Donald Trump: ಟ್ರಂಪ್ ಅವರಿಗೆ ನೊಬೆಲ್ ಕೊಡದೇ ಇದ್ದರೆ ಅದು ಅಮೆರಿಕಗೆ ಮಾಡುವ ಅವಮಾನ?

ಡೊನಾಲ್ಡ್ ಟ್ರಂಪ್ ತಮ್ಮ ಬಗ್ಗೆ ಪದೇ, ಪದೇ ತಾವೇ ಬಿಲ್ಡಪ್ ಕೊಡುವುದು ಮುಂದುವರಿದಿದೆ. ಈ ರೀತಿ ಭಾರತ & ಪಾಕಿಸ್ತಾನ ಯುದ್ಧದ ವಿಚಾರದಲ್ಲೂ ಮಾತನಾಡಿರುವ ಡೊನಾಲ್ಡ್ ಟ್ರಂಪ್ ಅವರು ತಮಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡಬೇಕು ಅಂತಾ ಹೇಳಿದ್ದರು. ಆ ನಂತರ ಮತ್ತೆ ಮತ್ತೆ ಟ್ರಂಪ್ ಇದೇ ವಿಚಾರ ಪ್ರಸ್ತಾಪ ಮಾಡಿ ಒತ್ತಡ ಹಾಕುವುದು ಮುಂದುವರಿದಿದೆ, ಅಲ್ಲದೆ ಈಗ ಮತ್ತೊಂದು ಬಾಣ ಕೂಡ ಬಿಟ್ಟಿರುವ ಡೊನಾಲ್ಡ್ ಟ್ರಂಪ್ ನೊಬೆಲ್ ಪಡೆಯಲು ಸಜ್ಜಾಗಿದ್ದಾರೆ!

ಹೌದು, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಅಲ್ಲೋಲ & ಕಲ್ಲೋಲವೇ ಸೃಷ್ಟಿ ಆಗಿದೆ ಅನ್ನೋದು ಅವರ ವಿರೋಧಿಗಳ ಮಾತು. ಆದರೆ ಟ್ರಂಪ್ ಅವರು ಬಂದ ನಂತರ ಅಮೆರಿಕಗೆ ಒಳ್ಳೆಯದೇ ಆಗುತ್ತಿದೆ ಅನ್ನೋ ವಾದವನ್ನ ಬೆಂಬಲಿಗರು ಮುಂದೆ ಇಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ & ವಿರೋಧಿಗಳ ನಡುವೆ ಈ ವಿಚಾರದಲ್ಲಿ ಸಾಕಷ್ಟು ತಿಕ್ಕಾಟ ನಡೆಯುವಾಗ ಇದು ನೊಬೆಲ್ ಶಾಂತಿ ಪುರಸ್ಕಾರಕ್ಕೂ ತಟ್ಟುತ್ತಿದೆ. ಅಲ್ಲದೇ ನನಗೇ ನೊಬೆಲ್ ಬೇಕೆ ಬೇಕು ಅಂತಾ ಕೂಡ ಪಟ್ಟು ಹಿಡಿದಿದ್ದಾರೆ ಟ್ರಂಪ್ ಮಹಾಶಯ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಹೊಸ ಬಾಣ ಬಿಟ್ಟು, ನನಗೆ ನೊಬೆಲ್ ಕೊಡದೇ ಇದ್ದರೆ ಅದು ಅಮೆರಿಕಗೆ ಮಾಡುವ ಅವಮಾನ ಎಂದಿದ್ದಾರೆ!

Trump Claims Nobel Prize Snub Is A Major Insult to the US

ಚೀನಾ ಅಧ್ಯಕ್ಷರ ಭೇಟಿಗೆ ಟ್ರಂಪ್ ಸಜ್ಜು!

ಅಂದಹಾಗೆ ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇರವಾಗಿ ಚೀನಾ ಅಧ್ಯಕ್ಷ ಜಿನ್‌ಪಿಂಗ್ & ಅವರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಇನ್ನು ಕೇವಲ 4 ವಾರ ಒಳಗೆ ಇಬ್ಬರ ನಡುವೆ ಮಹತ್ವದ ಮಾತುಕತೆ ನಡೆಯುವ ನಿರೀಕ್ಷೆ ಇದೆ. ಈ ಮೂಲಕ, ಅಮೆರಿಕದ ರೈತರಿಗೆ ಹೊಸ ಹುಮ್ಮಸ್ಸು ತರಿಸಲು ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಾದಂತೆ ಕಾಣುತ್ತಿದೆ. ಈ ನಡುವೆ ಜಾಗತಿಕ ಮಟ್ಟದಲ್ಲಿ ಹಲವು ದೇಶಗಳು ಅಮೆರಿಕ ವಿರುದ್ಧ ರೊಚ್ಚಿಗೆದ್ದಿವೆ. ಇಷ್ಟೆಲ್ಲದರ ನಡುವೆ ಕೂಡ ತಮಗೆ ನೊಬೆಲ್ ಬೇಕು ಅಂತಾ ಡಿಮ್ಯಾಂಡ್ ಮಾಡ್ತಿದ್ದಾರೆ!

ನೊಬೆಲ್ ಸಿಗುವುದು ಗ್ಯಾರಂಟಿ?

ಇನ್ನೇನು ಕೆಲವೇ ದಿನಗಳಲ್ಲಿ ನೊಬೆಲ್ ಪ್ರಶಸ್ತಿ ಪ್ರಕಟ ಆಗಲಿದ್ದು, ಇದೇ ಸಮಯದಲ್ಲಿ ಅಮೆರಿಕ ಅಧ್ಯಕ್ಷರು ಈ ರೀತಿ ಹೇಳಿಕೆ ನೀಡಿರುವುದು ಭಾರಿ ಕುತೂಹಲ ಕೇರಳಿಸಿದೆ. ಆದರೆ ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಕೂಡ ದೊಡ್ಡ ಚರ್ಚೆಯು ಶುರುವಾಗಿದ್ದು, ಟ್ರಂಪ್ ಅವರ ಪರವಾಗಿ & ವಿರುದ್ಧವಾಗಿ ಚರ್ಚೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+