Ukraine War: ಉಕ್ರೇನ್ ಖಾಲಿ.. ಖಾಲಿ.. ಅಮೆರಿಕ ಜಾಲಿ.. ಜಾಲಿ..!
ಡೊನಾಲ್ಡ್ ಟ್ರಂಪ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಕ್ರೇನ್‌ಗೆ ಒಂದು ಗತಿ ಕಾಣಿಸುವ ಕೆಲಸ ಆರಂಭವಾಗಿದೆ. ಮೊದಲಿಗೆ ಮಾತು ಕೇಳುತ್ತಿಲ್ಲ ಅಂತಾ ಉಕ್ರೇನ್ ದೇಶಕ್ಕೆ ಅನುದಾನ ಕಟ್ ಮಾಡಲಾಗಿತ್ತು. ಆ ಮೂಲಕ ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್ ಕೈ ಖಾಲಿ, ಖಾಲಿ ಆಗಿತ್ತು. ಹೀಗಾಗಿ ಸೋಲುವ ಹಂತಕ್ಕೂ ಇದೀಗ ಉಕ್ರೇನ್ ತಲುಪಿದೆ. ಇಂತಹ ಸ್ಥಿತಿ ಇರುವಾಗಲೇ ಮತ್ತೊಂದು ಆಘಾತ ನೀಡಿದೆ ಅಮೆರಿಕ!
ಹೌದು, ಉಕ್ರೇನ್ ದೇಶದಲ್ಲಿ ಅತಿಹೆಚ್ಚು ಪ್ರಮಾಣದ ಅದಿರು ನಿಕ್ಷೇಪಗಳು ಇವೆ. ಸಾಕಷ್ಟು ಸಂಪತ್ತು ಉಕ್ರೇನ್‌ನ ನೆಲದಲ್ಲಿ ಇದೆ. ಹೀಗಾಗಿ ಅಮೆರಿಕದ ಕಣ್ಣು ಇದೀಗ ಉಕ್ರೇನ್ ದೇಶದ ಸಂಪನ್ಮೂಲದ ಮೇಲೆ ನೆಟ್ಟಿದೆ. ಯಾಕಂದ್ರೆ ಅಮೆರಿಕ ಮಾಡಿದ ಸಹಾಯಕ್ಕೆ ಪ್ರತಿಯಾಗಿ ಇದೀಗ ಉಕ್ರೇನ್ ದೇಶ ಅದಿರು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳನ್ನ ನಮಗೆ ಕೊಡಬೇಕು, ಅಂತಾ ಟ್ರಂಪ್‌ರ ಸರ್ಕಾರ ಡಿಮ್ಯಾಂಡ್ ಇಟ್ಟಿದೆ. ಇದೀಗ ಈ ಬಗ್ಗೆ ಅಧಿಕೃತ ಹೇಳಿಕೆಯೂ ಡೊನಾಲ್ಡ್ ಟ್ರಂಪ್ ಅವರಿಂದ ಹೊರಬಿದ್ದಿದೆ.

ಡೊನಾಲ್ಡ್ ಟ್ರಂಪ್ ಕೊಟ್ಟರು ಶಾಕ್!
ಕೆಲವು ತಿಂಗಳ ಹಿಂದೆ ಉಕ್ರೇನ್ ದೇಶದ ಜೊತೆಗೆ ಅದಿರುಗಳು ಅಂದ್ರೆ ನೈಸರ್ಗಿಕ ಸಂಪನ್ಮೂಲ ಬಳಕೆ ಬಗ್ಗೆ ಮಾತುಕತೆ ಆರಂಭವಾಗಿತ್ತು. ಹೀಗಿದ್ದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಸಮಯವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ಅದೇ ರೀತಿ ಇದೀಗ ಉಕ್ರೇನ್ ಜೊತೆಗೆ ಅಂತಿಮ ಹಂತದ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಈ ಒಪ್ಪಂದ ಮಾಡಿಕೊಂಡ ನಂತರ ಅಮೆರಿಕ ನೇರವಾಗಿ ಉಕ್ರೇನ್ ನೆಲದಲ್ಲಿ ಗಣಿಗಾರಿಕೆ ಶುರು ಮಾಡಿ, ಭಾರಿ ದೊಡ್ಡ ಪ್ರಮಾಣದಲ್ಲಿ ಸಂಪನ್ಮೂಲ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.
2022ರಲ್ಲಿ ಶುರುವಾಗಿತ್ತು ಡೆಡ್ಲಿ ವಾರ್!
ಒಟ್ನಲ್ಲಿ ಯುದ್ಧ ಒಂದು ಏನೆಲ್ಲಾ ಅವಾಂತರ ಸೃಷ್ಟಿ ಮಾಡಬಹುದು? ಅನ್ನೋದನ್ನ ಆಧುನಿಕ ಜಗತ್ತಿನಲ್ಲಿ ಮನುಷ್ಯರು ಅದ್ಭುತವಾಗಿ ಕಲಿತಿದ್ದಾರೆ. 2022 ರಲ್ಲಿ ಆರಂಭ ಆಗಿದ್ದ ಈ ರಷ್ಯಾ & ಉಕ್ರೇನ್ ಯುದ್ಧವು ಆರ್ಥಿಕವಾಗಿ ಸೇರಿದಂತೆ ನೂರಾರು ರೀತಿಯ ಸಮಸ್ಯೆ ಸೃಷ್ಟಿಸಿ ಎಲ್ಲವನ್ನೂ ನಾಶ ಮಾಡಿ ಹಾಕಿರುವ ಆರೋಪ ಇದೆ. ಡೊನಾಲ್ಡ್ ಟ್ರಂಪ್‌ಗೆ ಕೂಡ ಯುದ್ಧವನ್ನು ನಿಲ್ಲಿಸುವ ಸವಾಲು ಇದೆ. ತಾವು ಅಧಿಕಾರಕ್ಕೆ ಬಂದ ಮುಂದಿನ 24 ಗಂಟೆ ಒಳಗೆ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಚಾಲೆಂಜ್ ಮಾಡಿದ್ದರು ಡೊನಾಲ್ಡ್ ಟ್ರಂಪ್. ಆದರೆ ಅದು ಇನ್ನೂ ಸಾಧ್ಯ ಆಗಿಲ್ಲ, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದು ಸರಿಯಾಗಿ 2 ತಿಂಗಳು ಕಳೆದಿದೆ.












Click it and Unblock the Notifications