ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ ನ್ಯೂಸ್: ಕೊರೊನಾ ವೈರಸ್ ಗೆ ಲಸಿಕೆ, ಮನುಷ್ಯರ ಮೇಲೆ ಪ್ರಯೋಗ ಆರಂಭ!

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವಕ್ಕೆ ವಿಶ್ವವೇ ನೆಮ್ಮದಿಯಿಲ್ಲದೆ ನಿದ್ದೆಗೆಟ್ಟು ಕೂತಿರುವ ಈ ಹೊತ್ತಲ್ಲಿ ಒಂದು ಪ್ರಯೋಗ ಮಾಡಲಾಗುತ್ತಿದೆ. ಒಂದು ವೇಳೆ ಈ ಪ್ರಯೋಗ ಯಶಸ್ವಿಯಾಗಿಬಿಟ್ಟರೆ, ಆತಂಕದಲ್ಲಿ ಇರುವ ಇಡೀ ವಿಶ್ವವೇ ನಿಟ್ಟುಸಿರು ಬಿಟ್ಟ ಹಾಗೆ.!

Recommended Video

Covid 19 : First human trial of vaccine begins in US | Vaccination trail | Oneindiakannada

ಡೆಡ್ಲಿ ಕೊರೊನಾ ವೈರಸ್ ನ ಬಗ್ಗು ಬಡಿಯಲು ಅಮೇರಿಕಾದಲ್ಲಿ ಲಸಿಕೆ ಕಂಡು ಹಿಡಿಯಲಾಗುತ್ತಿದೆ. Moderna,Inc ಎಂಬ ಸಂಸ್ಥೆ ಸಂಭವನೀಯ ಕೊರೊನಾ ವೈರಸ್ ಲಸಿಕೆಯ ಅಭಿವೃದ್ಧಿಯನ್ನು ಪೂರ್ಣಗೊಳಿಸಿದೆ.

ಸದ್ಯ ಈ ಲಸಿಕೆಯನ್ನು ಯು.ಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯೆಸ್ ಡಿಸೀಸ್ ಗೆ ಕಳುಹಿಸಲಾಗಿದ್ದು, ಕ್ಲಿನಿಕಲ್ ಪ್ರಯೋಗಗಳು ಆರಂಭಗೊಂಡಿದೆ.

ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?ಕೊರೊನಾ ಕಟ್ಟಿಹಾಕುವಲ್ಲಿ ಸಫಲವಾಯಿತೇ ಇಸ್ರೇಲ್: ಲಸಿಕೆ ತಯಾರು?

ನಿನ್ನೆ (ಸೋಮವಾರ, ಮಾರ್ಚ್ 16)ಯಿಂದ ಮನುಷ್ಯರ ಮೇಲೆ ಲಸಿಕೆಯ ಪ್ರಯೋಗ ಪ್ರಾರಂಭಗೊಂಡಿದೆ ಎಂದು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್ಫೆಕ್ಷಿಯೆಸ್ ಡಿಸೀಸ್ ಘೋಷಿಸಿದೆ.

ಲಸಿಕೆ ಸುರಕ್ಷಿತವಾಗಿದೆಯೇ.?

ಲಸಿಕೆ ಸುರಕ್ಷಿತವಾಗಿದೆಯೇ.?

ಸಂಭಾವ್ಯ ಲಸಿಕೆ ಸುರಕ್ಷಿತವಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳುವ ನಿಟ್ಟಿನಲ್ಲಿ ಸದ್ಯ ಪರೀಕ್ಷೆ ಮಾಡಲಾಗುತ್ತಿದೆ. ಮನುಷ್ಯರಿಗೆ ಲಸಿಕೆ ಸುರಕ್ಷಿತ ಎಂಬುದು ಖಚಿತವಾದ ನಂತರ ಆ ಲಸಿಕೆ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಅಧ್ಯಯನ ನಡೆಯಲಿದೆ.

ಇನ್ನೂ ಒಂದು ವರ್ಷದವರೆಗೆ ಲಭ್ಯವಿಲ್ಲ!

ಇನ್ನೂ ಒಂದು ವರ್ಷದವರೆಗೆ ಲಭ್ಯವಿಲ್ಲ!

SARS ಮತ್ತು MERS ಗೆ ಕಾರಣವಾಗುವ ಕೊರೊನಾ ವೈರಸ್ ಬಗ್ಗೆ ಸಂಶೋಧಕರಿಗೆ ಈಗಾಗಲೇ ಅರಿವಿರುವ ಕಾರಣ, ಕೋವಿಡ್-19 ಗೆ ಸಂಭಾವ್ಯ ಲಸಿಕೆಯನ್ನು ಬಹುಬೇಗ ಕಂಡುಹಿಡಿಯಲು ಸಾಧ್ಯವಾಗಿದೆ. ಮನುಷ್ಯರಿಗೆ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಸಾಬೀತಾದರೂ, ಈ ಲಸಿಕೆ ಇನ್ನೂ ಒಂದು ವರ್ಷದವರೆಗೆ ಲಭ್ಯವಿರುವುದಿಲ್ಲ.

RNA ಬಳಸಿ ಲಸಿಕೆ

RNA ಬಳಸಿ ಲಸಿಕೆ

ಲಸಿಕೆ ತಯಾರಿಗಾಗಿ Moderna,Inc ಸಂಸ್ಥೆ ಜೆನೆಟಿಕ್ ಮೆಟೀರಿಯಲ್ ಮೆಸೆಂಜರ್ RNA ಬಳಸುತ್ತಿದೆ. ಉಸಿರಾಟದ ಸಮಸ್ಯೆ ತಂದೊಡ್ಡುವ ವಿವಿಧ ಕಾಯಿಲೆಗಳಿಗಾಗಿ ಈಗಾಗಲೇ ಒಂಬತ್ತು ಲಸಿಕೆಗಳನ್ನು ಕಂಪನಿ ತಯಾರಿಸುತ್ತಿದೆ. ಆದ್ರೆ, ಇದ್ಯಾವುದೂ ಇನ್ನೂ ಮಾರುಕಟ್ಟೆಗೆ ತಲುಪಿಲ್ಲ.

ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!ಸಮಾಧಾನ ತಂದ ಹೊಸ ಸಂಶೋಧನೆ: ಸಕಲ ಜ್ವರಗಳಿಗೂ ಒಂದೇ ಲಸಿಕೆ!

mRNA-1273

mRNA-1273

ಬೇರೆ ಬೇರೆ ಕಂಪನಿಗಳು ಕೂಡ ಕೊರೊನಾ ವೈರಸ್ ಗೆ ಲಸಿಕೆ ಕಂಡುಹಿಡಿಯುವ ಕಾಯಕದಲ್ಲಿ ನಿರತವಾಗಿವೆ. ಆದ್ರೆ, ಕ್ಲಿನಿಕಲ್ ಪ್ರಯೋಗ ಹಂತ ತಲುಪಿರುವ ಮೊದಲ ಕಂಪನಿ Moderna,Inc. ಈ ಕ್ಲಿನಿಕಲ್ ಪ್ರಯೋಗದಲ್ಲಿ 18-55 ವರ್ಷದೊಳಗಿನ 45 ಆರೋಗ್ಯವಂತ ವ್ಯಕ್ತಿಗಳು ಪಾಲ್ಗೊಂಡು 28 ದಿನಗಳ ಅಂತರದಲ್ಲಿ ಎರಡು ಶಾಟ್ ಗಳನ್ನು ಪಡೆಯಲಿದ್ದಾರೆ. ಅಂದ್ಹಾಗೆ, ಈ ಲಸಿಕೆಗೆ mRNA-1273 ಎಂದು ಹೆಸರಿಸಲಾಗಿದೆ.

ನಾಲ್ವರ ಮೇಲೆ ಪ್ರಯೋಗ

ನಾಲ್ವರ ಮೇಲೆ ಪ್ರಯೋಗ

ನಿನ್ನೆ ನಾಲ್ವರಿಗೆ ಈ ಲಸಿಕೆ ಕೊಡಲಾಗಿದ್ದು, ಇಂದು ಕೂಡ ನಾಲ್ವರ ಮೇಲೆ ಪ್ರಯೋಗ ಮಾಡಲಾಗುತ್ತದೆ. ಬಳಿಕ ಎಂಟು ಮಂದಿಯನ್ನು ಮಾನಿಟರ್ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

English summary
Trial of Coronavirus Vaccine made by Moderna Begins in Seattle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X