ಉದ್ಯೋಗ ಸೃಷ್ಟಿಗೆ ಏನು ಮಾಡ್ತೀರಿ ಟ್ರಂಪ್?: ಬರಾಕ್ ಒಬಾಮ

By: ಒನ್ಇಂಡಿಯಾ ಪ್ರತಿನಿಧಿ
Subscribe to Oneindia Kannada

ವಾಷಿಂಗ್ಟನ್, ನವೆಂಬರ್ 8: ಈಗಿನ ಪರಿಸ್ಥಿತಿಯನ್ನು ಹೀಗಳೆಯೋದು ಬಿಟ್ಟರೆ ಉದ್ಯೋಗ ಸೃಷ್ಟಿಗೆ ಏನು ಮಾಡ್ತೀನಿ ಅನ್ನೋ ಬಗ್ಗೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಏನೂ ಮಾತನಾಡಲ್ಲ ಎನ್ನುವ ಮೂಲಕ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ತಿರುಗೇಟು ನೀಡಿದ್ದಾರೆ. ಕೆಲಸ ಕೊಡಬೇಕು ಅನ್ನೋ ಬಗ್ಗೆ ಆತನಿಗೆ ಯಾವುದೇ ಗಂಭೀರ ಆಲೋಚನೆ ಇಲ್ಲ ಎಂದಿದ್ದಾರೆ.

ನ್ಯೂ ಹ್ಯಾಂಪ್ ಶೈರ್ ನಲ್ಲಿ ಸೋಮವಾರ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಒಬಾಮ, ಈ ಚುನಾವಣೆಯಲ್ಲಿ ಅಮೆರಿಕಾ ಆರ್ಥಿಕ ಸ್ಥಿತಿ ಬಗ್ಗೆ ಯಾಕೆ ಅಷ್ಟಾಗಿ ಮಾತನಾಡುತ್ತಿಲ್ಲ ಅನ್ನೋದು ಗೊತ್ತಾ ನಿಮಗೆ? ಏಕೆಂದರೆ, ಕಳೆದ ಎಪ್ಪತ್ಮೂರು ತಿಂಗಳಿಂದ ನಾವು ಉದ್ಯೋಗ ಸೃಷ್ಟಿಸಿದ್ದೇವೆ. ಸಂಬಳ ಜಾಸ್ತಿ ಆಗ್ತಿದೆ. ಕಳೆದ ವಾರದ ಲೆಕ್ಕಾಚಾರ ಹೇಳಬೇಕು ಅಂದರೆ, ನಿರುದ್ಯೋಗದ ಪ್ರಮಾಣ ಶೇ 4.9ರಷ್ಟಿದೆ. ಇದು ಕಳೆದ ಒಂಬತ್ತು ವರ್ಷದಲ್ಲೇ ಕನಿಷ್ಠ ಪ್ರಮಾಣದ್ದು ಎಂದಿದ್ದಾರೆ.[ಅಮೆರಿಕಾ ಅಧ್ಯಕ್ಷರ ಆಯ್ಕೆ ತೀರ್ಮಾನ, ಇಂದು ಮತದಾನ]

Barack Obama

ಡೊನಾಲ್ಡ್ ಟ್ರಂಪ್ ಯಾವಾಗಲೂ ವಾಸ್ತವ ಹೇಳೋದನ್ನು ಒಪ್ಪೋದಿಲ್ಲ ಅಥವಾ ಅದನ್ನು ತಡೆಯೋ ಪ್ರಯತ್ನ ಮಾಡ್ತಾರೆ. ಅವರು ಇದು 'ದುರಂತ' ಅಂದಿದ್ದಾರೆ. ಇದು ದುರಂತವೇ? ನಾನ್ ಈಗಷ್ಟೇ ಮಿಶಿಗನ್ ನಿಂದ ಬಂದೆ. ದುರಂತ ಅಂದರೆ ಎಂಟು ವರ್ಷಗಳ ಹಿಂದೆ ಇದ್ದದ್ದು. ಆಟೋ ಮೊಬೈಲ್ ಇಂಡಸ್ಟ್ರಿ ಸಂಕಷ್ಟದಲ್ಲಿತ್ತು. ನಿರುದ್ಯೋಗ ಸಮಸ್ಯೆ ತೀವ್ರವಾಗಿತ್ತು. ಯಾವೆಲ್ಲ ಯೂನಿಟ್ ಗಳು ಈ ಭಾಗದಲ್ಲಿ ಬಂದ್ ಆಗಿದ್ದವೋ ಅಲ್ಲೆಲ್ಲಾ ಎರಡೆರಡು ಪಾಳಿಯಲ್ಲಿ ಕೆಲಸ ಮಾಡ್ತಿದ್ದಾರೆ ಎಂದರು.[ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಮುನ್ನಲೆ]

ಇನ್ನು ಟ್ರಂಪ್ ಆಲೋಚನೆ ಹೇಗೆ ಗೊತ್ತಾ? ಮಿಷಿಗನ್ ನಲ್ಲಿರುವ ಆಟೋ ಮೊಬೈಲ್ ಕಾರ್ಖಾನೆಗಳನ್ನು ಕಡಿಮೆ ಸಂಬಳ ಕೊಡುವ ರಾಜ್ಯಗಳಿಗೆ ಸ್ಥಳಾಂತರಿಸಬೇಕಂತೆ. ಈ ರೀತಿ ಮಾಡಿದರೆ, ತಮ್ಮ ಕೆಲಸ ವಾಪಸ್ ಸಿಗಲಿ ಅನ್ನೋ ಕಾರಣಕ್ಕಾದರೂ ನೌಕರರು ಕಡಿಮೆ ಸಂಬಳಕ್ಕೆ ಒಪ್ತಾರೆ ಅನ್ನೋದು ಟ್ರಂಪ್ ಆಲೋಚನೆ, ಆರ್ಥಿಕ ನೀತಿ ಎಂದು ಒಬಾಮ ವ್ಯಂಗ್ಯವಾಡಿದ್ದಾರೆ.[ಟ್ರಂಪ್ ಗಿಂತ 4 ಪಾಯಿಂಟ್ ಮುಂದಿದ್ದಾರೆ ಹಿಲರಿ ಕ್ಲಿಂಟನ್]

ಹೊಸ ಉದ್ಯೋಗದಲ್ಲಿ ದೊಡ್ಡ ಮಟ್ಟದ ಬಂಡವಾಳ ತರಬೇಕು ಅನ್ನೋದು ಹಿಲರಿ ಯೋಜನೆ. ಜನರ ವೇತನದಲ್ಲಿ ಹೆಚ್ಚಳ ಆಗಬೇಕು, ಕಾಲೇಜು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸಿಗಬೇಕು ಎಂಬ ಅಲೋಚನೆ ಆಕೆಗಿದೆ. ಆದ್ದರಿಂದ ಹಿಲರಿಯೇ ಮುಂದಿನ ಅಧ್ಯಕ್ಷೆಯಾಗಬೇಕು ಎಂದು ಒಬಾಮ ಪ್ರಚಾರ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US President Barack Obama has slammed Republican presidential nominee Donald Trump, saying he has nothing to offer on jobs, except for describing the current situation as a disaster.
Please Wait while comments are loading...