ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೀಸಾ ವಂಚನೆ: ಭಾರತದ ಉಪ ರಾಯಭಾರಿಗೆ ಸಂಕಟ

By Mahesh
|
Google Oneindia Kannada News

ನ್ಯೂಯಾರ್ಕ್, ಡಿ.13: ವೀಸಾದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪ ಹೊತ್ತಿರುವ ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿಯ ಉಪರಾಯಭಾರಿ ದೇವಯಾನಿ ಕೋಬ್ರಾಗಡೆ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಪ್ರಸಂಗ ನಡೆದಿದೆ.

ನ್ಯೂಯಾರ್ಕ್ ನಲ್ಲಿ ತಮ್ಮ ಮಗಳನ್ನ ಶಾಲೆಗೆ ಡ್ರಾಪ್ ಮಾಡಲು ಬಂದಿದ್ದ ವೇಳೆ ನಡು ರಸ್ತೆಯಲ್ಲಿ ಕೈಗೆ ಬೇಡಿ ತೊಡಿಸಿ ಏಕಾಏಕಿ ಬಂಧಿಸಿ ಕರೆದೊಯ್ಯಲಾಗಿತ್ತು. ಬಳಿಕ ದೇವಯಾನಿ ಅವರು ಪಾಸ್ ಪೋರ್ಟ್ ನೀಡಿದ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ನ್ಯೂಯಾರ್ಕಿನ ಫೆಡರಲ್ ಪ್ರಾಸಿಕ್ಯೂಟರ್ ಭಾರತೀಯ ಮೂಲದ ಪ್ರೀತ್ ಬರಾರ ಆದೇಶದ ಮೇರೆಗೆ ದೇವಯಾನಿಯನ್ನು ಬಂಧಿಸಲಾಗಿತ್ತು.

ಸಂಗೀತಾ ರಿಚರ್ಡ್ ಎಂಬ ಭಾರತ ಮೂಲದ ಮಹಿಳೆಯನ್ನ ದೇವಯಾನಿ ಮನೆಗೆಲಸ ಮತ್ತು ಮಕ್ಕಳನ್ನ ನೋಡಿಕೊಳ್ಳಲು ಕೆಲಸಕ್ಕೆ ಇಟ್ಟುಕೊಂಡಿದ್ದರು. ಜೂನ್ 2012ರಿಂದ ನವೆಂಬರ್ 2013ರವರೆಗೆ ತಿಂಗಳವರೆಗೆ ದೇವಯಾನಿ ಅವರ ಮನೆಯಲ್ಲಿ ಕೆಲಸ ಮಾಡಿದ ಸಂಗೀತಾ, ವೀಸಾ ದಾಖಲೆಯಲ್ಲಿ ತಿಂಗಳಿಗೆ 4.500 ಡಾಲರ್ ಸಂಬಳ( ಗಂಟೆಗೆ 3.31 ಡಾಲರ್ ಲೆಕ್ಕದಂತೆ) ಕೊಡುತ್ತಿದ್ದೇನೆ ಎಂದು ದೇವಯಾನಿ ಉಲ್ಲೇಖಿಸಿದ್ದರು.

Indian diplomat held for visa fraud in US, released on bail

ಆದರೆ, ದೇವಯಾನಿ ಕೇವಲ 537 ಡಾಲರ್ ಮಾತ್ರ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಅಂದರೆ, ಅಮೆರಿಕದ ಕನಿಷ್ಠ ಕೂಲಿ ನಿಯಮ(ಗಂಟೆಗೆ 4 ಡಾಲರ್ ಗಿಂತ ಕಡಿಮೆ ಸಂಬಳ ನೀಡಿದ ಆರೋಪ) )ವನ್ನ ದೇವಯಾನಿ ಉಲ್ಲಂಘಿಸಿದ್ದಾರೆ ಎಂಬುದು ಆರೋಪ ಎದುರಿಸುತ್ತಿದ್ದಾರೆ. ಮನೆಗೆಲಸದಾಕೆ ಮೇಲೆ ದೌರ್ಜನ್ಯ ಮಾಡುತ್ತಿದ್ದ ದೇವಯಾನಿ ವಾರದಲ್ಲಿ 40 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ಸಂಬಂಧ ಮನೆಗೆಲಸದಾಕೆ ನೀಡಿದ್ದ ದೂರಿನನ್ವಯ ಭಾರತದ ಉಪ ರಾಯಭಾರಿ ದೇವಯಾನಿ ಅವರನ್ನ ಬಂಧಿಸಲಾಗಿತ್ತು. ಪ್ರಕರಣವನ್ನು ಸೂಕ್ಷ್ಮವಾಗಿ ಇತ್ಯರ್ಥಗೊಳಿಸುವಂತೆ ಭಾರತ ಸರ್ಕಾರ, ಅಮೆರಿಕಕ್ಕೆ ಮನವಿ ಮಾಡಿದೆ. [ ಇದನ್ನೂ ಓದಿ : ವಂಚನೆ ಆರೋಪ, ಎನ್ನಾರೈ ದಂಪತಿ ಬಂಧನ]

ಈ ಮಧ್ಯೆ, ಸಂಗೀತಾ ರಿಚರ್ಡ್ ಜೂನ್ ತಿಂಗಳಿನಿಂದ ತಲೆಮರೆಸಿಕೊಂಡಿದ್ದು, ಆಕೆಯ ವಿರುದ್ಧ ವಂಚನೆ ಮತ್ತು ಸುಲಿಗೆ ಪ್ರಕರಣದಲ್ಲಿ ಬಂಧನ ವಾರೆಂಟ್ ಇದೆ ಎಂದು ವಾಷಿಂಗ್ಟನ್ನ ರಾಯಭಾರ ಕಚೇರಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ದೇವಯಾನಿ ಬಂಧನದ ಕುರಿತಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ದೇವಯಾನಿ ಪರ ವಕೀಲ ಡೇನಿಯಲ್ ಅರ್ಷಾಕ್, ಸಂಗಿತಾ ಅವರ ತಿಂಗಳ ಸಂಬಳ 4 ಸಾವಿರ ಡಾಲರ್. ಆದರೆ, ಅದಕ್ಕಿಂತ ಹೆಚ್ಚಿನ ಪ್ರಮಾಣದ ನಗದನ್ನು ದೇವಯಾನಿ, ಸಂಗೀತಾಗೆ ನೀಡಿದ್ದಾರೆ. ಅಲ್ಲದೇ, ಕೊನೆ ಪಕ್ಷ ವಿವರಣೆ ನೀಡಲು ಅವಕಾಶ ಕೊಡದಂತೆ ರಸ್ತೆಯಲ್ಲಿ ದೇವಯಾನಿಯನ್ನು ಬಂಧಿಸಿರುವುದು ದಿಗ್ಭ್ರಮೆ ಹುಟ್ಟಿಸಿದೆ ಎಂದಿದ್ದಾರೆ.

39 ವರ್ಷ ವಯಸ್ಸಿನ ದೇವಯಾನಿ ಕೋಬ್ರಾಗಡೆ ಅವರು ಭಾರತ ಸರ್ಕಾರದಿಂದ ವಾರ್ಷಿಕವಾಗಿ 100,000 ಡಾಲರ್ ಪಡೆಯುತ್ತಿದ್ದಾರೆ. ನ್ಯೂಯಾರ್ಕಿನಲ್ಲಿ ಐಷಾರಾಮಿ ವಸತಿ ಗೃಹ ಹೊಂದಿದ್ದಾರೆ. ಅಪರಾಧ ಸಾಬೀತಾದರೆ ದೇವಯಾನಿ ಅವರು 5-10 ವರ್ಷ ಕಾರಾಗೃಹ ವಾಸ ಅನುಭವಿಸಬೇಕಾಗುತ್ತದೆ. ಮುಂಬೈನಲ್ಲಿ ಸರ್ಕಾರಿ ನಿರ್ಮಿತ ವಸತಿ ಸಮುಚ್ಚಯ ಪಡೆಯಲು ಲಾಬಿ ನಡೆಸಿದ ಆರೋಪ ಕೂಡಾ ದೇವಯಾನಿ ಮೇಲಿದೆ.

English summary
In a major diplomatic setback for India, its Deputy Consul General Devyani Khobragade, 39 in New York was arrested by law enforcement authorities on visa fraud charges and released on a USD 250,000 bond after she pleaded not guilty in a court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X