Israel: ಇಸ್ರೇಲ್ ನೆರವಿಗೆ ಬರಲಿದೆಯಾ ಅಮೆರಿಕದ ಯುದ್ಧ ನೌಕೆಗಳು?
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದೀಗ ಇರಾನ್ ವಿರುದ್ಧ ಯುದ್ಧ ಘೋಷಣೆಯ ಸಿದ್ಧತೆಯಲ್ಲಿ ಇದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಯಾಕಂದ್ರೆ 200ಕ್ಕೂ ಹೆಚ್ಚು ಕ್ಷಿಪಣಿ ಹಾರಿಸಿ, ಇಸ್ರೇಲ್ ವಿರುದ್ಧ ಇರಾನ್ ಪರೋಕ್ಷವಾಗಿ ಯುದ್ಧ ಘೋಷಣೆ ಮಾಡಿದೆ. ಇದೆಲ್ಲಾ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಅಲ್ಲದೆ ಇಸ್ರೇಲ್ ಕೂಡ ಸೇಡಿಗಾಗಿ ಕಾಯ್ತಾ ಇದೆ. ಹೀಗಿದ್ದಾಗ ಇರಾನ್ ಬಳಿ ಪರಮಾಣು ಅಸ್ತ್ರಗಳ ರಾಶಿಯೇ ಇದ್ದು, ಇಸ್ರೇಲ್ ಮೇಲೆ ಇದರಿಂದ ದೊಡ್ಡ ಪರಿಣಾಮ ಆಗುವ ಸಾಧ್ಯತೆ ಇದೆ. ಹೀಗಾಗಿಯೇ ಅಮೆರಿಕದಲ್ಲಿ ಇರುವ ಯುದ್ಧ ನೌಕೆಗಳು ಇದೀಗ ಇಸ್ರೇಲ್ ಕಡೆಗೆ ಪ್ರಯಾಣ ಆರಂಭ ಮಾಡಿವೆಯಾ?
ಇಸ್ರೇಲ್ ಯಾವಾಗಲೇ ಸಂಕಷ್ಟಕ್ಕೆ ಸಿಲುಕಿದ್ದರೂ ಆ ತಕ್ಷಣ ಸಹಾಯಕ್ಕೆ ಓಡೋಡಿ ಬರುವ ಏಕೈಕ ದೇಶ ಅಂದ್ರೆ ಅದು ಅಮೆರಿಕ. ಸುಮಾರು ಮುಕ್ಕಾಲು ಶತಮಾನದಿಂದ ಕೂಡ ಇಬ್ಬರ ನಡುವೆ ಇದೇ ರೀತಿಯ ಸ್ನೇಹ & ಬಾಂಧವ್ಯ ಇದೆ. ಹೀಗೆ ಎರಡೂ ದೇಶಗಳು ಒಗ್ಗಟ್ಟಾಗಿಯೇ ಮುಂದೆ ಸಾಗುತ್ತಿವೆ. ಅದರಲ್ಲೂ ಮಧ್ಯಪ್ರಾಚ್ಯ ಭಾಗದಲ್ಲಿ ಪದೇ ಪದೇ ಯುದ್ಧದ ಕುಲುಮೆಗೆ ಬಿದ್ದು ಒದ್ದಾಡುವ ಇಸ್ರೇಲ್ ನೆರವಿಗೆ ಅಮೆರಿಕ ಯಾವ ಕ್ಷಣದಲ್ಲಿ ಬೇಕಾದರೂ ಓಡೋಡಿ ಬರುತ್ತದೆ. ಅದೇ ರೀತಿ ಇದೀಗ ಇಸ್ರೇಲ್ ಸೇನೆ ವಿರುದ್ಧ, ಲೆಬನಾನ್, ಇರಾನ್ & ಸಿರಿಯಾ ಸೇರಿದಂತೆ ಗಾಜಾ ಪಟ್ಟಿ ಯುದ್ಧ ಸಾರಿದ ಕಾರಣಕ್ಕೆ ಅಮೆರಿಕದ ಯುದ್ಧ ನೌಕೆಗಳು ಇಸ್ರೇಲ್ ಕಡೆಗೆ ನುಗ್ಗಿ ಬರುತ್ತಿವೆ ಎಂಬ ವದಂತಿ ಹಬ್ಬಿದೆ!

ಇಸ್ರೇಲ್ ಬಳಿ ನ್ಯೂಕ್ಲಿಯರ್ ಅಸ್ತ್ರ?
ಅಮೆರಿಕದ ಬಹುತೇಕ ವಿನಾಶಕಾರಿ ಅಸ್ತ್ರಗಳು ಈಗಾಗಲೇ ಇಸ್ರೇಲ್ ಬಳಿ ಬೀಡು ಬಿಟ್ಟಿದ್ದು, ನ್ಯೂಕ್ಲಿಯರ್ ಅಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಇರುವ ಸಬ್‌ಮರೀನ್ ಕೂಡ ಓಡಾಡುತ್ತಿವೆ. ಹೀಗಿದ್ದಾಗ ಮತ್ತಷ್ಟು ಯುದ್ಧ ವಿಮಾನಗಳು & ಯುದ್ಧ ಹೆಲಿಕಾಪ್ಟರ್ ಸೇರಿದಂತೆ ಕ್ಷಿಪಣಿ ದಾಳಿ ಎದುರಿಸಬಲ್ಲ ಮಿಸೈಲ್ ಡಿಫೆಂಡರ್‌ಗಳನ್ನ ಕೂಡ ಅಮೆರಿಕ ಈಗ ಇಸ್ರೇಲ್ ನೆಲಕ್ಕೆ ಕಳುಹಿಸುವ ಸಾಧ್ಯತೆ ದಟ್ಟವಾಗಿದೆ. ಇರಾನ್, ಲೆಬನಾನ್ & ಸಿರಿಯಾದಲ್ಲಿ ಈ ಬಗ್ಗೆ ಭಯ ಶುರುವಾಗಿದೆ. ಇಷ್ಟೆಲ್ಲದರ ನಡವೆ ಹಿಜ್ಬುಲ್ಲಾದ ಹೊಸ ಮುಖ್ಯಸ್ಥನ ಹತ್ಯೆ ಪ್ರಯತ್ನಕ್ಕೂ ಇಸ್ರೇಲ್ ದಾಳಿ ಆರಂಭಿಸಿದೆ ಎಂದು ಆರೋಪ ಮಾಡಲಾಗಿದೆ.
ಹಿಜ್ಬುಲ್ಲಾ ಹೊಸ ಮುಖ್ಯಸ್ಥನ ಹತ್ಯೆ?
ಇಸ್ರೇಲ್ ಆಡುತ್ತಿರುವ ರೀತಿ ನೋಡಿದರೆ ಯಾವುದೋ ವಿನಾಶಕ್ಕೆ ಇದೀಗ ಮುನ್ನುಡಿಯನ್ನು ಬರೆದಂತೆ ಕಾಣುತ್ತಿದೆ. ಇಸ್ರೇಲ್ ಮನಸ್ಸಿಗೆ ಬಂದಂತೆ ಅಟ್ಯಾಕ್ ನಡೆಸುತ್ತಿದ್ದು, ಲೆಬನಾನ್ & ಇರಾನ್ ಸೇರಿದಂತೆ ಗಾಜಾ ಪಟ್ಟಿ & ಸಿರಿಯಾ ಮೇಲೂ ಭೀಕರ ದಾಳಿ ನಡೆಯುತ್ತಿದೆ. ಹೀಗೆ ನಡೆಯುತ್ತಿರುವ ದಾಳಿಯ ಕಾರಣಕ್ಕೆ ಇದೀಗ ಇಡೀ ಮಧ್ಯಪ್ರಾಚ್ಯ ಸ್ಮಶಾನದಂತೆ ಕಾಣುತ್ತಿದೆ. ಇಂತಹ ಸಮಯದಲ್ಲೇ ಹಿಜ್ಬುಲ್ಲಾಗೆ ಮತ್ತೊಬ್ಬ ಮುಖ್ಯಸ್ಥನ ಆಯ್ಕೆಯಾಗಿದ್ದು, ಇಸ್ರೇಲ್ ಸೇನೆ ಹೊಸ ಮುಖ್ಯಸ್ಥನ ಹೆಣ ಬೀಳಿಸಲು ರೊಚ್ಚಿಗೆದ್ದಿದೆಯಂತೆ!












Click it and Unblock the Notifications