೆ ನೀಡಿದೆ.
ವಿವಾದಗಳ ಮೂಟೆಗೆ ಕೊನೆ ಯಾವಾಗ?
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ನಂತರ ಸಿಕ್ಕಾಪಟ್ಟೆ ಕಿರಿಕ್ ಜೋರಾಗಿದೆ. ಒಂದಾದ ನಂತರ ಒಂದು ಕಿರಿಕ್ ಈಗ ವಿವಾದದ ಕಿಡಿ ಹೊತ್ತಿಸಿದೆ. ಪನಾಮ ಕಾಲುವೆ ವಿಚಾರದಲ್ಲಿ ಕಿರಿಕ್ ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು ಪನಾಮ ದೇಶದ ಕಾಲುವೆ ಅಧಿಕಾರ ಅಮೆರಿಕಗೆ ವಹಿಸಿಕೊಡಿ ಎಂದಿದ್ದರು. ಆ ನಂತರ, ಗ್ರೀನ್‌ಲ್ಯಾಂಡ್ ವಿಚಾರ ಕೂಡ ಪ್ರಸ್ತಾಪ ಮಾಡಿದ್ದ ಡೊನಾಲ್ಡ್ ಟ್ರಂಪ್, ಗ್ರೀನ್‌ಲ್ಯಾಂಡ್ ದೇಶವನ್ನೇ ಖರೀದಿ ಮಾಡುವ ಮಾತು ಆಡಿದ್ದರು.
13 ಸಾವಿರ ಕೋಟಿ ರೂಪಾಯಿ ಖರ್ಚು!
ಈ ಮೂಲಕ ಮತ್ತೆ ಅಮೆರಿಕದ ನೂತನ ಅಧ್ಯಕ್ಷರ ಮಾತುಗಳು ತಲ್ಲಣ ಸೃಷ್ಟಿಸಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿತ್ತು. ಆದರೆ, ಹೀಗೆ ಟ್ರಂಪ್ ಅವರ ಹೇಳಿಕೆಯನ್ನ ಡೆನ್ಮಾರ್ಕ್ ಗಂಭೀರವಾಗಿ ಪರಿಗಣಿಸಿದ್ದು ಸುಮಾರು 13 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಇದೀಗ ಗ್ರೀನ್‌ಲ್ಯಾಂಡ್ ದೇಶದ ಭದ್ರತೆ ಹೆಚ್ಚಿಸಲು ಮುಂದಾಗಿದೆ. ಹಾಗೇ ಗ್ರೀನ್‌ಲ್ಯಾಂಡ್‌ಗೆ ವಿಶೇಷ ಪಡೆಯ ಸೈನಿಕರ ನಿಯೋಜನೆಗೆ ಕೂಡ ಚಿಂತನೆ ನಡೆಸಿದೆ ಡೆನ್ಮಾರ್ಕ್.












Click it and Unblock the Notifications