ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್‌ನ ನಾನು ಇಷ್ಟಪಟ್ಟೆ, ಅವರೂ ನನ್ನ ಇಷ್ಟಪಟ್ಟರು: ಡೊನಾಲ್ಡ್ ಟ್ರಂಪ್

|
Google Oneindia Kannada News

ರಷ್ಯಾ ಅಧ್ಯಕ್ಷ ಪುಟಿನ್ ಜಗತ್ತಿನಾದ್ಯಂತ ಖ್ಯಾತಿ ಗಳಿಸಿರುವ ವ್ಯಕ್ತಿ. ಆದರೆ ಶತ್ರು ರಾಷ್ಟ್ರಗಳಲ್ಲಿ ಮಾತ್ರ ಪುಟಿನ್ ಕುಖ್ಯಾತರು. ಅದರಲ್ಲೂ ಅಮೆರಿಕ ಹಾಗೂ ರಷ್ಯಾ ಹಾವು-ಮುಂಗಸಿ ರೀತಿ ಕಿತ್ತಾಡುತ್ತಿರುವಾಗ ಅಲ್ಲಿನ ಜನರು ಮತ್ತು ನಾಯಕರು ಪುಟಿನ್ ಅವರನ್ನ ತೀವ್ರವಾಗಿ ದ್ವೇಷಿಸುತ್ತಾರೆ. ಆದ್ರೆ ಅಮೆರಿಕದ ಮಾಜಿ ಅಧ್ಯಕ್ಷರೊಬ್ಬರಿಗೆ ಮಾತ್ರ ಪುಟಿನ್ ತುಂಬಾ ಪ್ರಿಯವಾದ ವ್ಯಕ್ತಿಯಂತೆ.

ಪುಟಿನ್‌ನ ನಾನು ಇಷ್ಟಪಟ್ಟೆ, ಅವರೂ ನನ್ನ ಇಷ್ಟಪಟ್ಟರು ಅಂತಾ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದ ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡಿದ್ದು, ಈ ವೇಳೆ ಪುಟಿನ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಟ್ರಂಪ್. ಇತ್ತೀಚೆಗಷ್ಟೇ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ವ್ಲಾದಿಮಿರ್ ಪುಟಿನ್ ಬಗ್ಗೆ ಕೆಂಡವಾಗಿದ್ದರು.

ಅಲೆಕ್ಸಿ ನವಲ್ನಿ ಅಂದ್ರೆ ಪುಟಿನ್ ಪಾಲಿನ ಶತ್ರು ನವಲ್ನಿ ರಷ್ಯಾದ ಜೈಲಿನಲ್ಲಿ ಸಾಯುವ ಹಂತ ತಲುಪಿದ್ದಾರೆ. ಈ ವಿಚಾರವಾಗಿ ಬೈಡನ್ ತೀಕ್ಷ್ಣವಾದ ಹೇಳಿಕೆ ನೀಡಿದ್ದರು. ನವಲ್ನಿ ಮೃತಪಟ್ಟರೆ ರಷ್ಯಾ ಸರ್ಕಾರ ಹಾಗೂ ಪುಟಿನ್ ನೇರ ಹೊಣೆ ಎಂದು ಗುಡುಗಿದ್ದರು. ಆದರೆ ಬೈಡನ್ ಹೇಳಿಕೆ ಕೊಟ್ಟ ಕೆಲವೇ ದಿನದಲ್ಲಿ ಟ್ರಂಪ್ ಪುಟಿನ್ ಪರ ಬ್ಯಾಟ್ ಬೀಸಿದ್ದಾರೆ. ನನಗೆ ಪುಟಿನ್ ಅತ್ಯಂತ ಆಪ್ತ ವ್ಯಕ್ತಿ ಎಂದಿದ್ದಾರೆ ಟ್ರಂಪ್.

ಜೈಲಿನಲ್ಲಿ ನರಳುತ್ತಿರುವ ನವಲ್ನಿ..?

ಜೈಲಿನಲ್ಲಿ ನರಳುತ್ತಿರುವ ನವಲ್ನಿ..?

2020ರ ಆಗಸ್ಟ್ 20ರಂದು ಅಲೆಕ್ಸಿ ನವಲ್ನಿಗೆ ವಿಷಪ್ರಾಶನ ಮಾಡಿ ಹತ್ಯೆಗೈಯಲು ಯತ್ನಿಸಲಾಗಿತ್ತು. ಸುಮಾರು 4-5 ತಿಂಗಳ ಕಾಲ ಜರ್ಮನಿಯಲ್ಲಿ ಚಿಕಿತ್ಸೆ ಪಡೆದ ನವಲ್ನಿ ರಷ್ಯಾಗೆ ವಾಪಸ್ ಆಗಿದ್ದರು. ಆದ್ರೆ ಇದೇ ನವಲ್ನಿಗೆ ಮುಳುವಾಗಿ ಪರಿಣಮಿಸಿತ್ತು. 5 ತಿಂಗಳ ಬಳಿಕ ಜನವರಿಯಲ್ಲಿ ಸ್ವದೇಶ ರಷ್ಯಾಗೆ ಮರಳಿದ್ದ ನವಲ್ನಿಗೆ ಆಘಾತ ಕಾದಿತ್ತು. ರಷ್ಯಾಗೆ ಮರಳಿದ ತಕ್ಷಣವೇ ನವಲ್ನಿ ಬಂಧನವಾಗಿತ್ತು. ಚಿಕಿತ್ಸೆಗೆ ಜಮರ್ನಿ ತಲುಪಿದ್ದು ತಪ್ಪು, ಇದು ಪೆರೋಲ್ ನಿಯಮದ ಉಲ್ಲಂಘನೆ ಎಂದು ಮಾಸ್ಕೋ ಕೋರ್ಟ್ ನವಲ್ನಿಗೆ 2.5 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಆದರೆ ಶಿಕ್ಷೆ ಅನುಭವಿಸುತ್ತಿರುವ ನವಲ್ನಿ ಆರೋಗ್ಯ ಸ್ಥಿತಿ ತೀರಾ ಗಂಭೀರವಾಗುತ್ತಿದೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ

ಭ್ರಷ್ಟಾಚಾರದ ವಿರುದ್ಧ ಹೋರಾಟ

ಅಲೆಕ್ಸಿ ನವಲ್ನಿ ರಾಜಕಾರಣಿ ಮಾತ್ರವಲ್ಲ, ಹೋರಾಟಗಾರ ಕೂಡ. ನವಲ್ನಿ ಭ್ರಷ್ಟಾಚಾರದ ವಿರುದ್ಧ ರಷ್ಯಾದಲ್ಲಿ ನಿರಂತರವಾಗಿ ಹೋರಾಡುತ್ತಿದ್ದಾರೆ. ರಷ್ಯಾ ಮಾಜಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಭ್ರಷ್ಟಾಚಾರ ಬಗ್ಗೆ ಸಿನಿಮಾ ನಿರ್ದೇಶಿಸಿದ್ದರು. ಹಾಗೇ ಪುಟಿನ್ ವಿರುದ್ಧ ಕೇಳಿಬರುತ್ತಿದ್ದ ಭ್ರಷ್ಟಾಚಾರ ಹಾಗೂ ಚುನಾವಣಾ ಅಕ್ರಮ ವಿರುದ್ಧ ನವಲ್ನಿ ಹಿಂದಿನಿಂದಲೂ ಹೋರಾಟ ನಡೆಸುತ್ತಿದ್ದಾರೆ. ಹಿಂದೆ ಕೂಡ ನವಲ್ನಿ ಮೇಲೆ ಡೆಡ್ಲಿ ಕೆಮಿಕಲ್ ಅಟ್ಯಾಕ್ ಆಗಿ ಬದುಕುಳಿದಿದ್ದರು, ಈಗ ‘ನೋವಿಚೋಕ್' ಎಂಬ ಕಾರ್ಕೋಟಕ ವಿಷ ದೇಹ ಸೇರಿದ್ದರೂ ಬದುಕುಳಿದು ರಷ್ಯಾಗೆ ಮರಳಿರುವ ನವಲ್ನಿ ಮತ್ತೆ ಪುಟಿನ್ ಪಡೆ ವಿರುದ್ಧ ತೊಡೆ ತಟ್ಟಿದ್ದಾರೆ. ನವಲ್ನಿ ಜೈಲು ಸೇರಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಸಮುದಾಯ ಆಕ್ಷೇಪ ವ್ಯಕ್ತಪಡಿಸಿದ್ದು ನವಲ್ನಿ ಬೆಂಬಲಿಗರು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.

ಕಿಮ್ ಬಗ್ಗೆ ಟ್ರಂಪ್ ಮೆಚ್ಚುಗೆ..!

ಕಿಮ್ ಬಗ್ಗೆ ಟ್ರಂಪ್ ಮೆಚ್ಚುಗೆ..!

ಸಂದರ್ಶನದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಬಗ್ಗೆಯೂ ಮಾತನಾಡಿರುವ ಟ್ರಂಪ್, ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಆದರೆ ಕೆಲವೇ ವರ್ಷಗಳ ಹಿಂದೆ ಟ್ರಂಪ್ ಹಾಗೂ ಕಿಮ್ ಹಾವು-ಮುಂಗಸಿ ರೀತಿ ಕಿತ್ತಾಡಿದ್ದರು. ಕಿಮ್ ನನ್ನ ಬಳಿ ನ್ಯೂಕ್ಲಿಯರ್ ಬಾಂಬ್ ಇದೆ ಎಂದು ಎಚ್ಚರಿಕೆ ನೀಡಿದ್ದರು, ಇದಕ್ಕೆ ಟ್ರಂಪ್ ಪ್ರತಿಕ್ರಿಯೆ ನೀಡಿ ನನ್ನ ಬಳಿ ಇರುವ ಬಟನ್ ಒತ್ತಿದರೆ ನೀವು ಸರ್ವನಾಶ ಎಂದು ವಾರ್ನಿಂಗ್ ಕೊಟ್ಟಿದ್ದರು. ಹೀಗೆ ಟ್ರಂಪ್-ಕಿಮ್ ನಡುವೆ ನ್ಯೂಕ್ಲಿಯರ್ ಬಟನ್ ವಾರ್ ನಡೆದಿತ್ತು. ಆದರೆ ಈ ಘಟನೆ ನಡೆದು ಕೆಲವೇ ತಿಂಗಳಲ್ಲಿ ಇಬ್ಬರ ನಡುವೆ ಗಾಢ ಸ್ನೇಹ ಬೆಳೆದು ಇಬ್ಬರೂ ಅತ್ಯಾಪ್ತ ಸ್ನೇಹಿತರಾದರು.

ಸರ್ವಾಧಿಕಾರಿ ಬಗ್ಗೆ ಊಹಾಪೋಹ..!

ಸರ್ವಾಧಿಕಾರಿ ಬಗ್ಗೆ ಊಹಾಪೋಹ..!

ಕಿಮ್ ಬಗ್ಗೆ ಹಲವು ಕಥೆಗಳು ಹುಟ್ಟಿವೆ. ಆತ ಬರೀ ಮಿಸೈಲ್, ಮಿಲಿಟರಿ ಸಾಧನ ಪ್ರದರ್ಶನಕ್ಕೆ ಇಡೋನಲ್ಲ. ಕಿಮ್ ಹಿಂದೆ ಚಿಕ್ಕಪ್ಪನ ತಲೆಯನ್ನೇ ಕತ್ತರಿಸಿ, ಉತ್ತರ ಕೊರಿಯಾ ಅಧಿಕಾರಿಗಳ ಮುಂದೆ ಪ್ರದರ್ಶನಕ್ಕಿಟ್ಟಿದ್ದ ಎಂಬ ಆರೋಪ ಇದೆ. ಅಲ್ಲದೆ ಉ.ಕೊರಿಯಾದಲ್ಲಿ ಕೊರೊನಾ ಕಂಟ್ರೋಲ್‌ಗೆ ತರಲು ಕಿಮ್ ರಾಕ್ಷಸನ ರೀತಿ ವರ್ತಿಸಿದ್ದ ಎಂಬ ಆರೋಪವಿದೆ. ಕೊರೊನಾ ಸೋಂಕಿತರನ್ನ ಬರ್ಬರವಾಗಿ ಕೊಲೆ ಮಾಡಿದ ಆರೋಪಗಳನ್ನು ಕಿಮ್ ಜಾಂಗ್ ಎದುರಿಸುತ್ತಿದ್ದು, ತನ್ನ ವಿಚಿತ್ರ ವರ್ತನೆಯಿಂದಲೇ ವರ್ಲ್ಡ್ ಫೇಮಸ್.

English summary
Trump said in an interview to private television that he and Putin are best friends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X