Donald Trump: ಗಾಜಾ ಯುದ್ಧಕ್ಕೆ ಕೊನೆಯ ಮೊಳೆ ಹೊಡೆಯಲಿರುವ ಡೊನಾಲ್ಡ್ ಟ್ರಂಪ್?
ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬರುವ ಮೊದಲು ಸಾಕಷ್ಟು ದೊಡ್ಡ ದೊಡ್ಡ ಬದಲಾವಣೆ ನಡೆಯುತ್ತಿವೆ. ಯುದ್ಧಗಳ ಬಗ್ಗೆ ಮೊದಲಿನಿಂದ ಕೂಡ ಸಾಕಷ್ಟು ವಿರೋಧ & ಬೇಸರ ಹೊಂದಿರುವ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶಾಂತಿ ಸ್ಥಾಪನೆ ಬಗ್ಗೆ ಮಾತು ಕೊಟ್ಟು ಇದೀಗ ಗೆದ್ದು ಬೀಗಿದ್ದಾರೆ. ರಷ್ಯಾ & ಉಕ್ರೇನ್ ಯುದ್ಧ ಸೇರಿದಂತೆ ಹಲವು ಯುದ್ಧಗಳು ಜಗತ್ತಿನಲ್ಲಿ ನಡೆಯುತ್ತಿವೆ. ಈ ಹೊತ್ತಲ್ಲೇ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಏರಿದ್ದಾರೆ.
ಡೊನಾಲ್ಡ್ ಟ್ರಂಪ್ ಇನ್ನೇನು ಕೆಲವೆ ದಿನದಲ್ಲಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಪವರ್ ಫುಲ್ ಆಗಲಿದ್ದಾರೆ. ಅಮೆರಿಕ ಎಂಬ ಸೂಪರ್ ಪವರ್ ದೇಶದ ಮುಖ್ಯಸ್ಥರಾಗಿ ಟ್ರಂಪ್ ಎಂಟ್ರಿ ಕೊಡಲು ಕೌಂಟ್‌ಡೌನ್ ಶುರುವಾಗಿದೆ. ಹೀಗೆ ಡೊನಾಲ್ಡ್ ಟ್ರಂಪ್ ಎಂಟ್ರಿಗೆ ಅಮೆರಿಕದ ಜನ ಕೂಡ ಕುತೂಹಲದಿಂದ ಕಾದು ಕುಳಿತಿದ್ದಾರೆ. ಹೀಗಿದ್ದಾಗಲೇ ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ ಮಾಡಲು ಟ್ರಂಪ್ ಮೊದಲ ಹೆಜ್ಜೆ ಇಟ್ಟಿದ್ದಾರಾ? ಎಂಬ ಚರ್ಚೆ ಶುರುವಾಗಿದೆ.

ಯುದ್ಧ ನಿಲ್ಲಿಸಲು ಟ್ರಂಪ್ ಸಿದ್ಧತೆ?
ಅಮೆರಿಕ ಇಸ್ರೇಲ್ ಪರ ನಿಂತಿದೆ, ಸಂಕಷ್ಟ ಬಂದಾಗೆಲ್ಲಾ ಇಸ್ರೇಲ್ ಕೂಡ ಅಮೆರಿಕ ಸಹಾಯಕ್ಕೆ ಮೊರೆ ಇಡುತ್ತದೆ. ಹೀಗಿದ್ದಾಗ ಹಮಾಸ್ ವಿರುದ್ಧ ಯುದ್ಧ ಸಾರಿ ಹೋರಾಟ ನಡೆಸುತ್ತಿರುವ ಇಸ್ರೇಲ್ ಸೇನೆಗೆ ಅಮೆರಿಕ ಯುದ್ಧ ನಿಲ್ಲಿಸುವಂತೆ ಪದೇ ಪದೇ ಸಲಹೆ ನೀಡುತ್ತಾ ಬಂದಿದೆ.
ಆದರೆ ಅಮೆರಿಕದ ಸಲಹೆ ಪಾಲನೆ ಮಾಡದ ಇಸ್ರೇಲ್, ಘೋರ ಕಾಳ ನಡೆಸುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ಒಡೆದ ಮನೆಯಾಗಿದೆ. ಆದರೆ ಡೊನಾಲ್ಡ್ ಟ್ರಂಪ್ ಅವರು ಬೇರೆಯದ್ದೇ ಅಸ್ತ್ರ ಪ್ರಯೋಗ ಮಾಡಲು ಸಜ್ಜಾಗಿದ್ದಾರೆ. ಹಾಗಾದ್ರೆ ಟ್ರಂಪ್ ಅವರ ಹೊಸ ಅಸ್ತ್ರ ಏನು? ಇದೀಗ ಯುದ್ಧ ನಿಲ್ಲುತ್ತಾ? ಮುಂದೆ ಓದಿ.
ಇಸ್ರೇಲ್ ಪ್ರಧಾನಿ ಒಪ್ಪಿಗೆ ನೀಡುತ್ತಾರಾ?
ಹೌದು ಇಸ್ರೇಲ್ & ಹಮಾಸ್ ನಡುವೆ ಯುದ್ಧ ನಡೆದು ಗಾಜಾ ಪಟ್ಟಿ & ಪ್ಯಾಲೆಸ್ತೀನ್ ಪ್ರದೇಶಗಳು ನಾಶವಾಗಿವೆ. ಹೀಗೆ ಯುದ್ಧ ಶುರುವಾಗಲು ಕಾರಣವಾಗಿದ್ದು, ಹಮಾಸ್ ಬಂಡುಕೋರರ ಕೃತ್ಯ ಎಂಬ ಆರೋಪ ಇದೆ. 2023 ಅಕ್ಟೋಬರ್ 7 ರಂದು ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ಶುರುವಾಗಿತ್ತು. ಆದರೆ ಈಗ ಈ ಯುದ್ಧಕ್ಕೆ ಬ್ರೇಕ್ ಹಾಕಲು ಡೊನಾಲ್ಡ್ ಟ್ರಂಪ್ ಸಕಲ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಮಾಡಿರುವ ಇದೇ ಟ್ರಂಪ್ ಅವರು, ಇದೀಗ ಇಸ್ರೇಲ್ ಪ್ರಧಾನಿ ಮನವೊಲಿಕೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಹರಿದಾಡ್ತಿದೆ.












Click it and Unblock the Notifications