ಕೋರ್ಟ್ ಆವರಣದಲ್ಲಿ ಆತ್ಮಾಹುತಿ ದಾಳಿ, 8 ಮಂದಿ ಸಾವು
ಪಾಕಿಸ್ತಾನದ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದುರ್ಘಟನೆಯಲ್ಲಿ ಎಂಟು ಮಂದಿ ಮೃತಪಟ್ತಿದ್ದು ಅನೇಕರಿಗೆ ಗಾಯವಾಗಿದೆ.
ಕರಾಚಿ, ಫೆಬ್ರವರಿ 21: ಇಲ್ಲಿನ ಜಿಲ್ಲಾ ನ್ಯಾಯಾಲಯವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದುರ್ಘಟನೆಯಲ್ಲಿ ಎಂಟು ಮಂದಿ ಮೃತಪಟ್ತಿದ್ದು ಅನೇಕರಿಗೆ ಗಾಯವಾಗಿದೆ. ಮೂವರು ಆತ್ಮಾಹುತಿ ದಾಳಿಕೋರರು ಕೋರ್ಟಿನೊಳಗೆ ನುಗ್ಗಲು ಯತ್ನಿಸಿದ್ದು ಎಲ್ಲರನ್ನು ಹೊಡೆದುರಳಿಸಲಾಗಿದೆ ಎಂದು ಚಾರ್ ಸಡ್ಡಾ ಜಿಲ್ಲಾ ಪೊಲೀಸರು ಹೇಳಿದ್ದಾರೆ.
ಓರ್ವ ವಕೀಲ ಸೇರಿದಂತೆ ಅನೇಕರ ಸಾವಿಗೆ ಕಾರಣರಾದ ಮೂವರು ಬಾಂಬರ್ ಗಳು ಸತ್ತಿದ್ದಾರೆ. ಹದಿನೈದಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಚಾರ್ ಸಡ್ಡಾ ಜಿಲ್ಲೆಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ತಾಂಗಿ ಎಂಬಲ್ಲಿರುವ ನ್ಯಾಯಾಲಯಕ್ಕೆ ಮೂವರು ಬಂದೂಕುಧಾರಿಗಳು ನುಗ್ಗಲೆತ್ನಿಸಿದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ನಂತರ ಬಾಂಬ್ ಸ್ಫೋಟ ಸಂಭವಿಸಿದೆ.
ಪಾಕಿಸ್ತಾನ ಉಗ್ರ ಸಂಘಟನೆಯೊಂದು ಈ ದಾಳಿಯ ಹೊಣೆ ಹೊತ್ತುಕೊಂಡಿದ್ದು, ಈ ಹಿಂದೆ ಇದೇ ಕೋರ್ಟ್ ಆವರಣದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 17 ಮಂದಿ ಸಾವನ್ನಪ್ಪಿದ್ದರು. ಕಳೆದ 10 ದಿನಗಳಲ್ಲಿ 100ಕ್ಕೂ ಅಧಿಕ ಮಂದಿ ಸಾರ್ವಜನಿಕರ ಪ್ರಾಣ ಹಾನಿಯಾಗಿದೆ.( ಐಎಎನ್ಎಸ್)












Click it and Unblock the Notifications