ಏಪ್ರಿಲ್ 18ಕ್ಕೆ ಲಂಡನ್ ನಲ್ಲಿ ಬಸವೇಶ್ವರ ಪುತ್ಥಳಿಗೆ ಮೋದಿ ಗೌರವ

Posted By:
Subscribe to Oneindia Kannada

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 18ರಂದು ಲಂಡನ್ ನಲ್ಲಿರುವ ಥೇಮ್ಸ್ ನದಿ ದಡದಲ್ಲಿರುವ ಜಗಜ್ಯೋತಿ ಬಸವೇಶ್ವರ ವಿಗ್ರಹಕ್ಕೆ, ಬಸವಣ್ಣನವರ ಜಯಂತ್ಯೋತ್ಸವದಂದು ಗೌರವ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಬಸವೇಶ್ವರ ಫೌಂಡೇಷನ್ ಆಯೋಜಿಸಿದೆ.

ಲಂಡನ್ ನಲ್ಲಿ ಬಸವೇಶ್ವರ ಜಯಂತಿ, ಹೈ ಕಮಿಷನರ್ ರಿಂದ ಗೌರವ

ಬಸವೇಶ್ವರ ಫೌಂಡೇಷನ್ ನ ಅಧ್ಯಕ್ಷ ಡಾ.ನೀರಜ್ ಪಾಟೀಲ್ ಅವರಿಗೆ ಈ ಭೇಟಿ ಬಗ್ಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಖಾತ್ರಿ ಪಡಿಸಲಾಗಿದೆ. ಅಂದಹಾಗೆ ನೀರಜ್ ಪಾಟೀಲ್ ಅವರು ಲಂಡನ್ ನ ಲ್ಯಾಂಬೆತ್ ಮಾಜಿ ಮೇಯರ್ ಕೂಡ ಹೌದು. ಅವರ ಅಧಿಕಾರಾವಧಿಯಲ್ಲಿ ಬಸವೇಶ್ವರ ವಿಗ್ರಹದ ಸ್ಥಾಪನೆಗೆ ಭೂಮಿಯನ್ನು ಪಡೆಯಲಾಯಿತು.

Tribute to Basaveshwara statue London by Prime Minister Narendra Modi

ಬಸವೇಶ್ವರರ ವಿಗ್ರಹವನ್ನು ಭಾರತದ ಪ್ರಧಾನಿಯೇ ಉದ್ಘಾಟನೆ ಮಾಡಿದ್ದರು. ಬ್ರಿಟಿಷ್ ಸಂಸತ್ತಿನ ಆವರಣದಲ್ಲಿ ಹೀಗೊಂದು ವಿಗ್ರಹವನ್ನು ಸ್ಥಾಪಿಸಲು ಅನುಮತಿ ನೀಡಿದ್ದು ಇದೇ ಮೊದಲು. ಪ್ರಜಾಪ್ರಭುತ್ವದ ಆಲೋಚನೆ ಹಾಗೂ ಜಾತಿ ನಿರ್ಮೂಲನೆ ಬಗ್ಗೆ ಆಲೋಚನೆ ಹೊಂದಿದ್ದ ಹನ್ನೆರಡನೇ ಶತಮಾನದ ದಾರ್ಶನಿಕ, ಕರ್ನಾಟಕ ಮೂಲದ ಬಸವಣ್ಣ ಅವರ ಪುತ್ಥಳಿಯನ್ನು ನವೆಂಬರ್ 14, 2015ರಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi will be paying tribute to Basaveshwara statue in London 18th April 2018.The event will be organized by The Basaveshwara Foundation, a non-profit organization based in UK that has erected the statue of Basaveshwara on the bank of river Thames.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ