ಇರಾನ್ ಹೆಡೆಮುರಿ ಕಟ್ಟುವ ಎಚ್ಚರಿಕೆ ಸಂದೇಶ ರವಾನೆ ಮಾಡಿದ ಡೊನಾಲ್ಡ್ ಟ್ರಂಪ್... Israel And Iran
ಮಧ್ಯಪ್ರಾಚ್ಯ ಭಾಗದಲ್ಲಿ ಭಾರಿ ದೊಡ್ಡ ಯುದ್ಧ ಶುರುವಾಗಿದೆ, ಪರಮಾಣು ಸಾಮರ್ಥ್ಯ ಅಂದ್ರೆ ಅಣುಬಾಂಬ್ ಇರುವ ಇರಾನ್ ಮತ್ತು ಅಮೆರಿಕ ಬೆಂಬಲ ಇರುವ ಇಸ್ರೇಲ್ ನಡುವೆ ಘೋರ ಕದನ ಆರಂಭವಾಗಿ ದೊಡ್ಡ ಹಿಂಸಾಚಾರ ಕೂಡ ನಡೆಯುತ್ತಿದೆ. ಹೇಗಾದರೂ ಮಾಡಿ ಇರಾನ್ ದೇಶಕ್ಕೆ ಸರಿಯಾದ ಪಾಠ ಕಲಿಸಬೇಕು ಅನ್ನೋ ರೀತಿಯಲ್ಲೇ ಇಸ್ರೇಲ್ ಈಗ ದಾಳಿ ಮಾಡುತ್ತಿದೆ. ಹೀಗೆ ಇಬ್ಬರ ನಡುವೆ ನಡೆಯುತ್ತಿರುವ ದಾಳಿ ಪರಿಣಾಮ ಭಾರಿ ದೊಡ್ಡ ನಷ್ಟವೂ ಉಂಟಾಗುತ್ತಿದೆ. ಇಂತಹ ಸಮಯದಲ್ಲೇ, ಯುದ್ಧದ ಅಖಾಡಕ್ಕೆ ದೊಡ್ಡಣ್ಣ ಅಮೆರಿಕ ಕೂಡ ಭರ್ಜರಿ ಎಂಟ್ರಿ ಕೊಟ್ಟಿದೆ!
ಹೌದು, ಅಮೆರಿಕ & ಇರಾನ್ ನಡುವೆ ಸುಮಾರು ಅರ್ಧ ಶತಮಾನದಿಂದ ಫೈಟಿಂಗ್ ನಡೆಯುತ್ತಿದೆ. ಯಾಕಂದ್ರೆ ಮಧ್ಯಪ್ರಾಚ್ಯ ಭಾಗದಲ್ಲಿ ಅಮೆರಿಕ & ಇಸ್ರೇಲ್ ದೇಶಕ್ಕೆ ಇರುವ ಏಕೈಕ ದೊಡ್ಡ ಶತ್ರು ರಾಷ್ಟ್ರ ಅಂದ್ರೆ ಅದು ಇರಾನ್. ಹೀಗಾಗಿಯೇ, ಪದೇ ಪದೇ ಇರಾನ್ ಜೊತೆಗೆ ಅಮೆರಿಕ & ಸ್ನೇಹಿತರ ಬಡಿದಾಟ ನಡೆಯುತ್ತಲೇ ಇರುತ್ತದೆ. ಈಗಾಗಲೇ ಸಾವಿರಾರು ನಿರ್ಬಂಧ ಹೇರಿ ಇರಾನ್ ದೇಶ ವಿಲವಿಲ ಎನ್ನುವಂತೆ ಮಾಡಿರುವ ಅಮೆರಿಕ ಇದೀಗ ಮತ್ತೊಂದು ಶಾಕ್ ಕೊಟ್ಟಿದೆ. ಇಸ್ರೇಲ್ & ಇರಾನ್ ಈಗ ಭರ್ಜರಿಯಾಗಿ ಬಡಿದಾಡುವಾಗ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗಾದ್ರೆ ಟ್ರಂಪ್ ಹೇಳಿದ್ದು ಏನು?

ಅಮೆರಿಕ ಕೊಡುತ್ತಿರುವ ಆಫರ್ ಏನು?
ಪರಮಾಣು ಯೋಜನೆ ಕೈಗೊಂಡ ನಂತರ ಇರಾನ್ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ನಿಮಗೆಲ್ಲಾ ಗೊತ್ತಿರುವಂತೆ ಮಧ್ಯಪ್ರಾಚ್ಯ ಭಾಗದ ದೇಶಗಳು ಬದುಕು ಕಟ್ಟಿಕೊಂಡಿದ್ದೇ ಪೆಟ್ರೋಲ್ & ಡೀಸೆಲ್ ಆಧಾರದಲ್ಲಿ. ಅದರಲ್ಲೂ ಇರಾನ್ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ಬರುವುದೇ ಪೆಟ್ರೋಲ್ & ಡೀಸೆಲ್ ಮಾರಾಟ ಮಾಡುವುದರ ಮೂಲಕ. ಹೀಗಿದ್ದಾಗ ಅಮೆರಿಕ ನೂರಾರು ನಿರ್ಬಂಧ ಹೇರಿದ್ದು, ಇರಾನ್ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿ ನಲುಗುತ್ತಿದೆ.
ಇಂತಹ ಸಮಯದಲ್ಲೇ ಪರಮಾಣು ಯೋಜನೆಗಳನ್ನ ಕೂಡ ಕೈಗೊಂಡು ಇರಾನ್ ತನ್ನ ಶತ್ರುಗಳಿಗೆ ಆಘಾತ ನೀಡುತ್ತಿದೆ. ಇಷ್ಟೆಲ್ಲದರ ನಡುವೆ ಇರಾನ್ ಬಳಿ ಪರಮಾಣು ಅಸ್ತ್ರಗಳು ಬಂದಿರುವುದು ಇಸ್ರೇಲ್ ದೇಶಕ್ಕೆ ಕೋಪ ತರಿಸಿದೆ. ಹಾಗೂ ಅಮೆರಿಕ ಕೂಡ ಪದೇ ಪದೇ ಪರಮಾಣು ಒಪ್ಪಂದ ಮಾಡಿಕೊಳ್ಳಲು ಒತ್ತಾಯಿಸುತ್ತಿದೆ. ಈಗ ಅದನ್ನೇ ಪ್ರಸ್ತಾಪ ಮಾಡಿ ಟ್ರಂಪ್ ಮತ್ತೊಂದು ಸುತ್ತಿನ ವಾರ್ನಿಂಗ್ ಕೊಟ್ಟಿದ್ದಾರೆ. ಕೂಡಲೇ ಅಮೆರಿಕದ ಜೊತೆಗೆ ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕಬೇಕು ಎಂಬ ಒತ್ತಡ ಇದೀಗ ಜಾಸ್ತಿಯಾಗಿದೆ...
ಆದಷ್ಟು ಬೇಗ ಯುದ್ಧ ನಿಲ್ಲಬೇಕು....
ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಅಖಾಡ ಪ್ರವೇಶ ಮಾಡಿ ಇರಾನ್ & ಇಸ್ರೇಲ್ ಯುದ್ಧದಲ್ಲಿ ಮತ್ತೊಂದು ಸಂಚಲನವನ್ನೇ ಸೃಷ್ಟಿ ಮಾಡಿದ್ದಾರೆ. ಯಾಕಂದ್ರೆ ಅಕಸ್ಮಾತ್ ಈ ಯುದ್ಧದಲ್ಲಿ ಅಮೆರಿಕ ನೇರವಾಗಿ ಎಂಟ್ರಿ ಕೊಟ್ಟರೆ ಪರಿಸ್ಥಿತಿಯೇ ಪೂರ್ತಿ ಬದಲಾಗಿ ಹೋಗಲಿದೆ. ಹೀಗಾಗಿ ಇರಾನ್ ಇದೀಗ ಯಾವ ನಿರ್ಧಾರ ಕೈಗೊಳ್ಳಬಹುದು ಎಂಬ ಕುತೂಹಲ ಮೂಡಿದ್ದು, ಆದಷ್ಟು ಬೇಗ ಯುದ್ಧ ನಿಲ್ಲಬೇಕು ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ.












Click it and Unblock the Notifications