• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಉಪಗ್ರಹದ ಚಿತ್ರ: ಪಾಕ್ ಗಡಿಯಲ್ಲಿ ನಿಂತ ಸಾವಿರಾರು ಅಫ್ಘನ್ನರು!

|
Google Oneindia Kannada News

ಕಾಬೂಲ್, ಸಪ್ಟೆಂಬರ್ 13: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರದ ಕ್ರೌರ್ಯಕ್ಕೆ ಬೆದರಿದ ಸಾವಿರಾರು ಅಫ್ಘನ್ನರು ಪಾಕಿಸ್ತಾನದ ಗಡಿಯಲ್ಲಿ ನೆರೆದಿರುವ ಉಪಗ್ರಹದ ಚಿತ್ರಗಳನ್ನು ಎನ್ ಡಿ ಟಿವಿ ಸುದ್ದಿ ಸಂಸ್ಧೆಯು ಪ್ರಕಟಿಸಿದೆ. ತಾಲಿಬಾನ್ ರಕ್ಕಸ ರೂಪಕ್ಕೆ ಬೆದರಿದ ಸಾವಿರಾರು ಮಂದಿ ಈಗಾಗಲೇ ಅಫ್ಘಾನಿಸ್ತಾನವನ್ನು ತೊರೆದು ವಿದೇಶಗಳಿಗೆ ಪಲಾಯನ ಮಾಡಿದ್ದಾರೆ.

ಅಫ್ಘಾನಿಸ್ತಾನದಿಂದ ತಪ್ಪಿಸಿಕೊಂಡು ಹೋದ ಸಾವಿರಾರು ಅಫ್ಘನ್ನರು ಪಾಕಿಸ್ತಾನ್, ಇರಾನ್, ಉಜ್ಬೆಕಿಸ್ತಾನ್, ತಜಕಿಸ್ತಾನ್ ಗಡಿಯಲ್ಲಿ ನಿಂತುಕೊಂಡಿರುವುದು ಸ್ಯಾಟ್ ಲೈಟ್ ಭಾವಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ತಾಲಿಬಾನ್ ಸರ್ಕಾರವು ಆರ್ಥಿಕ ಕುಸಿತದ ಮೇಲೆ ಕಡಿವಾಣ ಹಾಕುವ ಅಗತ್ಯವಿದೆ. ಈ ನಿಟ್ಟಿನಲ್ಲಿ ದೇಶದ ಬಜೆಟ್‌ನ ಶೇ.80ರಷ್ಟು ಬಂಡವಾಳವು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದಲೇ ಬರುತ್ತದೆ. ಕಳೆದ ಮಂಗಳವಾರವಷ್ಟೇ ಅಧಿಕೃತವಾಗಿ ತಾಲಿಬಾನ್ ಸರ್ಕಾರವನ್ನು ಘೋಷಿಸಿತು. ಯುನೈಟೆಡ್ ಸ್ಟೇಟ್ಸ್ ನ 9/11ರ ಭಯೋತ್ಪಾದನಾ ದಾಳಿಯ 20ನೇ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ 11ರಂದು ಆಚರಿಸುವ ಸಾಧ್ಯತೆಗಳಿವೆ.ಅಫ್ಘಾನ್-ಪಾಕ್ ನಡುವಿನ ಗಡಿ ಚಿತ್ರಣ:
ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಸ್ಪಿನ್ ಬೋಲ್ಡಾಕ್‌ನ ಚಮನ್ ಗಡಿಯಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಈ ಚಿತ್ರಗಳು ಕೇಂದ್ರೀಕರಿಸುತ್ತವೆ. ಇದರ ಜೊತೆಗೆ ತಾಲಿಬಾನ್ ಉಗ್ರ ಸರ್ಕಾರದ ಅಡಿಯಲ್ಲಿ ಬದುಕು ಕಟ್ಟಿಕೊಳ್ಳಲಾಗದೇ ಹತಾಶರಾದ ಜನರು ದೇಶವನ್ನು ತೊರೆಯುತ್ತಿರುವುದರ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದೆ. ಪಾಕಿಸ್ತಾನದ ಸ್ಪಿನ್ ಬೋಲ್ಡಾಕ್ ಹೊರತಾಗಿ, ಅಫ್ಘಾನಿಸ್ತಾನವು ತಜಕೀಸ್ತಾನ್ ಜೊತೆ ಶಿರ್ ಖಾನ್, ಇರಾನ್ ಜೊತೆಗೆ ಇಸ್ಲಾಂ ಕ್ವಾಲಾ, ಪಾಕಿಸ್ತಾನ್ ಜೊತೆಗೆ ತೊರ್ಕಂ ಗಡಿಯನ್ನು ಹಂಚಿಕೊಂಡಿದೆ.
ಸ್ಪಿನ್ ಬೋಲ್ಡಾಕ್‌ನಲ್ಲಿರುವ ಚಮನ್ ಗಡಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಅತ್ಯಂತ ಜನನಿಬಿಡ ಕ್ರಾಸಿಂಗ್‌ಗಳಲ್ಲಿ ಒಂದಾಗಿದೆ. ಕಳೆದ ಕೆಲವು ವಾರಗಳಿಂದ ಕಾಬೂಲ್ ಮತ್ತು ಇತರ ನಗರಗಳಲ್ಲಿ ತಮ್ಮ ಮನೆಗಳನ್ನು ತೊರೆದು ಸರಕು ಸಾಮಗ್ರಿಗಳು ಮತ್ತು ಕುಟುಂಬ ಸಮೇತರಾಗಿ ಗಡಿ ದಾಟುವುದಕ್ಕೆ ಅನುಮತಿಗಾಗಿ ಕಾದು ನಿಂತಿದ್ದಾರೆ. ಇದರಿಂದ ಗಡಿಯಲ್ಲಿ ಸಂಚಾರ ಹೆಚ್ಚಾಗಿದೆ.
ಇದೀಗ ಪ್ರಕಟಿಸಲಾಗಿರುವ ಚಿತ್ರಗಳು ಕಳೆದ ಸೆಪ್ಟೆಂಬರ್ 6 ರಂದು ರೆಕಾರ್ಡ್ ಮಾಡಲಾಗಿವೆ ಎಂದು ಗತ್ತಾಗಿದೆ. ಆ ಸಮಯದಲ್ಲಿ ಅಫ್ಘಾನಿಸ್ತಾನ ಭಾಗದ ಈ ಸ್ಥಳದಲ್ಲಿ ಒಂದು ವಾರದ ಹಿಂದೆ ಭಾರೀ ಜನಸಂದಣಿ ಸೇರಿತ್ತು. ಆದರೆ ಪಾಕಿಸ್ತಾನ ಇತ್ತೀಚೆಗೆ ಚಮನ್ ಗಡಿ ಪೋಸ್ಟ್ ಅನ್ನು ಬಂದ್ ಮಾಡಿತ್ತು.

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಿಸಿರುವ ತಾಲಿಬಾನ್
ಅಫ್ಘಾನಿಸ್ತಾನದ ಯುಎಸ್ ಬೆಂಬಲಿತ ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು 25 ದಿನಗಳೊಳಗೆ ಹೊಸ ಸರ್ಕಾರ ಘೋಷಣೆ ಆಗಿದೆ. ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ದೇಶದ ಮೇಲೆ 23 ದಿನಗಳ ಹಿಂದೆಯಷ್ಟೇ ಹಿಡಿತ ಸಾಧಿಸಿದ ತಾಲಿಬಾನ್ ಸಂಘಟನೆ ಹೊಸ ಸರ್ಕಾರವನ್ನು ಘೋಷಿಸಿದೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ. ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದಾರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಿ ಆಗಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗಿದೆ. ಈ 33 ಸಚಿವರಲ್ಲಿ 17 ಮಂದಿ ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಗುರುತಿಸಿಕೊಂಡವರು ಎಂದು ಗೊತ್ತಾಗಿದೆ.

ಅಫ್ಘಾನ್ ನೆಲದಲ್ಲಿ ಮಹಿಳೆಯರಿಗೆ ಮತ್ತೆ ಅಪಾಯ
ಅಫ್ಘಾನಿಸ್ತಾನದ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಪುರುಷರು ಮತ್ತು ಮಹಿಳೆಯರನ್ನು ಪ್ರತ್ಯೇಕಿಸಿ ನೋಡಲಾಗುತ್ತಿದೆ. ಹೊಸ ಸರ್ಕಾರದಲ್ಲಿ ಮಹಿಳೆಯರಿಗೂ ವಿಶೇಷ ಪಾತ್ರವನ್ನು ನೀಡಬೇಕು ಎಂಬ ಬಗ್ಗೆ ತಾಲಿಬಾನ್ ಯೋಜಿಸುವುದಿಲ್ಲ. ದೇಶಾದ್ಯಂತ ಪ್ರಮುಖ ಮಹಿಳೆಯರು ತಮ್ಮ ಸುರಕ್ಷತೆ ಭಯದಲ್ಲೇ ಹೆದರಿ ಕುಳಿತುಕೊಂಡಿದ್ದಾರೆ. 1996 ರಿಂದ 2001 ರವರೆಗೆ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿದ ಸಂದರ್ಭದಲ್ಲಿ ಕಠಿಣ ಷರಿಯಾ ಅಥವಾ ಇಸ್ಲಾಮಿಕ್ ಕಾನೂನನ್ನು ಕಟ್ಟುನಿಟ್ಟಾಗಿ ಇನ್ನು ಕೆಲವೊಮ್ಮೆ ಕ್ರೂರವಾಗಿ ಜಾರಿಗೊಳಿಸಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಮಹಿಳೆಯರು ಕೆಲಸಕ್ಕೆ ಹೋಗುವಂತಿಲ್ಲ ಹಾಗೂ ಹುಡುಗಿಯರಿಗೆ ಶಾಲಾ-ಕಾಲೇಜುಗಳಿಗೆ ಹಾಜರಾಗುವುದಕ್ಕೆ ಯಾವುದೇ ರೀತಿ ಅನುಮತಿ ಇರುವುದಿಲ್ಲ. ಮಹಿಳೆಯರು ಮನೆಯಿಂದ ಹೊರಗೆ ಹೋಗುವಾಗ ತಮ್ಮ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳಬೇಕು. ಒಬ್ಬ ಪುರುಷ ಸಂಬಂಧಿಯ ಜೊತೆಗಿರಬೇಕು. ಈ ನಿಯಮ ಉಲ್ಲಂಘಿಸಿದರೆ ತಾಲಿಬಾನ್ ಧಾರ್ಮಿಕ ಪೊಲೀಸರಿಂದ ಅವಮಾನ ಮತ್ತು ಸಾರ್ವಜನಿಕವಾಗಿ ಏಟು ನೀಡಲಾಗುತ್ತದೆ.

English summary
Thousands Of Afghans At Pak Border; Here Click to Exclusive Satellite Images.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X