Donald Trump: ತೆರಿಗೆ ಯುದ್ಧದಲ್ಲಿ ಕೆನಡಾ & ಮೆಕ್ಸಿಕೋ ಮೊದಲ ಬಲಿಪಶು?
ಡೊನಾಲ್ಡ್ ಟ್ರಂಪ್ ಹಠ ಹಿಡಿದು ಕೂತಿದ್ದಾರೆ, ಅಮೆರಿಕದ ವಸ್ತುಗಳ ಮೇಲೆ ತೆರಿಗೆ ಹೇರುವ ಪ್ರತಿಯೊಂದು ದೇಶಕ್ಕೂ ಮರು ತೆರಿಗೆ ಹೇರಲು ನಿರ್ಧಾರ ಕೈಗೊಂಡಿದ್ದಾರೆ. ಹೀಗಾಗಿ ಇದೀಗ ಹಲವು ದೇಶಗಳ ವಿರುದ್ಧ ಭಾರಿ ದೊಡ್ಡ ಪ್ರಮಾಣದ ಟ್ಯಾಕ್ಸ್ ಹಾಕಲು ಮುಂದಾಗಿದ್ದಾರೆ. ಈ ಒತ್ತಡದ ನಡುವೆ ಮಾರ್ಚ್ 4 ರಿಂದ ಕೆನಡಾ & ಮೆಕ್ಸಿಕೋ ವಿರುದ್ಧ ಭಾರಿ ದೊಡ್ಡ ಪ್ರಮಾಣದ ತೆರಿಗೆ ಜಾರಿ ಮಾಡಲು ಸಜ್ಜಾಗಿದ್ದಾರೆ.
ಅಮೆರಿಕ ಸಂಕಷ್ಟದಲ್ಲಿ ಸಿಲುಕಿದ್ದು, ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದೆ. ಈ ಕಾರಣಕ್ಕೆ ತನ್ನ ಆರ್ಥಿಕ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಮುಂದಾಗಿದ್ದಾರೆ ಡೊನಾಲ್ಡ್ ಟ್ರಂಪ್. ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮರು ಕ್ಷಣದಿಂದಲೆ ಟ್ರಂಪ್ ಹೊಸ ಹೊಸ ಸ್ಫೋಟಕ ನಿರ್ಧಾರ ಪ್ರಕಟಿಸುತ್ತಿದ್ದಾರೆ. ಅದರಲ್ಲೂ ತೆರಿಗೆ ವಿಚಾರದಲ್ಲಿ ಇದೇ ಟ್ರಂಪ್ ಕೈಗೊಂಡಿರುವ ನಿರ್ಧಾರ ಭಾರಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ. ಇಷ್ಟೆಲ್ಲದರ ನಡುವೆ ಕೆನಡಾ & ಮೆಕ್ಸಿಕೋಗೆ ಮಾರ್ಚ್ 4 ರಿಂದಲೇ ಶಾಕ್ ಕೊಡಲು ಮುಂದೆ ನುಗ್ಗಿರುವ ಟ್ರಂಪ್ ಸಂಚಲನ ಸೃಷ್ಟಿ ಮಾಡಿದ್ದಾರೆ.

ಅಮೆರಿಕದ ಅಧ್ಯಕ್ಷರಿಂದ ತೆರಿಗೆ ಶಾಕ್!
ಹೌದು, ಕೆನಡಾ ಮತ್ತು ಅಮೆರಿಕ ಇಷ್ಟು ದಿನಗಳ ಕಾಲ ಸ್ನೇಹಿತರಾಗಿ ಇದ್ದರು. ಆದರೆ ಟ್ರಂಪ್ ಯಾವಾಗ ಅಧ್ಯಕ್ಷರಾಗಿ ಆಯ್ಕೆ ಆದರೋ ಆ ನಂತರವೇ ಎಲ್ಲವೂ ಬದಲಾಗಿ ಹೋಗುತ್ತಿದ್ದು, ಇಷ್ಟು ದಿನಗಳ ಕಾಲ ಇದ್ದ ಸ್ನೇಹ ದ್ವೇಷವಾಗಿ ಬದಲಾಗುತ್ತಿದೆ. ಅದರಲ್ಲಿಯೂ ಅಮೆರಿಕ & ಕೆನಡಾ ವಿರುದ್ಧ ಭೀಕರ ತೆರಿಗೆ ಯುದ್ಧಕ್ಕೆ ವೇದಿಕೆ ಸಿದ್ಧವಾಗಿದೆ. ಡೊನಾಲ್ಡ್ ಟ್ರಂಪ್ ಹೀಗೆ ಕೆನಡಾ ವಿರುದ್ಧ ಭಾರಿ ಪ್ರಮಾಣದ ತೆರಿಗೆ ಹೇರಲು ಮುಂದಾಗಿರುವ ಹಿನ್ನೆಲೆ ಸಾಕಷ್ಟು ಆಕ್ರೋಶ ಕೂಡ ವ್ಯಕ್ತವಾಗಿದೆ. ಅಲ್ಲದೆ ಕೆನಡಾ ಕೂಡ ಅಮೆರಿಕಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಒಟ್ನಲ್ಲಿ ದಿನದಿಂದ ದಿನಕ್ಕೆ ಕೆನಡಾ & ಅಮೆರಿಕ ನಡುವೆ ಕಿರಿಕ್ ಜೋರಾಗುತ್ತಿದೆ. ಹೀಗಾಗಿ, ಕೆನಡಾ ಕೂಡ ಅಮೆರಿಕ ವಿರುದ್ಧ ರಿವೇಂಜ್ ತೆಗೆದುಕೊಳ್ಳುವ ಮಾತನಾಡುತ್ತಿದೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳು ತೆರಿಗೆ ಮ್ಯಾಟರ್ ಮುಂದಿಟ್ಟುಕೊಂಡು ಬಡಿದಾಡುವ ಸಾಧ್ಯತೆ ಹೆಚ್ಚಾಗಿದೆ.
ಅದರಲ್ಲೂ ಅಮೆರಿಕದ ಪಕ್ಕದ ದೇಶವೇ ಹೀಗೆ ತಿರುಗಿ ಬಿದ್ದಿರುವುದು ಮುಂದಿನ ದಿನಗಳಲ್ಲಿ ದೊಡ್ಡ ನಷ್ಟವನ್ನ ಉಂಟುಮಾಡುವ ಆತಂಕ ಅಮೆರಿಕಗೆ ಆವರಿಸಿದೆ. ಟ್ರಂಪ್ ಇದೀಗ ಮುಂದಿಟ್ಟಿರುವ ಬೇಡಿಕೆ ಪ್ರಕಾರ ಕೆನಡಾ & ಮೆಕ್ಸಿಕೋ ವಿರುದ್ಧ ಶೇಕಡಾ 25 ರಷ್ಟು ತೆರಿಗೆ ಹಾಕಲು ಸಿದ್ಧತೆ ನಡೆದಿದೆ. ಹಾಗೇ ಚೀನಾ ವಸ್ತುಗಳ ಮೇಲೆ ಶೇಕಡಾ 10 ಇರುವ ತೆರಿಗೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ.












Click it and Unblock the Notifications