ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಸ್ವರ್ಗ ಪಾಕಿಸ್ತಾನ : ಡೊನಾಲ್ಡ್ ಟ್ರಂಪ್ ವಾಗ್ದಾಳಿ

By ವಿಕಾಸ್ ನಂಜಪ್ಪ
|
Google Oneindia Kannada News

ವಾಷಿಂಗ್ಟನ್, ಆಗಸ್ಟ್ 22: "ಪಾಕಿಸ್ತಾನ ಉಗ್ರರ ಪಾಲಿನ ಸ್ವರ್ಗವಾಗಿದೆ," ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದಾರೆ.

ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್

ರಿಪಬ್ಲಿಕ್ ಪಕ್ಷದ ರಾಷ್ಟ್ರೀಯ ಸಮಾವೇಶ ಉದ್ದೇಶಿಸಿ ಮಾತನಾಡಿರುವ ಅವರು ಹಲವಾರು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ.

Trump hits out at Pak, calls it a nation sheltering 'agents of chaos'

"ಪಾಕಿಸ್ತಾನದ ಜನರು ಭಯೋತ್ಪಾದಕರಿಂದ ತೊಂದರೆ ಅನುಭವಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನ ಉಗ್ರರ ಪಾಲಿನ ಸ್ವರ್ಗವಾಗಿದೆ. ಇದೀಗ ಪಾಕ್ ಉಗ್ರರನ್ನು ಮಟ್ಟ ಹಾಕಿ ತನ್ನ ಭದ್ಧತೆಯನ್ನು ಪ್ರದರ್ಶಿಬೇಕಾಗಿದೆ," ಎಂದು ಟ್ರಂಪ್ ಭಾರತದ ನೆರೆಯ ರಾಷ್ಟ್ರಕ್ಕೆ ಕಟು ಸಂದೇಶ ನೀಡಿದ್ದಾರೆ.

ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗವಿಲ್ಲ

"ಇರಾಕ್ ನಿಂದ ಸೇನೆಯನ್ನು ಹಿಂತೆಗೆದುಕೊಂಡು ನಮ್ಮ ಹಿಂದಿನ ನಾಯಕರು ಮಾಡಿದ ತಪ್ಪನ್ನು ನಾವು ಮಾಡುವುದಿಲ್ಲ. ಅಫ್ಘಾನಿಸ್ತಾನದಿಂದ ನಮ್ಮ ಸೇನೆಯನ್ನು ಹಿಂತೆಗೆದುಕೊಳ್ಳುವುದಿಲ್ಲ. ಸೇನೆಯನ್ನು ಹಿಂತೆಗೆದುಕೊಂಡರೆ ಆ ಜಾಗ ತುಂಬಲ ಐಸಿಸ್ ಮತ್ತು ಅಲ್ ಖೈದಾ ಸಂಘಟನೆಗಳಿಗೆ ದಾರಿ ಮಾಡಿಕೊಟ್ಟ ಹಾಗೆ ಆಗುತ್ತದೆ," ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟವಾಗಿ ಹೇಳಿದ್ದಾರೆ.

ಅಮೆರಿಕದ ಗುವಾಮ್ ದ್ವೀಪದ ಮೇಲೆ ಕ್ಷಿಪಣಿ ದಾಳಿಗೆ ಸಜ್ಜಾದ ಕೊರಿಯಾಅಮೆರಿಕದ ಗುವಾಮ್ ದ್ವೀಪದ ಮೇಲೆ ಕ್ಷಿಪಣಿ ದಾಳಿಗೆ ಸಜ್ಜಾದ ಕೊರಿಯಾ

ನಾವು ಭಾರತದ ಪಾಲುದಾರಿಕೆಯೊಂದಿಗೆ ಆಳವಾದ ಕಾರ್ಯತಂತ್ರ ರೂಪಿಸುತ್ತಿದ್ದೇವೆ. ಇವತ್ತು ಭಾರತ ನಮ್ಮ ಜತೆ ವ್ಯಾಪಾರದಲ್ಲಿ ಬಿಲಿಯನ್ ಡಾಲರ್ ಗಳನ್ನು ಗಳಿಸುತ್ತಿದೆ. ಈ ಸಂದರ್ಭದಲ್ಲಿ ನಾವು ಭಾರತ ಅಫ್ಘಾನಿಸ್ತಾನದಲ್ಲಿ ನಮ್ಮ ನೆರವಿಗೆ ಬರಬೇಕು ಎಂದು ಬಯುಸುತ್ತೇವೆ ಎಂದು ಟ್ರಂಪ್ ತಮ್ಮ ಮನದಾಳದ ಬಯಕೆ ತಿಳಿಸಿದ್ದಾರೆ.

ಇನ್ನು ನಮ್ಮ ಜತೆ ಅಫ್ಘಾನಿಸ್ತಾನದಲ್ಲಿ ಕೈ ಜೋಡಿಸುವುದರಿಂದ ಪಾಕಿಸ್ತಾನಕ್ಕೆ ಭಾರೀ ಲಾಭವಿದೆ. ಅದೇ ಭಯೋತ್ಪಾದಕರು ಮತ್ತು ಕ್ರಿಮಿನಲ್ ಗಳಿಗೆ ನೆಲೆ ನೀಡುವುದರಿಂದ ಪಾಕಿಸ್ತಾನಕ್ಕೆ ಬಹಳಷ್ಟು ನಷ್ಟವಿದೆ ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇದೇ ವೇಳೆ ಅವರು "ಭಾರತ ಮತ್ತು ಪಾಕಿಸ್ತಾನ ಪರಮಾಣು ಅಸ್ತ್ರ ಹೊಂದಿರುವ ದೇಶಗಳಾಗಿವೆ. ಈ ದೇಶಗಳ ನಡುವಿನ ಉದ್ವಿಗ್ನ ಸಂಬಂಧಗಳು ಸಂಘರ್ಷಕ್ಕೆ ನಾಂದಿಯಾಗಬಹುದು ಮತ್ತು ಅದು ಸಂಭವಿಸಲೂಹುದು," ಎಂದು ಹೇಳಿದ್ದಾರೆ.

English summary
US President Donald Trump hit out at Pakistan and said that the country gives a safe haven to agents of chaos. “Pakistan often gives safe haven to agents of chaos,” he said, noting that there is nuclear-powered tensions between Pakistan and its neighbor India. Trump called terrorists “nothing but thugs and criminals and, that’s right, losers.”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X