ಇರಾನ್ ಮತ್ತೆ ಪರಮಾಣು ಬಾಂಬ್ ತಯಾರಿಸುತ್ತಾ? ಏನಿದು ಪಾಶ್ಚಿಮಾತ್ಯ ದೇಶಗಳಿಗೆ ಆತಂಕ?

ಇರಾನ್ ಮತ್ತು ಇಸ್ರೇಲ್ ಯುದ್ಧ ಕೈಮೀರುವ ಹಂತಕ್ಕೆ ಹೋಗಿದ್ದ ಸಮಯದಲ್ಲಿ ಎಲ್ಲರೂ ಈ ಯುದ್ಧಕ್ಕೆ ಬ್ರೇಕ್ ಬಿದ್ದರೆ ಸಾಕು ದೇವರೇ ಅಂತಾ ಯೋಚನೆ ಮಾಡುತ್ತಿದ್ದರು. ಒಬ್ಬರ ಮೇಲೆ ಮತ್ತೊಬ್ಬರು ಭಾರಿ, ಭರ್ಜರಿ ದೊಡ್ಡ ದೊಡ್ಡ ಬಾಂಬ್‌ಗಳನ್ನ ಹಾಕುತ್ತಾ ವಿನಾಶಕಾರಿ ಪ್ರಯೋಗ ಕೂಡ ಮಾಡುತ್ತಿದ್ದರು. ಈ ಎಲ್ಲಾ ಘಟನೆಗಳ ನಂತರ ದಿಢೀರ್ ಯುದ್ಧ ಕೂಡ ನಿಂತು ಹೋಗಿದ್ದು, ಪರಿಸ್ಥಿತಿ ತಿಳಿಯಾಗಿದೆ ಅಂತಾನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಬೇರೆ ಸುದ್ದಿಯೇ ಹೊರ ಬೀಳುತ್ತಿದೆ.

ಪರಮಾಣು ಬಾಂಬ್ ಅಂದ್ರೆ ನಿಮಗೆಲ್ಲಾ ಗೊತ್ತಿರಬಹುದು, ಪರಮಾಣು ಬಾಂಬ್ ಸಾಮರ್ಥ್ಯಕ್ಕೆ ಒಂದು ಇಡೀ ದೇಶವೇ ನಾಶವಾಗಿ ಹೋಗಿತ್ತು. ಈಗಲೂ ಜಪಾನ್ ದೇಶದಲ್ಲಿ ಭಾರಿ ದೊಡ್ಡ ಸಮಸ್ಯೆ ಎದುರಿಸುತ್ತಾ ನರಳುತ್ತಿದ್ದಾರೆ ಅಲ್ಲಿನ ಜನ. 75 ವರ್ಷಕ್ಕೂ ಹೆಚ್ಚು ಸಮಯ ಕಳೆದರೂ ಸಮಸ್ಯೆ ಮಾತ್ರ ಸರಿಯಾಗಿಲ್ಲ, ಈ ಕಾರಣಕ್ಕೆ ಪರಮಾಣು ಬಾಂಬ್ ಮತ್ತೆ ಬಳಕೆ ಮಾಡಬಾರದು ಅಂತಾ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಕಾರಣಕ್ಕೆ ಹೊಸ ಹೊಸ ದೇಶಗಳು ಪರಮಾಣು ಬಾಂಬ್ ಪರೀಕ್ಷೆ ಮಾಡುವುದರ ವಿರುದ್ಧ ಅಮೆರಿಕ ಕೂಡ ನಿರ್ಬಂಧ ಹೇರಿದೆ. ಆದರೆ ಅಮೆರಿಕದ ಶತ್ರು ಇರಾನ್ ಮಾತ್ರ ರೊಚ್ಚಿಗೆದ್ದು ಕೂತಿದೆ.

This Is How The Iran Is On News After The Ceasefire With Israel

ಇರಾನ್ ಬಳಿ ಶೀಘ್ರದಲ್ಲೇ ಪರಮಾಣು ಬಾಂಬ್?

ಹೌದು, ಜಾಗತಿಕವಾಗಿ ದೊಡ್ಡಣ್ಣ ಅಂತಾ ಬಿರುದು ಪಡೆದಿರುವ ಅಮೆರಿಕ ವಿರುದ್ಧ ಇರಾನ್ ತೊಡೆತಟ್ಟಿ ನಿಂತಿದೆ. ಅಲ್ಲದೆ ಪದೇ ಪದೇ ಯುದ್ಧ ನಡೆಸಲು ನಾನು ಸಿದ್ಧ ಅಂತಾ ಕೂಡ ಮುಂದೆ ನುಗ್ಗುತ್ತಾ ಇದೆ. ಹೀಗೆ, ಇರಾನ್ ಮುಂದೆ ನುಗ್ಗಿದ್ದ ಕಾರಣಕ್ಕೆ ಅಮೆರಿಕ ಕೂಡ ಇರಾನ್ ನೆಲದ ಮೇಲೆ ಭೀಕರವಾಗಿ ದಾಳಿ ಮಾಡಿತ್ತು. ಇರಾನ್ ಪರಮಾಣು ಸ್ಥಾವರಗಳ ಮೇಲೆ ದಾಳಿ ಆಗಿತ್ತು. ಆ ನಂತರ ನ್ಯೂಕ್ಲಿಯರ್ ಅಟ್ಯಾಕ್ ಆಗುತ್ತೆ ಅನ್ನೋ ಆತಂಕ ಇನ್ನಷ್ಟು ಹೆಚ್ಚಾಗಿತ್ತು.

ಮತ್ತೆ ಭಯದ ವಾತಾವರಣ ಎದುರಾಗುತ್ತಾ?

ಇಷ್ಟೆಲ್ಲಾ ಘಟನೆಗಳ ನಡುವೆ ಕೂಡ ಮೊನ್ನೆ ಮೊನ್ನೆ ಶುರುವಾಗಿದ್ದ ಇಸ್ರೇಲ್ & ಇರಾನ್ ಯುದ್ಧ ನಿಂತು ಹೋಗಿತ್ತು. ಅಲ್ಲದೆ ಇರಾನ್ ಪರಮಾಣು ಬಾಂಬ್ ಪರೀಕ್ಷೆ ನಿಲ್ಲಿಸುತ್ತೆ ಅಂತಾ ಕೂಡ ಹೇಳಲಾಗಿತ್ತು. ಆದರೆ ಇದೀಗ ಬೇರೆಯದ್ದೇ ಸುದ್ದಿ ಹಬ್ಬಿದ್ದು, ಇರಾನ್ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಪರಮಾಣು ಬಾಂಬ್‌ನ ಪರೀಕ್ಷೆ ಶುರು ಮಾಡಲಿದೆ ಅಂತಾ ಹೇಳಲಾಗ್ತಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿಯ ಬಗ್ಗೆ ನಿಯಂತ್ರಣ ಹೊಂದಿರುವ ಸಂಸ್ಥೆ ಕೂಡ ಆತಂಕ ಹೊರ ಹಾಕಿದೆ. ವಿಶ್ವಸಂಸ್ಥೆ ಕೂಡ ಈ ಬಗ್ಗೆ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದೆ, ಯಾಕಂದ್ರೆ ಇರಾನ್ ಬಳಿ ಪರಮಾಣು ಬಾಂಬ್ ಬಂದರೆ ಅದು ಅಮೆರಿಕ ಹಾಗೂ ಇಸ್ರೇಲ್ ದೇಶಗಳಿಗೆ ಭಾರಿ ಸಮಸ್ಯೆ ಮಾಡಲಿದೆ ಎಂಬ ಆತಂಕ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+