ಚಿತ್ರಗಳಲ್ಲಿ: ವಿಶ್ವದ ಅದ್ದೂರಿ ಮದುವೆಯ ದೃಶ್ಯ
ಬೆಂಗಳೂರು, ನ.11: ಶ್ರೀಲಂಕಾದಲ್ಲಿ ಇತ್ತೀಚೆಗೆ ವಿಶ್ವದ ಅದ್ಧೂರಿ ಮದುವೆ ನಡೆಯಿತು. ನಿಸಾನ್ ಸಾಲ ಮತ್ತು ನಳಿನ್ ತಮ್ಮ ವಿವಾಹವನ್ನೇ ದಾಖಲೆಯನ್ನಾಗಿ ಪರಿವರ್ತಿಸಿದ್ದಾರೆ. ಈ ವಧು ವರರ ವಿವಾಹಕ್ಕೆ 126 ಮಂದಿ ವಧೂಸಖಿಯರು, 25 ವರ ಸಖರು, 20 ಮಂದಿ ವಧೂವರ ಸಹಾಯಕರು ಹಾಗೂ 23 ಫ್ಲವರ್ ಗರ್ಲ್ಸ್ ಈ ವಿವಾಹಕ್ಕೆ ಸಾಕ್ಷಿಯಾಗಿದ್ದರು. ಇದು ಈಗ ನವದಂಪತಿಗಳನ್ನು ಗಿನ್ನೆಸ್ ದಾಖಲೆ ಪುಟಕ್ಕೆಸೇರಿಸಿದೆ.
ಕೊಲಂಬೋದಲ್ಲಿ ನಡೆದ ಈ ಅದ್ಧೂರಿ ವಿವಾಹಕ್ಕೆ ಶ್ರೀಲಂಕಾ ಅಧ್ಯಕ್ಷ ಮಹೀಂದಾ ರಾಜಪಕ್ಸೆ ಪತ್ನಿ ಶಿರಂತಿ ರಾಜಪಕ್ಸೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಇಂಥ ಐಷಾರಾಮಿ ವಿವಾಹದ ಮೂಲಕ ನಿಸಾನ್ ಸಾಲ-ನಳಿನ್ ಈ ಹಿಂದೆ ಥಾಯ್ಲೆಂಡ್ ನ ದಂಪತಿ ಸೃಷ್ಟಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಅವರ ಮದುವೆಯಲ್ಲಿ 96 ಸಖಿಯರು ಭಾಗವಹಿಸಿದ್ದರು.
ಉಳಿದಂತೆ ಮುಂಬೈಗೆ ಬಂದಿದ್ದ ಪ್ರಿನ್ಸ್ ಚಾರ್ಲ್ಸ್ ಹಾಗೂ ಕಾರ್ನ್ ವೆಲ್ ರಾಜಕುಮಾರಿ ಕ್ಯಾಮಿಲಾ ಅವರು ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ, ನೀತಾ ಅಂಬಾನಿ, ನಟ ಅಜಯ್ ದೇವಗನ್,ಕಾಜೋಲ್ ಜತೆ ಗ್ರೂಪ್ ಫೋಟೋದಲ್ಲಿ, ಪುಷ್ಕರ್ ನ ಐತಿಹಾಸಿಕ ಜಾನುವಾರಗಳ ಮೇಳ, ಮುಂಬೈನ ಹೊಸ ಮೆಟ್ರೋ ಸಂಚಾರ ಸಚಿನ್ ಗಾಗಿ ಮಕ್ಕಳ ಕಾರ್ಯಕ್ರಮ, ಚೆಂಗ್ಡುವಿನಲ್ಲಿ ಭಾರತ ಚೀನಾ ಸಮರಾಭ್ಯಾಸ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿವೆ ತಪ್ಪದೇ ನೋಡಿ

ನವದಂಪತಿಗಳು
ನಿಸಾನ್ ಸಾಲ ಮತ್ತು ನಳಿನ್ ತಮ್ಮ ವಿವಾಹವನ್ನೇ ದಾಖಲೆಯನ್ನಾಗಿ ಪರಿವರ್ತಿಸಿದ್ದಾರೆ.

ಮುಂಬೈಗೆ ಬಂದಿದ್ದ ಪ್ರಿನ್ಸ್ ಚಾರ್ಲ್ಸ್
ಮುಂಬೈಗೆ ಬಂದಿದ್ದ ಪ್ರಿನ್ಸ್ ಚಾರ್ಲ್ಸ್ ಹಾಗೂ ಕಾರ್ನ್ ವೆಲ್ ರಾಜಕುಮಾರಿ ಕ್ಯಾಮಿಲಾ ಅವರು ಖ್ಯಾತ ಉದ್ಯಮಿ ಮುಖೇಶ್ ಅಂಬಾನಿ, ನೀತಾ ಅಂಬಾನಿ, ನಟ ಅಜಯ್ ದೇವಗನ್,ಕಾಜೋಲ್ ಜತೆ ಗ್ರೂಪ್ ಫೋಟೋ

ರತನ್ ಟಾಟಾ ಜತೆ
ಪ್ರಿನ್ಸ್ ಚಾರ್ಲ್ಸ್ ಹಾಗೂ ಕಾರ್ನ್ ವೆಲ್ ರಾಜಕುಮಾರಿ ಕ್ಯಾಮಿಲಾ ಅವರು ಖ್ಯಾತ ಉದ್ಯಮಿ ರತನ್ ಟಾಟಾ ಜತೆ

ಪ್ರಿನ್ಸ್ ಚಾರ್ಲ್ಸ್ ಜತೆ ಡಿನ್ನರ್
ರಿಲಯನ್ಸ್ ಸಂಸ್ಥೆ ಒಡೆಯ ಮುಖೇಶ್ ಅಂಬಾನಿ ಆಯೋಜಿಸಿದ್ದ ಔತಣಕೂಟದಲ್ಲಿ ಖ್ಯಾತ ಉದ್ಯಮಿಗಳು ಪ್ರಿನ್ಸ್ ಚಾರ್ಲ್ಸ್ ಜತೆ ಡಿನ್ನರ್ ಸವಿದರು

ಚೆಂಗ್ಡುವಿನಲ್ಲಿ ಸಾಹಸ
ಭಾರತ ಹಾಗೂ ಚೀನಾ ಸೈನಿಕರ ಸಾಹಸಮಯ ಸಮರಾಭ್ಯಾಸ

ಸಚಿನ್ ಗಾಗಿ ಮಕ್ಕಳ ಕಾರ್ಯಕ್ರಮ,
ಪಾಲಕ್ಕಾಡ್ ನಲ್ಲಿ ಶಾಲಾ ಮಕ್ಕಳು ಸಚಿನ್ ತೆಂಡೂಲ್ಕರ್ ಮಾಸ್ಕ್ ತೊಟ್ಟಿದ್ದಾರೆ

ವಿಶ್ವ ಚಾಂಪಿಯನ್ ಪಟ್ಟ
ಐದು ಬಾರಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿರುವ ವಿಶ್ವನಾಥನ್ ಆನಂದ್, ಯುವ ಆಟಗಾರ ಕಾರ್ಲ್‌ಸೆನ್ ವಿರುದ್ಧದ ಮೊದಲೆರಡು ಪಂದ್ಯಗಳು ಡ್ರಾ ಆಗಿವೆ ಈ ಪಂದ್ಯಾವಳಿಯಲ್ಲಿ ಒಟ್ಟು 12 ಪಂದ್ಯಗಳು ಕ್ಲಾಸಿಕಲ್ ಸಿಸ್ಟಮ್ ಮಾದರಿಯಲ್ಲಿ ನಡೆಯಲಿವೆ. 12 ಪಂದ್ಯಗಳ ನಂತರ ಉಭಯ ಆಟಗಾರರು ಸಮಬಲ ಸಾಧಿಸಿದರೆ, ಅತಿ ಕಡಿಮೆ ಸಮಯದಲ್ಲಿ ಪಂದ್ಯವನ್ನುಗೆದ್ದವರನ್ನು ಜಯಶಾಲಿಯನ್ನಾಗಿ ಘೋಷಿಸಲಾಗುವುದು.

ಪುಷ್ಕರ್ ನ ಜಾನುವಾರು ಜಾತ್ರೆ
ಪುಷ್ಕರ್ ನ ಜಾನುವಾರು ಜಾತ್ರೆಯಲ್ಲಿ ಕತ್ತೆಗಳು

ಮೆಟ್ರೋ ಸಂಚಾರ
ಮುಂಬೈನ ಹೊಸ ಮೆಟ್ರೋ ಸಂಚಾರ ವರ್ಸೋವಾದಿಂದ ಘಾಟ್ ಕೊಪರ್ ಕಡೆಗೆ ಟ್ರಯಲ್ ರನ್

ಪುಣೆಯಲ್ಲಿ
ಪುಣೆಯಲ್ಲಿ ಹೊಸ ವಿನ್ಯಾಸದ ಉಡುಗೆ ತೊಟ್ಟ ರೂಪದರ್ಶಿ

ಪುಷ್ಕರ್ ನ ಜಾನುವಾರು ಜಾತ್ರೆ
ಪುಷ್ಕರ್ ನ ಜಾನುವಾರು ಜಾತ್ರೆಯಲ್ಲಿ ಒಂಟೆಗಳು
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications