US Elections 2024: ಟ್ರಂಪ್ ಆಯ್ಕೆ ಬಳಿಕ ವಲಸಿಗರಲ್ಲಿ ಶುರುವಾಯ್ತಾ ನಡುಕ?
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಹಲವು ಬದಲಾವಣೆ ಶುರುವಾಗಿವೆ. ಅದರಲ್ಲೂ ಅಮೆರಿಕದ ನೆಲದಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ಲಕ್ಷ, ಲಕ್ಷ ಜನರಿಗೆ ಭಯ ಶುರುವಾಗಿದೆ. 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಆರಂಭಕ್ಕೂ ಮೊದಲು ಡೊನಾಲ್ಡ್ ಟ್ರಂಪ್ ಒಂದು ಭರವಸೆ ನೀಡಿದ್ದರು. ಇದೀಗ ಅದೇ ಭರವಸೆ ಅಕ್ರಮ ವಲಸಿಗರ ಎದೆ ನಡುಗುವಂತೆ ಮಾಡಿದೆ. ಹಾಗಿದ್ರೆ ಡೊನಾಲ್ಡ್ ಟ್ರಂಪ್ ಅವರು ಭರವಸೆಯನ್ನು ನೀಡುವುದಕ್ಕೂ, ಅಕ್ರಮ ವಲಸಿಗರು ಭಯಪಟ್ಟಿದ್ದಕ್ಕೂ ಸಂಬಂಧ ಏನು? ಬನ್ನಿ ತಿಳಿಯುವ.
ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮೊದಲು ವಲಸಿಗರ ವಿರುದ್ಧ ಭಾರಿ ದೊಡ್ಡ ಯುದ್ಧವನ್ನೇ ಸಾರಿದ್ದರು. ಹಾಗೇ ಈ ಮೂಲಕ ಬಿಳಿಯರ ಮತಗಳನ್ನ ಒಗ್ಗೂಡಿಸಿ, ಚುನಾವಣೆ ಗೆಲ್ಲುವ ತಂತ್ರ ಡೊನಾಲ್ಡ್ ಟ್ರಂಪ್ ಅವರದ್ದು ಎನ್ನುವ ವಿಶ್ಲೇಷಣೆ ಕೂಡ ಆಗ ಮಾಡಲಾಗಿತ್ತು. ಆದರೆ ಇದೀಗ ಅದೆಲ್ಲವನ್ನೂ ಮೀರಿ ಡೊನಾಲ್ಡ್ ಟ್ರಂಪ್ ಅವರನ್ನ ಕಂಡು ಅಕ್ರಮ ವಲಸಿಗರು ಭಯಪಡುವ ವಾತಾವರಣ ನಿರ್ಮಾಣ ಆಗಿದೆ!

ಅಮೆರಿಕ ಬಿಟ್ಟು ಓಡಿ ಹೋಗಲು...
ಹೌದು, ಅಮೆರಿಕದಲ್ಲಿ ಲಕ್ಷಾಂತರ ಅಕ್ರಮ ವಲಸಿಗರು ಬಂದು ನೆಲೆಸಿದ್ದಾರೆ. ಇವರ ಬಳಿ, ಸೂಕ್ತ ದಾಖಲೆಗಳು ಇಲ್ಲ. ಹೀಗಾಗಿ ಅವರನ್ನು ಇದೀಗ ನೇರವಾಗಿ ಅಮೆರಿಕದ ನೆಲದಿಂದಲೇ ಹೊರಗೆ ದಬ್ಬುವ ಚಿಂತನೆ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ಚುನಾವಣೆಗೆ ಮೊದಲು ಮಾತು ಕೊಟ್ಟಂತೆ, ಅಕ್ರಮ ವಲಸಿಗರನ್ನು ಅಮೆರಿಕದಿಂದ ಹೊರಗೆ ಹಾಕುವ ಪ್ರಕ್ರಿಯೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಜನವರಿ ನಂತರ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷೀಯ ಅಧಿಕಾರ ವಹಿಸಿಕೊಳ್ಳಲಿದ್ದು, ಆ ನಂತರ ದೊಡ್ಡ ಗಲಾಟೆಗಳು ಶುರುವಾಗುವ ಭಯ ಆವರಿಸಿದೆ. ಈ ಸಮಯದಲ್ಲೇ...
ಎಸ್ಕೇಪ್ ಆಗಲು ಅಕ್ರಮ ವಲಸಿಗರ ಸಿದ್ಧತೆ?
ಅಮೆರಿಕ ಒಂದು ವಲಸಿಗರ ದೇಶ, ಇದೀಗ ಅಮೆರಿಕದಲ್ಲಿ ಇರುವ ಬಿಳಿಯರು ಕೂಡ ಅಲ್ಲಿಗೆ ವಲಸೆ ಹೋಗಿ ನೆಲೆಸಿದ್ದವರು ಎಂಬ ವಿಶ್ಲೇಷಣೆಯನ್ನು ಜಗತ್ತಿನಾದ್ಯಂತ ಮಾಡಲಾಗುತ್ತದೆ. ಹೀಗಿದ್ದರೂ ಅಮೆರಿಕದಲ್ಲಿ ಇರುವವರು ಬೇರೆಯವರನ್ನು ವಲಸಿಗರು ಎನ್ನುತ್ತಾ, ಅವರನ್ನು ಹೊರಗೆ ಕಳಿಸುವ ಷಡ್ಯಂತ್ರ ಮಾಡುತ್ತಿರುವ ಆರೋಪ ಇದೆ. ಇಷ್ಟೆಲ್ಲದರ ನಡುವೆ ಅಕ್ರಮ ಮಾರ್ಗದ ಮೂಲಕ ಅಮೆರಿಕದ ನೆಲಕ್ಕೆ ಬಂದ ವಲಸಿಗರ ಬಳಿ ಸೂಕ್ತ ದಾಖಲೆಗಳು ಇಲ್ಲ, ಹೀಗಾಗಿ ಅವರೆಲ್ಲಾ ಈಗ ದೇಶ ಬಿಟ್ಟು ಹೊರಗೆ ಹೋಗಬೇಕಿದೆ.
ಡೊನಾಲ್ಡ್ ಟ್ರಂಪ್ ಸರ್ಕಾರವು ಅಮೆರಿಕದ ಆಡಳಿತವನ್ನು ಕೈಗೆ ವಹಿಸಿಕೊಳ್ಳುವ ಮೊದಲು ಈ ಕೆಲಸ ಮಾಡಬೇಕಿದೆ. ಇಲ್ಲವಾದರೆ ಸಮಸ್ಯೆ ಗ್ಯಾರಂಟಿ ಎಂಬ ಮಾತು ಕೇಳಿಬಂದಿದೆ. ಹೀಗೆ, ವಲಸಿಗರು ಈಗ ಅಮೆರಿಕ ಬಿಟ್ಟು ಕೆನಡಾ, ಆಸ್ಟ್ರೇಲಿಯಾ ಸೇರಿದಂತೆ ಬ್ರಿಟನ್ & ನ್ಯೂಜಿಲೆಂಡ್ ದೇಶಗಳಿಗೆ ಪಲಾಯನ ಮಾಡಲು ಹೊಂಚು ಹಾಕಿದ್ದಾರೆ ಎಂಬ ಆರೋಪ ಮಾಡಲಾಗಿದ್ದು, ಗೂಗಲ್‌ನಲ್ಲಿ ಬೇರೆ ದೇಶಗಳಿಗೆ ಹೋಗುವುದು ಹೇಗೆ? ಎಂಬ ಬಗ್ಗೆ ಉತ್ತರ ಹುಡುಕುವ ಜನರ ಹೆಚ್ಚಾಗಿದೆಯಂತೆ.












Click it and Unblock the Notifications