ಚಿತ್ರಸುದ್ದಿ : 102 ಜನ ದುರ್ಮರಣ ಒಬ್ಬ ಸಾವು ಗೆದ್ದ
ಬೆಂಗಳೂರು, ಫೆ.12 : ಮಿಲಿಟರಿ ಸಾರಿಗೆ ವಿಮಾನವೊಂದು ಅಲ್ಜೀರಿಯಾದ ಗುಡ್ಡಗಾಡು ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಆಲ್ಜೀರಿಯಾ ಸಶಸ್ತ್ರ ಪಡೆಯ ಯೋಧರು ಹಾಗೂ ಅವರ ಬಂಧು ಬಳಗದ 102 ಮಂದಿ ಸಾವನ್ನಪ್ಪಿದ ದಾರುಣ ಘಟನೆ ಮಂಗಳವಾರ ನಡೆಸಿದೆ.
ವಿಮಾನದ ಇಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡ ಸ್ವಲ್ಪ ಹೊತ್ತಿನಲ್ಲೇ ಇಡೀ ವಿಮಾನ ಇಬ್ಭಾಗವಾಗಿ ತುಂಡಾಯಿತು. ನಂತರ ಎರಡೂ ಭಾಗಗಳಲ್ಲಿ ಭಾರಿ ಬೆಂಕಿ ಹೊತ್ತಿಕೊಂಡಿತು, ನಾವು ನೋಡ ನೋಡುತ್ತಿದ್ದಂತೆ ವಿಮಾನ ನೆಲಕ್ಕೆ ಬಿತ್ತು ಎಂದು ವಿಮಾನ ದುರಂತ ಸಂಭವಿಸಿದ ಸ್ಥಳವಾದ ಓವುಲ್ಡ್ ಗೇಸೆಮ್ ಎಂಬ ಹಳ್ಳಿಯ ಅಗ್ನಿಶಾಮಕದಳದ ಸಿಬ್ಬಂದಿ ಮೊಹಮದ್ ಹೇಳಿದ್ದಾರೆ.
ವಿಮಾನದ ಸಿಬ್ಬಂದಿ ಸೇರಿದಂತೆ ಸಶಸ್ತ್ರ ಪಡೆಯ ಯೋಧರು ಹಾಗೂ ಅವರ ಸಂಬಂಧಿಕರು ಸೇರಿ ಒಟ್ಟು 103 ಮಂದಿ ಇದ್ದರು. ಈ ಪೈಕಿ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದವರನ್ನು ಕೊನೆ ಕ್ಷಣದಲ್ಲಿ ಬಚಾವ್ ಮಾಡಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ. ಆಲ್ಜೀರಿಯಾದಿಂದ ಸುಮಾರು 500 ಕಿ.ಮೀ. ದೂರದಲ್ಲಿ ಓವುಮ್ ಎಲ್ ಭೋವುಗಿ ಪ್ರಾಂತ್ಯದ ಗುಡ್ಡಗಾಡು ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ ಎಂದು ಮಿಲಿಟರಿ ಅಧಿಕಾರಿ ಲಹ್ಮದಿ ಬೌಗಿರ್ನ್ ತಿಳಿಸಿದ್ದಾರೆ.

102 ಜನ ದುರ್ಮರಣ ಒಬ್ಬ ಸಾವು ಗೆದ್ದ
ಮಿಲಿಟರಿ ಸಾರಿಗೆ ವಿಮಾನವೊಂದು ಅಲ್ಜೀರಿಯಾದ ಗುಡ್ಡಗಾಡು ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಆಲ್ಜೀರಿಯಾ ಸಶಸ್ತ್ರ ಪಡೆಯ ಯೋಧರು ಹಾಗೂ ಅವರ ಬಂಧು ಬಳಗದ 102 ಮಂದಿ ಸಾವನ್ನಪ್ಪಿದ ದಾರುಣ ಘಟನೆಯಲ್ಲಿ ಒಬ್ಬ ವ್ಯಕ್ತಿ ಮಾತ್ರ ಬದುಕುಳಿದಿದ್ದಾನೆ.

ಆಹಾ ಕಾಂಗ್ರೆಸ್ ಬಿಜೆಪಿ ಒಂದಾಗ ಕ್ಷಣ
ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಅಜಾದ್ ಹಾಗೂ ಲೋಕಸಭೆ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರು ಪೋಲಿಯೋ ಮುಕ್ತ ಭಾರತ ಕಾರ್ಯಕ್ರಮದಲ್ಲಿ ಕಂಡು ಬಂದಿದ್ದು ಹೀಗೆ PTI Photo by Vijay Verma

ಭುವನೇಶ್ವರದಲ್ಲಿ ನರೇಂದ್ರ ಮೋದಿ ಅಭಿಯಾನ
ಭುವನೇಶ್ವರ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಅಧ್ಯಕ್ಷ ರಾಜನಾಥ್ ಸಿಂಗ್ ಜತೆ ಸಾರ್ವಜನಿಕ ಮೆರವಣಿಗೆಯಲ್ಲಿ

ಭುವನೇಶ್ವರ ನರೇಂದ್ರ ಮೋದಿ ಭಕ್ತರು
ಭುವನೇಶ್ವರದಲ್ಲಿ ನಡೆದ ಸಮಾವೇಶಕ್ಕೆ ನರೇಂದ್ರ ಮೋದಿ ಭಕ್ತರು ಆಗಮಿಸಿದ್ದು ಹೀಗೆ

ರೈಲು ನಿಲ್ದಾಣದಲ್ಲಿ ರಾಹುಲ್ ಸಂವಾದ
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಪೋರ್ಟರ್ ಗಳ ಜತೆ ದೆಹಲಿ ರೈಲು ನಿಲ್ದಾಣದಲ್ಲಿ ನಡೆಸಿದ ಸಂವಾದ ಕಾರ್ಯಕ್ರದ ಚಿತ್ರ PTI Photo by Atul Yadav

ಬೋಡೋ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆ
ಚಿರಂಗ್: ಅಖಿಲ ಬೋಡೋ ವಿದ್ಯಾರ್ಥಿಗಳ ಸಂಘಟನೆ 12 ಗಂಟೆಗಳ ಕಾಲ ರೈಲು ತಡೆ ನಡೆಸಿ ಪ್ರತ್ಯೇಕ ಬೋಡೋ ಲ್ಯಾಂಡ್ ಗಾಗಿ ಆಗ್ರಹಿಸಿದರು.

ಲೋಕಸತ್ತಾ ಕಾರ್ಯಕರ್ತರ ಸುದ್ದಿಗೋಷ್ಠಿ
ಲೋಕಸತ್ತಾ ಅಧ್ಯಕ್ಷ ಜಯಪ್ರಕಾಶ್ ನಾರಾಯಣ್ ಅವರು ಕಾರ್ಯಕರ್ತರ ಜತೆ ನಡೆಸಿದ ಸುದ್ದಿಗೋಷ್ಠಿ


Click it and Unblock the Notifications
