Surgical Strike: ಉಗ್ರರ ಭೀಕರ ದಾಳಿ ಬಗ್ಗೆ ಪಾಕಿಸ್ತಾನ ಹೇಳಿದ್ದು ಹೀಗೆ...
ಉಗ್ರರ ಫ್ಯಾಕ್ಟರಿ ಆಗಿರುವ ಪಾಕಿಸ್ತಾನದಲ್ಲಿ ಯುವಕರ ಬ್ರೈನ್ ವಾಷ್ ಮಾಡುತ್ತಾ, ಅವರಿಗೆ ಮೋಸ ಮಾಡಿ ಹಿಂಸಾಚಾರಕ್ಕೆ ಇಳಿಸುವುದು ಪಾಕಿಸ್ತಾನದಲ್ಲಿ ಮಾಮೂಲಿ ಆಗಿದೆ. ಪಾಕ್‌ನ ಈ ರೀತಿಯ ಕೃತ್ಯದ ಪರಿಣಾಮ ಈಗಾಗಲೇ ದೊಡ್ಡ ಸಮಸ್ಯೆ ಸೃಷ್ಟಿಯಾಗಿದ್ದು, ಕಾಶ್ಮೀರದ ಮೂಲಕ ಭಾರತಕ್ಕೆ ಬಂದು ಹಲವು ರೀತಿಯ ಸಮಸ್ಯೆ ಮಾಡುತ್ತಿದ್ದಾರೆ ಉಗ್ರರು. ನಿನ್ನೆಯೂ ಅದೇ ರೀತಿ ಭಾರತದಲ್ಲಿ ಭೀಕರ ಉಗ್ರ ದಾಳಿ ನಡೆದು ಹೋಗಿತ್ತು.
ಪಾಪಿ ಪಾಕಿಸ್ತಾನದ ಸಹಾಯ ಪಡೆದು ಬಂದಿದ್ದ ಉಗ್ರರು ಕಣಿವೆ ರಾಜ್ಯದಲ್ಲಿ ಹಿಂಸೆ ನಡೆಸಿದ್ರು. ಅಷ್ಟಕ್ಕೂ ಇದೀಗ ಆಗಿದ್ದು ಏನು ಅಂದ್ರೆ, ಕಾಶ್ಮೀರದ ಪ್ರಮುಖ ನಗರ ಶ್ರೀನಗರ ಭಾಗದಿಂದ ಕೇವಲ 90 ಕಿ.ಮೀ. ದೂರದಲ್ಲಿ ಇರುವ ಪಹಲ್ಗಾಮ್ ಜಾಗದಲ್ಲಿ ಉಗ್ರರು ಅಟ್ಟಹಾಸವನ್ನ ಮೆರೆದಿದ್ದಾರೆ. ಪಹಲ್ಗಾಮ್ ಪ್ರದೇಶಕ್ಕೆ ಪ್ರವಾಸಕ್ಕೆ ಅಂತಾ ತೆರಳಿದ್ದ ಟೂರಿಸ್ಟ್‌ಗಳನ್ನೇ ಈಗ ಟಾರ್ಗೆಟ್ ಮಾಡಿ ಪಾಪಿ ಉಗ್ರರು ದಾಳಿ ಮಾಡಿದ್ದಾರೆ, ಈ ಮೂಲಕ 26 ಭಾರತೀಯರ ಹತ್ಯೆ ನಡೆದಿದೆ. ಈ ಘಟನೆ ಬಗ್ಗೆ ಪಾಕಿಸ್ತಾನ ರಿಯಾಕ್ಷನ್ ಕೊಟ್ಟಿದೆ.

ಪಾಪಿ ಪಾಕಿಸ್ತಾನ ಹೇಳಿದ್ದು ಏನು?
ಅಂದಹಾಗೆ ಮೊದಲೇ ಹೇಳಿದಂತೆ ಪಾಕಿಸ್ತಾನ ಉಗ್ರರ ಫ್ಯಾಕ್ಟರಿ ಆಗಿದ್ದು, ಇಲ್ಲಿ ನೂರಾರು ಉಗ್ರರ ಸಂಘಟನೆಗಳು ಆಕ್ಟಿವ್ ಆಗಿವೆ. ಈಗಲೂ ಅಷ್ಟೇ ಪಾಕಿಸ್ತಾನದ ಕಡೆಯಿಂದಲೇ ಬಂದ ಉಗ್ರರು ಭಾರತದಲ್ಲಿ ರಕ್ತಪಾತ ಮಾಡಿದ್ದಾರೆ ಎಂಬ ಆರೋಪ ಇದೆ. ಆದರೆ ಅದನ್ನ ಒಪ್ಪದ ಪಾಪಿ ಪಾಕಿಸ್ತಾನ ಕಥೆ ಕಟ್ಟಲು ಮುಂದಾಗಿದೆ. ಭಾರತದ ಆಜನ್ಮ ವೈರಿಯೂ ಆಗಿರುವ ಪಾಪಿ ಪಾಕಿಸ್ತಾನದ ಈ ವರ್ತನೆ ಇದೀಗ ಸಾಕಷ್ಟು ಸಂಚಲನ ಸೃಷ್ಟಿ ಮಾಡುವ ಜೊತೆಗೆ, ಉಗ್ರರ ಜೊತೆಗೆ ಪಾಕಿಸ್ತಾನಕ್ಕೆ ಇರುವ ನಂಟು ಜಗತ್ತಿಗೇ ಗೊತ್ತಾಗುವಂತೆ ಮಾಡುತ್ತಿದೆ.
ಸುಳ್ಳು ಹೇಳುತ್ತಿರುವ ಪಾಪಿ ಪಾಕಿಸ್ತಾನ?
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್ ಕಣಿವೆ ರಾಜ್ಯದ ಪಹಲ್ಗಾಮ್ ಪ್ರದೇಶದಲ್ಲಿ ನಡೆದ ಉಗ್ರರ ದಾಳಿ ಬಗ್ಗೆ ಮಾತನಾಡಿದ್ದು, ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವೇ ಇಲ್ಲ ಎಂದಿದ್ದಾರೆ. ಆದರೆ ಪಾಕಿಸ್ತಾನ ಬಿಟ್ಟು ಬೇರೆ ಯಾವ ದೇಶದಿಂದ ಉಗ್ರರು ಕಾಶ್ಮೀರದ ಒಳಗೆ ನುಗ್ಗಲು ಸಾಧ್ಯ? ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಪಾಕ್ ರಕ್ಷಣಾ ಸಚಿವ ಖವಾಜಾ ಆಸೀಫ್ ಈ ಬಗ್ಗೆ ಮಾತನಾಡುತ್ತಾ, ಇಂತಹ ಆರೋಪ ಪಾಕಿಸ್ತಾನದ ಮೇಲೆ ಹೊರಿಸಬೇಡಿ ಎಂದಿರುವುದು ನಗೆಪಾಟಲಿಗೆ ಗುರಿಯಾಗಿದೆ.
ಹೀಗೆ ಮತ್ತೊಂದು ಕಡೆಯಲ್ಲಿ ಭಯೋತ್ಪಾದನೆ ನಾವು ಬೆಂಬಲಿಸಲ್ಲ ಎಂದಿರುವ ಪಾಕ್ ರಕ್ಷಣಾ ಸಚಿವ, ಈ ವಿಚಾರದಲ್ಲಿ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ. ಆದರೂ ಪಾಕಿಸ್ತಾನದ ಕೈವಾಡ ಇರುವುದು ಈಗ ಮೇಲ್ನೋಟಕ್ಕೆ ಕನ್ಫರ್ಮ್ ಆಗಿದೆ, ಎಂಬ ಆರೋಪ ಇದೆ. ಭಾರತ ಕೂಡ ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದೆ. ಎರಡೂ ದೇಶಗಳ ಮಧ್ಯೆ ಈ ವಿಚಾರದಲ್ಲಿ ತಿಕ್ಕಾಟ ಇದ್ದೇ ಇದೆ.












Click it and Unblock the Notifications