Donald Trump: ಜೋ ಬೈಡನ್ ಬೆಂಬಲಿಗರಿಗೆ ಮತ್ತೊಂದು ಆಘಾತ ನೀಡಿದ ಡೊನಾಲ್ಡ್ ಟ್ರಂಪ್!
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಅಮೆರಿಕದಲ್ಲಿ ದೊಡ್ಡ ಬದಲಾವಣೆಗಳು ನಡೆಯುತ್ತಿವೆ. ಅದರಲ್ಲೂ ಜೋ ಬೈಡನ್ ಅವಧಿಯಲ್ಲಿ ಯಾರು ಯಾರು ಅಮೆರಿಕದಲ್ಲಿ ಉನ್ನತ ಹುದ್ದೆ ಪಡೆದಿದ್ದರೋ ಅವರನ್ನೆಲ್ಲಾ ಮನೆಗೆ ಕಳುಹಿಸುತ್ತಿದ್ದಾರೆ ಟ್ರಂಪ್. ಇತ್ತೀಚೆಗೆ ಸುಮಾರು 10,000 ಸರ್ಕಾರಿ ನೌಕರರನ್ನು ತೆಗೆದು ಹಾಕುವ ನಿರ್ಧಾರಕ್ಕೆ ಸಹಿ ಹಾಕಿದ ಬೆನ್ನಲ್ಲೇ ಅಮೆರಿಕದ ಕಾನೂನು ಇಲಾಖೆಯಲ್ಲೂ ಮೇಜರ್ ಸರ್ಜರಿಗೆ ಡೊನಾಲ್ಡ್ ಟ್ರಂಪ್ ಮುಂದಾಗಿದ್ದಾರೆ.
2016 ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಗೆದ್ದು ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ ಆಗಿದ್ದ ಡೊನಾಲ್ಡ್ ಟ್ರಂಪ್ 2020 ರಲ್ಲಿ ಸೋತು ಹೋಗಿದ್ದರು. ಆದರೆ 2024 ರಲ್ಲಿ ಮತ್ತೆ ಗೆದ್ದು ಇದೀಗ ಅಧಿಕಾರಕ್ಕೆ ಬಂದಿರುವ ಡೊನಾಲ್ಡ್ ಟ್ರಂಪ್, ತಮ್ಮ ವಿರೋಧಿಗಳ ವಿರುದ್ಧ ರಿವೇಂಜ್ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಇದೆ. ಇಂತಹ ಆರೋಪಗಳ ನಡುವೆ, ಜೋ ಬೈಡನ್ ಬೆಂಬಲಿಗರಿಗೆ ಮತ್ತೊಂದು ಆಘಾತ ನೀಡಿದ್ದಾರೆ ಟ್ರಂಪ್. ಅಮೆರಿಕದ ಕಾನೂನು ಇಲಾಖೆಯಲ್ಲಿ ದೊಡ್ಡ ಬದಲಾವಣೆಗೆ ಕೈಹಾಕಿದ್ದಾರೆ ಅಮೆರಿಕದ ನೂತನ ಅಧ್ಯಕ್ಷ!

ಅಟಾರ್ನಿ ಜನರಲ್‌ಗಳಿಗೆ ಮನೆ ದಾರಿ!
ಅಮೆರಿಕದ ಸುಮಾರು 93 ಅಟಾರ್ನಿ ಜನರಲ್‌ಗಳು ಇದೀಗ ಕೆಲಸ ಕಳೆದುಕೊಳ್ಳುವ ಭೀತಿಗೆ ನಲುಗಿ ಹೋಗಿದ್ದಾರೆ. ಜೋ ಬೈಡನ್ ಸರ್ಕಾರ ಇವರನ್ನು ನೇಮಕ ಮಾಡಿತ್ತು. ಆದರೆ ಈ ಅಟಾರ್ನಿ ಜನರಲ್‌ಗಳು ಕಾನೂನು ಇಲಾಖೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಮಾಡಿದ್ದಾರೆ ಟ್ರಂಪ್. ಇದೇ ಕಾರಣಕ್ಕೆ ಜೋ ಬೈಡನ್ ಸರ್ಕಾರ ನೇಮಕ ಮಾಡಿದ್ದ 93 ಅಟಾರ್ನಿ ಜನರಲ್‌ಗಳನ್ನು ಬದಲಾಯಿಸಲು ಇದೀಗ ಟ್ರಂಪ್ ಅವರ ಆಡಳಿತ ಮುಂದಾಗಿದೆ.
ಡೊನಾಲ್ಡ್ ಟ್ರಂಪ್ ಈ ರೀತಿಯಾಗಿ 93 ಅಟಾರ್ನಿ ಜನರಲ್‌ಗಳನ್ನು ಬದಲಾಯಿಸಲು ವಿಶೇಷ ಆದೇಶ ಹೊರಡಿಸಿದ್ದು, ಅಮೆರಿಕದ ಕಾನೂನು ಇಲಾಖೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ ಈ ಯುದ್ಧ ಇನ್ನಷ್ಟು ತೀಕ್ಷ್ಣವಾಗುವ ಲಕ್ಷಣಗಳು ಗೋಚರಿಸಿವೆ. ಹಾಗೇ ಡೊನಾಲ್ಡ್ ಟ್ರಂಪ್ ಅಮೆರಿಕದ ಆಡಳಿತದಲ್ಲಿ ಸಂಪೂರ್ಣ ಹಿಡಿತ ಸಾಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್
ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಸಾಲು ಸಾಲು ವಿವಾದ ಎದುರಾಗಿವೆ. ಅದೇ ರೀತಿ ಅಮೆರಿಕದ ಸರ್ಕಾರಿ ನೌಕರರಿಗೂ ಸಮಸ್ಯೆ ಸೃಷ್ಟಿಯಾಗಿದೆ. ಹೀಗೆಯೇ, ಅಮೆರಿಕದ ಸಾವಿರಾರು ಸರ್ಕಾರಿ ನೌಕರರಿಗೂ ನಡುಕ ಶುರುವಾಗಿದೆ. ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಸರ್ಕಾರಿ ನೌಕರರು ನಲುಗಿ ಹೋಗಿದ್ದಾರೆ. ಮೈತುಂಬಾ ಸಾಲ ಮಾಡಿಕೊಂಡು ಬೀದಿಗೆ ಬೀಳುವ ಪರಿಸ್ಥಿತಿಗೆ ತಲುಪಿರುವ ಅಮೆರಿಕದಲ್ಲಿ ಬರೋಬ್ಬರಿ 10,000 ಸರ್ಕಾರಿ ನೌಕರರಿಗೆ ಗೇಟ್ ಪಾಸ್ ಗ್ಯಾರಂಟಿ ಆಗಿದೆ. ಇದರ ನಡುವೆ ಅಟಾರ್ನಿ ಜನರಲ್‌ಗಳನ್ನೂ ಕೆಲಸದಿಂದ ತೆಗೆದು ಹಾಕಲು ಮುಂದಾಗಿದ್ದಾರೆ ಟ್ರಂಪ್.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications