Trump Tariffs: ಟ್ರಂಪ್ ಬಿಟ್ಟ ಬಾಣಕ್ಕೆ ಹೆದರಿತಾ ನರೇಂದ್ರ ಮೋದಿ ಸರ್ಕಾರ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ನೇಹಿತ ದೇಶಗಳ ಜೊತೆಯಲ್ಲೂ ಕಿರಿಕ್ ಮುಂದುವರಿಸಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಜೋ ಬೈಡನ್ ಸರ್ಕಾರ ಬಿದ್ದು ಹೋಗಿ, ಟ್ರಂಪ್ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗುತ್ತಿದೆ. ಹೀಗೆ ಟ್ರಂಪ್ ಕೆಂಗಣ್ಣಿಗೆ ಗುರಿಯಾಗಿದ್ದ ಪ್ರಧಾನಿ ಮೋದಿ ಸರ್ಕಾರ ಕೂಡ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಹಾಗಾದ್ರೆ, ಟ್ರಂಪ್ ಬಿಟ್ಟ ಬಾಣಕ್ಕೆ ಹೆದರಿತಾ ನರೇಂದ್ರ ಮೋದಿ ಸರ್ಕಾರ?

ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಭಾರತದ ಬಗ್ಗೆ ನೀಡಿರುವ ಹೇಳಿಕೆ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಭಾರತವು ಸುಂಕ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿಳಿಸಿದ್ದು, ಇಷ್ಟಕ್ಕೇ ಅವರು ತಮ್ಮ ಮಾತನ್ನು ಮುಗಿಸಿದ್ದರೆ ವಿವಾದ ಆಗುತ್ತಿರಲಿಲ್ಲ. ಆದರೆ, ಭಾರತ ಸರ್ಕಾರಕ್ಕೆ ತನ್ನ ಹೆಚ್ಚುವರಿ ಸುಂಕದ ಅರಿವಾಗಿದ್ದು, ಇದೀಗ ಟ್ಯಾಕ್ಸ್ ಕಡಿತಗೊಳಿಸಲು ಯತ್ನಿಸಿದೆ ಅಂತಾ ಹೇಳಿದ್ದಾರೆ ಡೊನಾಲ್ಡ್ ಟ್ರಂಪ್. ಈ ಮೂಲಕ ಡೊನಾಲ್ಡ್ ಟ್ರಂಪ್ ಹೇಳಿಕೆ ಭಾರಿ ಸಂಚಲನ ಸೃಷ್ಟಿ ಮಾಡಿದೆ.

Trump States Modi Government Agreed to Lower Tariffs on US Exports

ಅಮೆರಿಕ ವಿರುದ್ಧ ಹೆಚ್ಚುವರಿ ಸುಂಕ?

ಡೊನಾಲ್ಡ್ ಟ್ರಂಪ್ ಮಾಡಿರುವ ಆರೋಪದ ಪ್ರಕಾರ, ಅಮೆರಿಕದ ಮೂಲಕ ಆಮದು ಆಗುವ ವಸ್ತುಗಳ ಮೇಲೆ ಭಾರತ ಹೆಚ್ಚಾಗಿ ತೆರಿಗೆ ಹಾಕುತ್ತಿದೆಯಂತೆ. ಆದರೆ ಇದು ವೈಜ್ಞಾನಿಕ ತೆರಿಗೆ ಆಗಿದೆ ಎಂಬುದು ಭಾರತದ ಸ್ಪಷ್ಟನೆಯಾಗಿತ್ತು. ಹೀಗಿದ್ದರೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಈ ವಿಚಾರದಲ್ಲಿ ರೊಚ್ಚಿಗೆದ್ದು, ತೆರಿಗೆ ಕಡಿಮೆ ಮಾಡಲು ಆಗ್ರಹ ಮಾಡಿದ್ದರು.

ಅಲ್ಲದೆ ಭಾರತದ ವಿರುದ್ಧ ಕೂಡ ಹೆಚ್ಚುವರಿ ತೆರಿಗೆ ವಿಧಿಸಲು ಮುಂದಾಗಿದ್ದರು. ಹೀಗಿದ್ದಾಗ ನರೇಂದ್ರ ಮೋದಿ ಅವರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ ಎಂದು ಟ್ರಂಪ್ ಅವರು ಇದೀಗ ತಿಳಿಸಿದ್ದಾರೆ. ಈಗಾಗಲೇ ಕೆನಡಾ ಮತ್ತು ಮೆಕ್ಸಿಕೋ ವಿರುದ್ಧ ಶೇಕಡಾ 25 ರಷ್ಟು ತೆರಿಗೆ ಹಾಕಲು ಡೊನಾಲ್ಡ್ ಟ್ರಂಪ್ ಆಗ್ರಹಿಸಿದ್ದರು. ಆದರೆ ಮೆಕ್ಸಿಕೋ ಸರ್ಕಾರದ ಜೊತೆ ಮಾತುಕತೆ ನಡೆಸಿದ ನಂತರ ನಿರ್ಧಾರ ಬದಲಾಗಿತ್ತು. ಇದೀಗ ಭಾರತದ ಜೊತೆಗೂ ಟ್ರಂಪ್ ಸರ್ಕಾರವು ಮಾತುಕತೆ ನಡೆಸಿದೆ.

ಟ್ರಂಪ್ ಆಡಳಿತದಲ್ಲಿ ತೆರಿಗೆ ಯುದ್ಧ?

ಒಟ್ನಲ್ಲಿ ಅಮೆರಿಕದ ನೂತನ ಸರ್ಕಾರ ಜಾಗತಿಕ ಮಟ್ಟದಲ್ಲಿ ತೆರಿಗೆ ಯುದ್ಧ ನಡೆಸುತ್ತಿದ್ದು, ಈ ಸಮಯದಲ್ಲಿ ಭಾರತ ಕೂಡ ಎಚ್ಚರಿಕೆಯ ಹೆಜ್ಜೆಯನ್ನು ಇಡುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವೆ ಈ ವಿಚಾರದಲ್ಲಿ ಕಿರಿಕ್ ನಡೆದರೆ ಆರ್ಥಿಕ ನಷ್ಟವೂ ಆಗಬಹುದು ಎಂಬ ಆತಂಕ ಇದೆ. ಹಾಗೇ ಮತ್ತೊಂದು ಕಡೆ, ಟ್ರಂಪ್ ಬಿಟ್ಟ ಬಾಣಕ್ಕೆ ಹೆದರಿತಾ ನರೇಂದ್ರ ಮೋದಿ ಸರ್ಕಾರ? ಎಂಬ ವಿಚಾರವಾಗಿ ದೊಡ್ಡ ಚರ್ಚೆ ಶುರುವಾಗಿದೆ. ಇದೆಲ್ಲಾ ಏನೇ ಇದ್ದರೂ ಇಂತಹ ಸಮಯದಲ್ಲಿ ಎಚ್ಚರಿಕೆಯ ಹೆಜ್ಜೆಯೇ ಅಗತ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+