ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಬಾಮಾ ಟರ್ಕಿ ಕೋಳಿ ಥ್ಯಾಂಕ್ಸ್ ಗಿವಿಂಗ್ ಡೇ

By Mahesh
|
Google Oneindia Kannada News

ವಾಷಿಂಗ್ಟನ್, ನ.28: ಪಾಶ್ಚಾತ್ಯರು ಥ್ಯಾಂಕ್ಸ್‌ಗಿವಿಂಗ್ ಡೇ ಅಂತ ಪ್ರತಿ ವರ್ಷ ನವೆಂಬರ್ ತಿಂಗಳ 4ನೇ ಗುರುವಾರ ಆಚರಿಸುತ್ತಾರೆ. ಅಮೆರಿಕದಲ್ಲಿ ದಾಸ್ಯ ವಿಮೋಚಗನೆಗಾಗಿ ಅಂತರ್ಯುದ್ಧ ನಡೆಯುತ್ತಿದ್ದ ಸಂದರ್ಭ ದೇವರಿಗೆ ಧನ್ಯವಾದ ಸಮರ್ಪಿಸುವ ದಿನ ಎಂದು ಅಂದಿನ ಅಧ್ಯಕ್ಷರು ಘೋಷಿಸಿದ್ದರು.

1863ರಲ್ಲಿ ಅಂದಿನ ಅಧ್ಯಕ್ಷ ಅಬ್ರಹಾಂ ಲಿಂಕನ್ ಅವರು ''ಸ್ವರ್ಗದಲ್ಲಿರುವ ನಮ್ಮ ದೇವರಿಗೆ ಧನ್ಯವಾದ ಸಮರ್ಪಿಸುವ ದಿನ''ವಾಗಿ ನವೆಂಬರ್ 26ನ್ನು ಥ್ಯಾಂಕ್ಸ್ ಗಿವಿಂಗ್ ಡೇ ಅಂತ ಅಧಿಕೃತವಾಗಿ ಘೋಷಿಸಿದ್ದರು. ಬರಿ ರಜಾದಿನ ಮಾತ್ರವಲ್ಲ, ರಜಾ 'ಉತ್ಸವ'ವಾಗಿ ಆಚರಣೆಯಾಗುತ್ತಾ ಬಂದಿದೆ.

ವಿಶ್ವದ ಬಹುತೇಕ ಎಲ್ಲ ಭಾಗಗಳಲ್ಲೂ "ಥ್ಯಾಂಕ್ಸ್ ಗಿವಿಂಗ್ ಡೇ' ಅಥವಾ ಕೃತಜ್ಞತಾರ್ಪಣ ದಿನ' ರೂಪದಲ್ಲಿ ಆಚರಣೆಯಲ್ಲಿವೆ. ಬೈಬಲ್ ನಲ್ಲೂ ಇದರ ಉಲ್ಲೇಖವಿದೆ. ಪಾಶ್ಚಾತ್ಯರು ಥ್ಯಾಂಕ್ಸ್ ಗಿವಿಂಗ್ ಡೇ ಅಂತ ಪ್ರತಿ ವರ್ಷ ನವೆಂಬರ್ ತಿಂಗಳ 4ನೇ ಗುರುವಾರ ಆಚರಿಸುತ್ತಾರೆ.

ಉಳಿದಂತೆ, ಯೂನಿಸೆಫ್ ರಾಯಭಾರಿಯಾದ ಸಚಿನ್ ತೆಂಡೂಲ್ಕರ್, ಬೋಧ್ ಗಯಾದಲ್ಲಿ ಪ್ರಾರ್ಥನೆ, ಬೆಂಗಳೂರಿನ ಬ್ಯಾಲಾಳು ಕೇಂದ್ರದಲ್ಲಿ ಮಂಗಳಯಾನದ ಅಪ್ದೇಟ್ಸ್, ತೆಹೆಲ್ಕಾ ತೇಜಪಾಲ್ ವಿರುದ್ಧ ಆರೋಪ ಮಾಡಿದ ಮಹಿಳೆ ಚಿತ್ರ ಇಂದಿನ ಪ್ಯಾಕೇಜಿನಲ್ಲಿದೆ ತಪ್ಪದೇ ನೋಡಿ...

 ಟರ್ಕಿ ಕೋಳಿ ಜತೆ ಒಬಾಮಾ

ಟರ್ಕಿ ಕೋಳಿ ಜತೆ ಒಬಾಮಾ

ವಾಷಿಂಗ್ಟನ್ ನ ಶ್ವೇತಭವನದಲ್ಲಿ ಪುತ್ರಿ ಸಾಶಾ, ಮಲಿಯಾ ಜತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಥ್ಯಾಂಕ್ಸ್ ಗಿವಿಂಗ್ ಡೇ ಅಂಗವಾಗಿ ಟೇಬಲ್ ಮೇಲೆ ಟರ್ಕಿಯಿಂದ ಪಾಪ್ ಕಾರ್ನ್ ಉಳಿಸುವ ಸಾಂಪ್ರದಾಯಿಕ ಆಚರಣೆಯಲ್ಲಿ ತೊಡಗಿದ್ದಾರೆ.

ಯೂನಿಸೆಫ್ ರಾಯಭಾರಿ

ಯೂನಿಸೆಫ್ ರಾಯಭಾರಿ

ಯೂನಿಸೆಫ್ ನ ದಕ್ಷಿಣ ಏಷ್ಯಾದ ರಾಯಭಾರಿಯಾಗಿರುವ ಸಚಿನ್ ತೆಂಡೂಲ್ಕರ್ ಅವರು ಆಯ್ಕೆಯಾಗಿದ್ದು, ಯೂನಿಸೆಫ್ ಪ್ರತಿನಿಧಿ ಕರಿನ್ ಹುಲ್ಶಾಫ್ ಅವರ ಜತೆ ಸುದ್ದಿಗೋಷ್ಥಿಯಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಬ್ಯಾಲಾಳು, ಬೆಂಗಳೂರು

ಬ್ಯಾಲಾಳು, ಬೆಂಗಳೂರು

ಬೆಂಗಳೂರಿನ ಹೊರವಲಯದ ಬ್ಯಾಲಾಳುವಿನಲ್ಲಿರುವ ಇಸ್ರೋ ಕೇಂದ್ರದ 32 ಮೀ ಡಿಶ್ ಆಂಟೆನಾ ಕಾಯುತ್ತಿರುವ ಸಿಐಎಸ್ ಎಫ್ ಯೋಧ PTI Photo by Shailendra Bhojak

ಬ್ಯಾಲಾಳು ಇಸ್ರೋ ಕೇಂದ್ರ

ಬ್ಯಾಲಾಳು ಇಸ್ರೋ ಕೇಂದ್ರ

ಬೆಂಗಳೂರಿನ ಹೊರವಲಯದ ಬ್ಯಾಲಾಳುವಿನಲ್ಲಿರುವ ಇಸ್ರೋ ಕೇಂದ್ರದ ಒಳಾಂಗಣ ಚಿತ್ರ. ಈ ಕೇಂದ್ರದಲ್ಲಿ ಮಂಗಳಯಾನದ ಉಪಗ್ರಹದ ನಿಯಂತ್ರಣ ನಡೆಯುತ್ತದೆ

ತೇಜಪಾಲ್ ಮಹಿಮೆ

ತೇಜಪಾಲ್ ಮಹಿಮೆ

ಪಣಜಿ: ತೆಹೆಲ್ಕಾ ಸಂಪಾದಕ ತೇಜಪಾಲ್ ವಿರುದ್ಧ ಆರೋಪ ಹೊರೆಸಿದ ಸಹದ್ಯೋಗಿ ಮಹಿಳೆಯನ್ನು ನ್ಯಾಯಲಯಕ್ಕೆ ಕರೆದೊಯ್ಯುತ್ತಿದ್ದ ನಾಲ್ವರು ಮಹಿಳಾ ಪೇದೆಗಳು ಕೂಡಾ ಮುಸುಕು ಹಾಕಿಕೊಂಡು ಬಂದಿದ್ದು ವಿಶೇಷವಾಗಿತ್ತು.

ಬೋಧ್ ಗಯಾದಲ್ಲಿ

ಬೋಧ್ ಗಯಾದಲ್ಲಿ

ಥಾಯ್ ಭಕ್ತರು ಮಹಾಬೊಧಿ ದೇಗುಲದ ಚಿನ್ನದ ಲೇಪನ(280 ಕೆಜಿ) ಕಾರ್ಯ ಮುಕ್ತಾಯದ ನಂತರ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಥೈಲ್ಯಾಂಡ್ ನ ರಾಜ ಈ ದೇಗುಲಕ್ಕೆ ಚಿನ್ನ ದಾನ ಮಾಡಿದ್ದಾರೆ.

English summary
Todays News stories in Pics Nov 28 2013 : President Barack Obama, with daughters Sasha and Malia, right, carries on the Thanksgiving tradition of saving Popcorn the turkey from the dinner table with a "presidential pardon," at the White House in Washington
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X