ಚಿತ್ರ ಸುದ್ದಿ : ಅಮೆರಿಕದ ಟುಲಿಪ್ಸ್, ಅಗರ್ತಲದ ಮಿಂಚು
ಬೆಂಗಳೂರು,
ಏ.28: ಅಮೆರಿಕದಲ್ಲಿ ಅವಧಿಗೆ ಮುನ್ನ ಟುಲಿಪ್ಸ್ ಹೂವು ಅರಳಿ ನಿಂತಿದೆ. ವಾಷಿಂಗ್ಟನ್ ನಲ್ಲಿ ಸೂರ್ಯಮುಖಿಯ ಕಂಗೊಳಿಸುತ್ತಿರುವ ಹೂವು ನೋಡುವುದೇ ಕಣ್ಣಿಗೆ ಹಬ್ಬ. id="toptextpromo"> id='are-slot-1' class='oiad oi-axt oiadv'>ಉಳಿದಂತೆ,
ದಕ್ಷಿಣ ಕೊರಿಯಾದಲ್ಲಿ ಕಾಗದದ ಲಾಟೀನುಗಳು ಗಗನಕ್ಕೇರಿಸಿ ಹಡಗು ದುರಂತರ ಸಂತ್ರಸ್ತರನ್ನು ಬೌದ್ಧ ಧರ್ಮೀಯರು ಸ್ಮರಿಸಿಕೊಂಡಿದ್ದಾರೆ. ತಿರುಪತಿಯಲ್ಲಿ ಆಂಧ್ರಪ್ರದೇಶದ ಗವರ್ನರ್, ಅಗರ್ತಲದಲ್ಲಿ ಕಂಡ ಮಿಂಚು, ಇಂಡೋನೇಷಿಯಾ ದಲ್ಲಿ ಮಾಸ್ಟರ್ಸ್ ಗಾಲ್ಫ್ ಟೂರ್ನಿ ಗೆದ್ದ ಭಾರತೀಯ, ಅಫ್ಘಾನಿಸ್ತಾನದಲ್ಲಿ ಪ್ರವಾಹ, ಉಕ್ರೇನ್ನಿನಲ್ಲಿ ಟಿವಿ ಕೇಂದ್ರದ ಮುಂದಿನ ಪಹರ, ಡೇಡ್ ಸೀಯಲ್ಲಿ ಸ್ನಾನ ಮುಂತಾದ ಚಿತ್ರ ಸೇರಿದಂತೆ ಇನ್ನಷ್ಟು ಕುತೂಹಲಕಾರಿ ಚಿತ್ರಸುದ್ದಿಗಳನ್ನು ತಪ್ಪದೇ ನೋಡಿ.. id='are-slot-2' class='oiad oi-axt oiadv'>
ಟುಲಿಪ್ಸ್ ಹೂವು ಅರಳಿ ನಿಂತಿದೆ
ಅಮೆರಿಕದಲ್ಲಿ ಅವಧಿಗೆ ಮುನ್ನ ಟುಲಿಪ್ಸ್ ಹೂವು ಅರಳಿ ನಿಂತಿದೆ. ವಾಷಿಂಗ್ಟನ್ ನಲ್ಲಿ ಸೂರ್ಯಮುಖಿಯ ಕಂಗೊಳಿಸುತ್ತಿರುವ ಹೂವು ನೋಡುವುದೇ ಕಣ್ಣಿಗೆ ಹಬ್ಬ.

ಅಗರ್ತಲ: ಬೇಸಿಗೆಯಲ್ಲಿ ಮಿಂಚಿನ ದೃಶ್ಯ
ತ್ರಿಪುರ ರಾಜ್ಯದ ಅಗರ್ತಲದಲ್ಲಿ ಕಳೆದ ದಿನ ಆಗಸದಲ್ಲಿ ಕಂಡು ಬಂದ ಮಿಂಚು. PTI Photo

ಅಫ್ಘಾನಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ
ಉತ್ತರ ಅಫ್ಘಾನಿಸ್ತಾನದ ಜಾಝ್ವಾನ್ ಪ್ರಾಂತ್ಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಅಗತ್ಯ ವಸ್ತುಗಳನ್ನು ಹೊತ್ತುಕೊಂಡು ಯುವಕರಿಬ್ಬರು ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದಾರೆ.

ದಕ್ಷಿಣ ಕೊರಿಯಾದಲ್ಲಿ ಹಡಗು ದುರಂತ
ಸುಮಾರು 180ಕ್ಕೂ ಅಧಿಕ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ಸಾವಿಗೆ ಕಾರಣವಾದ ಹಡಗು ಮುಳುಗಡೆ ದುರಂತದ ನಂತರ ದಕ್ಷಿಣ ಕೊರಿಯಾದಲ್ಲಿ ಬೌದ್ಧ ಧರ್ಮೀಯರು ಕಾಗದ ಲಾಟೀನುಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಮೃತರನ್ನು ಸ್ಮರಿಸಿ ಪ್ರಾರ್ಥಿಸಿದ್ದಾರೆ.

ತಿರುಪತಿಯಲ್ಲಿ ಆಂಧ್ರಪ್ರದೇಶದ ಗವರ್ನರ್
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಆಂಧ್ರಪ್ರದೇಶದ ಗವರ್ನರ್ ಇಎಸ್ ಎಲ್ ನರಸಿಂಹನ್ ಅವರು ಭಾನುವಾರ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ಹೀಗೆ. PTI Photo

ಗಗನಕ್ಕೇರಿ ಪೃಥ್ವಿ ಯಶಸ್ವಿ ಉಡಾವಣೆ
ಒಡಿಶಾದ ಬಾಲಾಸೋರ್ ನಲ್ಲಿ ಪೃಥ್ವಿ ರಕ್ಷಣಾ ವಾಹನ(PDV) ಪರೀಕಾರ್ಥ ಉಡಾವಣೆ ಯಶಸ್ವಿಯಾಗಿ ನೆರವೇರಿದೆ.












Click it and Unblock the Notifications