• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಲಿಬಾನ್ ಆಡಳಿತಕ್ಕೆ ಬೇಸತ್ತು, ಇರಾನಿನತ್ತ ವಲಸೆ ಹೊರಟ ಅಫ್ಘಾನ್ ನಿರಾಶ್ರಿತರು

|
Google Oneindia Kannada News

ಕಾಬೂಲ್, ನವೆಂಬರ್ 11: ಅಫ್ಘಾನಿಸ್ತಾನವು ತಾಲಿಬಾನ್ ವಶವಾದ ಬಳಿಕ ಅಲ್ಲಿನ ನಾಗರಿಕರಿಗೆ ನಿದ್ದೆ ಇಲ್ಲದಂತಾಗಿದೆ. ಆದಷ್ಟು ಬೇಗ ದೇಶ ತೊರೆಯಬೇಕು ಎನ್ನುವ ತವಕದಲ್ಲಿದ್ದಾರೆ.

ನಿತ್ಯ ಸಾವಿರಾರು ಮಂದಿ ನಿರಾಶ್ರಿತರು ಅಫ್ಘಾನ್ ತೊರೆದು ಇರಾನ್‌ನತ್ತ ಮುಖ ಮಾಡುತ್ತಿದ್ದು ಇದು ಯುರೋಪ್‌ಗೆ ತೀವ್ರ ತಲೆನೋವಾಗಿ ಪರಿಣಮಿಸಿದೆ.

ಬದುಕಿನ ಹುಡುಕಾಟ: ಅಫ್ಘಾನ್ ನಿರಾಶ್ರಿತರಿಗೆ ಯಾವ ರಾಷ್ಟ್ರಗಳಲ್ಲಿ ನೆಲೆ!? ಬದುಕಿನ ಹುಡುಕಾಟ: ಅಫ್ಘಾನ್ ನಿರಾಶ್ರಿತರಿಗೆ ಯಾವ ರಾಷ್ಟ್ರಗಳಲ್ಲಿ ನೆಲೆ!?

ತಾಲಿಬಾನ್ ಆಡಳಿತಕ್ಕೊಳಪಡಲು ಇಷ್ಟವಿಲ್ಲದೆ ಪ್ರತಿದಿನ ಸಾವಿರಾರು ಮಂದಿ ಆಫ್ಘನ್ನರು ನೆರೆಯ ಇರಾನ್ ಗೆ ವಲಸೆ ಹೋಗುತ್ತಿರುವ ಸುದ್ದಿ ಬಹಿರಂಗವಾಗಿದೆ. ಆಫ್ಘನ್ ವಲಸಿಗರಿಗೆ ಮಾನವೀಯ ನೆರವು ನೀಡುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ನಾರ್ವೆ ತಂಡ ಬಹಿರಂಗಪಡಿಸಿದ್ದಾರೆ.

ಇರಾನ್ ಒಳಕ್ಕೆ ಪ್ರವೇಶಿಸಿರುವ ವಲಸಿಗರಲ್ಲಿ ಬಹುತೇಕರು ಅಲ್ಲಿಂದ ಐರೋಪ್ಯ ರಾಷ್ಟ್ರಗಳಿಗೆ ಹೋಗುವ ಇರಾದೆ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ಈ ಬಗ್ಗೆ ಅವರು ತಮ್ಮ ಸಂಬಂಧಿಕರಲ್ಲಿಯೂ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಇರಾನ್ ದೇಶದೊಳಕ್ಕೆ ಆಫ್ಘನ್ ನಿರಾಶ್ರಿತರು ವಲಸೆ ಪ್ರಮಾನ ಹೆಚ್ಚುತ್ತಲೇ ಹೋದಲ್ಲಿ ಮುಂದೆ ಐರೋಪ್ಯ ರಾಷ್ಟ್ರಗಳಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಈಗಾಗಲೇ ಕುಸಿಯುತ್ತಿರುವ ಅಫ್ಘಾನಿಸ್ತಾನದ ಆರ್ಥಿಕತೆ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಮತ್ತೊಂದು ನಿರ್ಧಾರವನ್ನು ತಾಲೀಬಾನ್ ಕೈಗೊಂಡಿದ್ದು ವಿದೇಶಿ ಕರೆನ್ಸಿ ಬಳಕೆಯ ಮೇಲೆ ಸಂಪೂರ್ಣ ನಿಷೇಧ ಹೇರಿದೆ.

ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿ ಯಾರಾದರೂ ವಿದೇಶಿ ಕರೆನ್ಸಿ ಬಳಸಿದ್ದೇ ಆದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಾಲೀಬಾನ್ ಎಚ್ಚರಿಕೆ ನೀಡಿದೆ.

"ಇಸ್ಲಾಮಿಕ್ ಎಮಿರೇಟ್ (ತಾಲೀಬಾನ್) ಎಲ್ಲಾ ನಾಗರಿಕರಿಗೆ, ಅಂಗಡಿಗಳಿಗೆ, ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ಅಫ್ಘಾನಿಯಲ್ಲೇ ವ್ಯವಹರಿಸಬೇಕು, ವಿದೇಶಿ ಕರೆನ್ಸಿಯನ್ನು ಬಳಕೆ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಅಫ್ಘಾನಿಸ್ತಾನದ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್ ಹೆಚ್ಚು ಚಲಾವಣೆಯಲ್ಲಿರುವ ವಿನಿಮಯದ ಕರೆನ್ಸಿಯಾಗಿದೆ. ಗಡಿ ಭಾಗಗಳಲ್ಲಿ ಪಾಕಿಸ್ತಾನದ ದೇಶದ ಕರೆನ್ಸಿಯ ವಿನಿಮಯ ಹೆಚ್ಚಾಗಿದೆ.

ಇನ್ನು ಅಫ್ಘಾನಿಸ್ತಾನ ಫೂಟ್‌ಬಾಲ್ ಆಟಗಾರ್ತಿಯರು ಆಸ್ಟ್ರೇಲಿಯಾಗೆ ವಲಸೆ ಹೋಗಿದ್ದಾರೆ.

ತಾಲಿಬಾನ್‌ ಆಡಳಿತ ಅಫ್ಘಾನಿಸ್ತಾನದ ಮಹಿಳೆಯರಿಗೆ ಕಂಟಕವಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ತಂಡದ ಆಟಗಾರ್ತಿಯರು ದೇಶ ತೊರೆದು ಆಸ್ಪ್ರೇಲಿಯಾಗೆ ವಲಸೆ ಹೋಗಿದ್ದಾರೆ.

ಆಸ್ಪ್ರೇಲಿಯಾ ಸರ್ಕಾರದ ಸ್ಥಳಾಂತರ ಕಾರ್ಯಾಚರಣೆಯ ವಿಮಾನದಲ್ಲಿ ಆಟಗಾರ್ತಿಯರು, ಅವರ ಕುಟುಂಬಸ್ಥರು, ಅಧಿಕಾರಿಗಳು ಸೇರಿ 75ಕ್ಕೂ ಹೆಚ್ಚು ಜನರನ್ನು ಮಂಗಳವಾರ ಕಾಬೂಲ್‌ನಿಂದ ಸ್ಥಳಾಂತರಿಸಲಾಗಿದೆ. 'ಆಟಗಾರ್ತಿಯರು ಅಪಾಯದಲ್ಲಿದ್ದರು. ಅವರ ನೆರವಿಗೆ ಧಾವಿಸಿದ ಆಸ್ಪ್ರೇಲಿಯಾ ಸರ್ಕಾರ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಧನ್ಯವಾದಗಳು' ಎಂದು ಜಾಗತಿಕ ಫುಟ್ಬಾಲ್‌ ಆಟಗಾರರ ಸಂಘ ತಿಳಿಸಿದೆ.

ಮಹಿಳಾ ಫುಟ್ಬಾಲ್‌ ತಂಡವನ್ನು 2007ರಲ್ಲಿ ರಚಿಸಲಾಗಿತ್ತು. ಆದರೆ ಮಹಿಳೆಯರು ಆಡುವುದು ತಾಲಿಬಾನ್‌ ನಿಯಮಕ್ಕೆ ವಿರುದ್ಧವಾಗಿದ್ದು, ಹೀಗಾಗಿ ಅಪಾಯದಲ್ಲಿದ್ದ ಆಟಗಾರ್ತಿಯರು ಆಸ್ಪ್ರೇಲಿಯಾಗೆ ವಲಸೆ ಹೋಗಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ 20 ಸಾವಿರ ಹಿಂದೂ, ಸಿಖ್ ಸಮುದಾಯದ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕೆನಡಾ ಮುಂದಾಗಿದೆ. ಯಾರು ಯುದ್ಧ, ಕಿರುಳುತ, ಹಿಂಸಾಚಾರಕ್ಕೆ ಬೇಸತ್ತು ತಮ್ಮ ದೇಶದಿಂದ ಒತ್ತಾಯಪೂರ್ವಕವಾಗಿ ಪಲಾಯನಮಾಡುತ್ತಾರೋ ಅಂಥವರನ್ನು ನಿರಾಶ್ರಿತರು ಎಂದು ವಿಶ್ವಸಂಸ್ಥೆಯ ಉನ್ನತ ಆಯುಕ್ತರು ವ್ಯಾಖ್ಯಾನಿಸಿದೆ.

"ನಿರಾಶ್ರಿತರಿಗೆ ನಿರ್ದಿಷ್ಟ ಸಾಮಾಜಿಕ ಗುಂಪಿನಲ್ಲಿ ಜನಾಂಗ, ಧರ್ಮ, ರಾಷ್ಟ್ರೀಯತೆ, ರಾಜಕೀಯ ಅಭಿಪ್ರಾಯ ಅಥವಾ ಸದಸ್ಯತ್ವದ ಕಾರಣಗಳಿಂದಾಗಿ ಕಿರುಕುಳದ ಭಯವಿರುತ್ತದೆ. ಅಂಥವರು ತಾಯ್ನಾಡಿಗೆ ಮರಳುವುದಕ್ಕೆ ಯಾವುದೇ ಕಾರಣಕ್ಕೂ ಬಯಸುವುದಿಲ್ಲ. ಏಕೆಂದರೆ ಯುದ್ಧ ಮತ್ತು ಜನಾಂಗೀಯ, ಬುಡಕಟ್ಟು ಮತ್ತು ಧಾರ್ಮಿಕ ಹಿಂಸಾಚಾರಗಳು ನಿರಾಶ್ರಿತರು ದೇಶ ತೊರೆಯಲು ಪ್ರಮುಖ ಕಾರಣಗಳಾಗಿರುತ್ತವೆ.

ವಲಸೆ ನೀತಿ, ನಿರಾಶ್ರಿತ, ಪೌರತ್ವ ಸಚಿವ ಮಾರ್ಕೊ ಇ ಎಲ್ ಮೆಂಡಿಸಿನೊ, ರಾಷ್ಟ್ರೀಯ ರಕ್ಷಣಾ ಸಚಿವ ಹರ್ಜಿತ್ ಎಸ್ ಸಜ್ಜನ್ ಮತ್ತು ವಿದೇಶಾಂಗ ಸಚಿವ ಮಾರ್ಕ್ ಗರ್ನೌ ಜಂಟಿಯಾಗಿ ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಕೆನಡಾ ಸರ್ಕಾರದ ಈ ನಿರ್ಧಾರವನ್ನು ಕೈಗೊಂಡಿದ್ದು ಘೋಷಿಸಿದ್ದರು.

English summary
Thousands of Afghan refugees are fleeing the Taliban into neighboring Iran every day and the trend could eventually become a crisis for Europe, a top aid official said on Wednesday, November 10, 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion