ಹಿಂದೂ ರಾಷ್ಟ್ರದಿ ಮಾವೋವಾದಿಗೆ 'ಪ್ರಚಂಡ' ಸೋಲು
ಬೆಂಗಳೂರು, ನ.21: ವಿಶ್ವದ ಏಕೈಕ ಹಿಂದೂ ರಾಷ್ಟ್ರ ಎನ್ನಬಹುದಾದ ನೇಪಾಳದಲ್ಲಿ ಮಾವೋವಾದಿ ನಾಯಕನಿಗೆ 'ಪ್ರಚಂಡ' ಸೋಲುಂಟಾಗಿದೆ. ಯುನಿಫೈಡ್ ಕಮ್ಯೂನಿಸ್ಟ್ ಪಾರ್ಟಿ(ನೇಪಾಳ ಮಾವೋವಾದಿ)ಯ ಮಾಜಿ ಪ್ರಧಾನಿ ಪುಷ್ಪಕಮಾಲ್ ದಹಾಲ್ ಅಲಿಯಾಸ್ ಪ್ರಚಂಡ ಅವರು ಸೋಲು ಕಂಡಿದ್ದಾರೆ.
ಮತ ಎಣಿಕೆಯಲ್ಲಿ ಭಾರಿ ಅಕ್ರಮ ನಡೆಡಿದೆಮತ ಎಣಿಕೆ ತಕ್ಷಣವೇ ನಿಲ್ಲಿಸಬೇಕು. ಮತ ಪೆಟ್ಟಿಗೆಗಳ ಸಾಗಾಟದಲ್ಲಿ ಹಾಗೂ ಮತ ಎಣಿಕೆಯ ವೇಳೆಯೂ ಅಕ್ರಮಗಳು ನಡೆದಿವೆ ಎಂದು ಪ್ರಚಂಡ ಎಂದೇ ಕರೆಯಲ್ಪಡುವ ಪುಷ್ಪ ಕುಮಾರ ದಹಲ್ ಅವರು ಗುರುವಾರ ಹೇಳಿದ್ದಾರೆ. ಈ ಕುರಿತು ಸ್ವತಂತ್ರ ತನಿಖೆಯಾಗಲಿ ಎಂದು ಆಗ್ರಹಿಸಿರುವ ಪ್ರಚಂಡ, ಬೇಡಿಕೆ ಈಡೇರದಿದ್ದರೆ ತನ್ನ ಪಕ್ಷವು ಶಾಸನ ಸಭೆಯನ್ನೇ ಬಹಿಷ್ಕರಿಸಲಿದೆ ಎಂದು ಎಚ್ಚರಿಸಿದ್ದಾರೆ.
ಮತ ಪೆಟ್ಟಿಗೆಗಳನ್ನು ಗಂಟೆಗಳ ಕಾಲ ಬಚ್ಚಿಟ್ಟ ಮತ್ತು ಎಣಿಕೆ ಕೇಂದ್ರಗಳತ್ತ ಅವುಗಳನ್ನು ಒಯ್ಯುವಾಗ ಪೆಟ್ಟಿಗೆಗಳನ್ನು ಬದಲಿಸಲಾಗಿರುವ ಬಗ್ಗೆ ವರದಿಗಳು ಬಂದಿವೆ. ಹಲವು ಮತ ಪೆಟ್ಟಿಗೆಗಳೇ ನಾಪತ್ತೆಯಾಗಿವೆ ಎಂದವರು ಆರೋಪಿಸಿದ್ದಾರೆ.
ಕಾಠ್ಮಂಡು ಕ್ಷೇತ್ರದಲ್ಲಿ ಪ್ರಚಂಡ ಅವರು ಸೋತಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಘೋಷಿಸಿದ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಮಾವೋವಾದಿಗಳ ಭದ್ರಕೋಟೆ ಪರರ ಪಾಲಾದರೂ ದಕ್ಷಿಣದ ಸಿರಾಹ ಕ್ಷೇತ್ರದಲ್ಲಿಯೂ ಅವರು ಕಣದಲ್ಲಿದ್ದಾರೆ.
2008ರ ಚುನಾವಣೆಗಳಲ್ಲಿ ಮಾವೋವಾದಿ ಪಕ್ಷವು ಹೆಚ್ಚಿನ ಸಂಖ್ಯೆಯಲ್ಲಿ ವಿಜಯ ಸಾಧಿಸಿತ್ತು. 1996 ಮತ್ತು 2006 ನಡುವೆ ಸರಕಾರಿ ಪಡೆಗಳ ವಿರುದ್ಧ ಹೋರಾಡುತ್ತಿದ್ದ ಬಂಡುಕೋರ ಕಮ್ಯೂನಿಸ್ಟರೇ ಈಗ ಶಾಂತಿ ಮಾತುಕತೆ ನಡೆದ ಬಳಿಕ ಮಾವೋವಾದಿ ಪಕ್ಷ ಕಟ್ಟಿಕೊಂಡು ಚುನಾವಣೆಗಿಳಿದಿದ್ದಾರೆ. 2008ರ ಚುನಾವಣೆಗಳ ಬಳಿಕ ರಚನೆಯಾದ ಪ್ರಜಾಪ್ರಭುತ್ವಕ್ಕೆ ಅಲ್ಲಿನ ಸಂವಿಧಾನವನ್ನು ರೂಪಿಸಲು ಸಾಧ್ಯವಾಗಿಲ್ಲ. 12 ಕೋಟಿ ಮತದಾರರಲ್ಲಿ ಶೇ.70 ಮಂದಿ ಮತ ಚಲಾಯಿಸಿದ್ದರು. ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಲಭ್ಯವಾಗುವ ಸಾಧ್ಯತೆಗಳಿಲ್ಲ.
601 ಸಂಸತ್ ಸ್ಥಾನಗಳನ್ನು ಹೊಂದಿರುವ ನೇಪಾಳದಲ್ಲಿ 122ಕ್ಕೂ ಅಧಿಕ ಪಕ್ಷಗಳಿವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹೀಗೆ ಧರ್ಮ ಅನುಗುಣವಾಗಿ ಪಕ್ಷಗಳಿದ್ದು ಸಂವಿಧಾನ ರಚನೆ ಬೃಹತ್ ಕಾರ್ಯವಾಗಿದೆ.

ಮಾವೋವಾದಿಗೆ 'ಪ್ರಚಂಡ' ಸೋಲು
ವಿಶ್ವದ ಏಕೈಕ ಹಿಂದೂ ರಾಷ್ಟ್ರ ಎನ್ನಬಹುದಾದ ನೇಪಾಳದಲ್ಲಿ ಮಾವೋವಾದಿ ನಾಯಕನಿಗೆ 'ಪ್ರಚಂಡ' ಸೋಲುಂಟಾಗಿದೆ. ಯುನಿಫೈಡ್ ಕಮ್ಯೂನಿಸ್ಟ್ ಪಾರ್ಟಿ(ನೇಪಾಳ ಮಾವೋವಾದಿ)ಯ ಮಾಜಿ ಪ್ರಧಾನಿ ಪುಷ್ಪಕಮಾಲ್ ದಹಾಲ್ ಅಲಿಯಾಸ್ ಪ್ರಚಂಡ ಅವರು ಸೋಲು ಕಂಡಿದ್ದಾರೆ.

ನೇಪಾಳಿ ಕಾಂಗ್ರೆಸ್ಸಿಗರು
ಮಾವೋವಾದಿಗಳನ್ನು ಸೋಲಿಸಿದ ಖುಷಿಯಲ್ಲಿ ನೇಪಾಳಿ ಕಾಂಗ್ರೆಸ್ ಅಭಿಮಾನಿಗಳ ಸಂಭ್ರಮ

ಭುವನೇಶ್ವರದಲ್ಲಿ
ಹರೇಕೃಷ್ಣ ಮಹಾತಾಬ್ ಅವರ 116ನೇ ಜನ್ಮದಿನಾಚರಣೆ ಅಂಗವಾಗಿ ಸಾಹಸ ಕಲೆ ಪ್ರದರ್ಶನ

ಗೋವಾದಲ್ಲಿ ರೇಖಾ
ಪಣಜಿ : 44ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(IFFI-2013) ದಲ್ಲಿ ಹಿರಿಯ ನಟಿ ರೇಖಾ












Click it and Unblock the Notifications