ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಪಾಲಿಗೆ ಆತಂಕ ಕೊರೊನಾ ವೈರಸ್ ಹೊರತು ಜನರಲ್ಲ: ವಿಶ್ವಸಂಸ್ಥೆ ಅಧ್ಯಕ್ಷ

|
Google Oneindia Kannada News

ಕೊರೊನಾ ವೈರಾಣು ಹಬ್ಬುತ್ತಿರುವ ಬಗ್ಗೆ ಚೀನಾದಲ್ಲಿ ಮಾತನಾಡಿದವರು ಯಾರು ಅಂತಲೂ ನೋಡದೆ ವೈದ್ಯರು ಸೇರಿದಂತೆ ಅನೇಕರನ್ನು ಅಲ್ಲಿನ ಪೊಲೀಸರು ಪ್ರಶ್ನಿಸಿದ್ದಾರೆ ಮತ್ತು ಯಾವುದೇ ಮುಲಾಜಿಲ್ಲದೆ ವಶಕ್ಕೂ ಪಡೆದಿದ್ದಾರೆ. ಇನ್ನು ಕಾಂಬೋಡಿಯಾದಲ್ಲಿ ಬಹಳ ಸಮಯದಿಂದ ನಾಯಕರಾಗಿರುವ ಹುನ್ ಸೆನ್, ಕೊರೊನಾ ವೈರಾಣು ಸಮಯವನ್ನೇ ಬಳಸಿಕೊಂಡು ಇನ್ನಷ್ಟು ಅಧಿಕಾರ ಅಂಗೈಯಲ್ಲಿಟ್ಟುಕೊಳ್ಳಲು, ವಿರೋಧಿಗಳನ್ನು ಹಣಿಯಲು ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಥಾಯ್ಲೆಂಡ್ ಸರ್ಕಾರ, ಸರ್ಕಾರವನ್ನು ಮತ್ತು ರಾಜಾಡಳಿತವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವಿಮರ್ಶಿಸುವವರನ್ನು ಶಿಕ್ಷೆಗೆ ಗುರಿಪಡಿಸುತ್ತಿದೆ. ಒಟ್ಟಿನಲ್ಲಿ ಯಾವುದೇ ಬಗೆಯ ಭಿನ್ನ ಧ್ವನಿಯನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ವರದಿಯನ್ನು ಬಿಡುಗಡೆ ಮಾಡಿದೆ.

ಕೊರೊನಾ ಲಾಕ್ ಡೌನ್ ನಂತರ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮೊದಲ ಭಾಷಣಕೊರೊನಾ ಲಾಕ್ ಡೌನ್ ನಂತರ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಮೊದಲ ಭಾಷಣ

ಆನ್ ಲೈನ್ ವಿಮರ್ಶಕರಿಗೆ ಕಿರುಕುಳ ನೀಡುತ್ತಾ ಹಾಗೂ ಶಿಕ್ಷೆ ವಿಧಿಸುವ ಮೂಲಕ ಭಿನ್ನ ಧ್ವನಿ ಹಾಗೂ ಆಲೋಚನೆಗಳನ್ನು ಹೊರಹಾಕದಿರುವಂತೆ ಭಯದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ನ ಹಿರಿಯ ಸಂಶೋಧನಾ ನಿರ್ದೇಶಕರಾದ ಕ್ಲೇರ್ ಅಲ್ಗರ್ ಹೇಳಿದ್ದಾರೆ.

Coronavirus

ಪ್ರಶ್ನೆ ಮಾಡುವವರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡುತ್ತಿರುವುದು ನಾಚಿಕೆಗೇಡು. ಸರ್ಕಾರಗಳು ಆನ್ ಲೈನ್ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುತ್ತಿವೆ. ಆಕ್ರೋಶ ಹೆಚ್ಚಾಗುತ್ತಲೇ ಇದೆ. ಆದರೆ ಅಧಿಕಾರಿಗಳು ಕೊರೊನಾ ವೈರಾಣುವನ್ನೇ ತಮ್ಮ ಗುರಾಣಿಯಾಗಿ ಬಳಸಿಕೊಂಡು, ಟೀಕೆಗಳನ್ನು ಹೊಸಕಿಹಾಕಲು ಹಾಗೂ ಕಾನೂನುಬಾಹಿರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಬಂದಿದೆ.

ಅದೇ ರೀತಿ ಯುರೋಪ್ ನಲ್ಲಿ ಪೊಲೀಸರು ಲಾಕ್ ಡೌನ್ ಜಾರಿಗೆ ತರಲು ಅಧಿಕಾರ ದುರುಪಯೋಗ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ನಾಗರಿಕರ ಸ್ವಾತಂತ್ರ್ಯ ಹಾಗೂ ಮಾಧ್ಯಮ ಸ್ವಾತಂತ್ರ್ಯ "ಗಂಭೀರ ಸ್ಥಿತಿಯಲ್ಲಿದೆ". ಸರ್ಕಾರಗಳು ಪಾರದರ್ಶಕವಾಗಿರಬೇಕು, ಸ್ಪಂದನೆ ಇರಬೇಕು ಹಾಗೂ ಅವುಗಳಿಗೆ ಉತ್ತರದಾಯಿತ್ವ ಇರಬೇಕು ಎಂದು ವಿಶ್ವಸಂಸ್ಥೆಯ ಅಧ್ಯಕ್ಷ ಗುಟೆರೆಸ್ ಹೇಳಿದ್ದಾರೆ. ತಕ್ಷಣದ ಆತಂಕಗಳಿಗೆ ಸ್ಪಂದಿಸುವಾಗ ಕಾನೂನಿನ ನಿಯಮಗಳು ಹಾಗೂ ಮಾನವ ಹಕ್ಕುಗಳು ಎರಡರ ರಕ್ಷಣೆಯೂ ಆಗಬೇಕು ಎಂದು ಸೇರಿಸಿದ್ದಾರೆ.

ಕೊರೊನಾ ವೈರಾಣು ಹರಡದಂತೆ ತಡೆಯಲು ವಿಶ್ವಾದ್ಯಂತ ಕೋಟ್ಯಂತರ ಜನರನ್ನು ಮನೆ ಬಿಟ್ಟು ಬಾರದಂತೆ ಸೂಚಿಸಲಾಗಿದ್ದು, ವ್ಯಾಪಾರ- ವ್ಯವಹಾರಗಳು ನಿಂತುಹೋಗಿವೆ. 1930ರ ಮಹಾ ಆರ್ಥಿಕ ಕುಸಿತದ ನಂತರ ಈಗ ವಿಶ್ವವು ಭೀಕರ ಆರ್ಥಿಕ ಸಂಕಷ್ಟಕ್ಕೆ ಈಡಾಗಲಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದೆ.

ವಿಶ್ವಸಂಸ್ಥೆಯ ವರದಿ ತಿಳಿಸಿರುವಂತೆ, ಒಂದು ವೇಳೆ ಕೊರೊನಾ ವೈರಾಣುವನ್ನು ನಿಯಂತ್ರಿಸದಿದ್ದಲ್ಲಿ ಉದ್ವಿಗ್ನತೆ ಹೆಚ್ಚಾಗಲಿದೆ ಹಾಗೂ ನಾಗರಿಕ ದಂಗೆಗೆ ಕೂಡ ಕಾರಣವಾಗಲಿದೆ. ಆ ನಂತರ ಭಾರೀ ಮಟ್ಟದ ಭದ್ರತೆ ಅಗತ್ಯ ಕಂಡುಬರಲಿದೆ.

"ಒಟ್ಟಾರೆಯಾಗಿ ನಾವೀಗ ಏನು ಮಾಡಬೇಕು ಅಂದರೆ, ನಮ್ಮ ಪಾಲಿಗೆ ಆತಂಕ ವೈರಸ್ ಹೊರತು ಜನರಲ್ಲ ಎಂಬುದನ್ನು ಯಾವತ್ತಿಗೂ ಮರೆಯಬಾರದು" ಎಂದು ಗುಟೆರೆಸ್ ಹೇಳಿದ್ದಾರೆ.

English summary
"In all we do, let's never forget: The threat is the virus, not people," UN president Guterres said about Corona current situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X