ಚಿತ್ರ ಸುದ್ದಿ: ತಮಿಳುನಾಡು ರಾಜಕೀಯ ಗುಂಗಲ್ಲಿ ಗಮನಿಸದ 5 ಸುದ್ದಿ

Posted By:
Subscribe to Oneindia Kannada
ಇತ್ತ, ಮಂಗಳವಾರ ಬೆಳಗ್ಗೆಯಿಂದ ಇಡೀ ಭಾರತವೇ ತಮಿಳುನಾಡು ರಾಜಕೀಯದತ್ತ ದೃಷ್ಟಿ ನೆಟ್ಟಿದೆ. ಫೆಬ್ರವರಿ 14 ಪ್ರೇಮಿಗಳು ಪ್ರೇಮದಿನವನ್ನು ಆಚರಿಸುತ್ತಿದ್ದರೆ, ಉಳಿದವರು ತಮಿಳುನಾಡು ರಾಜಕಾರಣಿ ಶಶಿಕಲಾ ನಟರಾಜನ್ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಚರ್ಚಿಸಿದರು.

ತಮಿಳುನಾಡು ರಾಜಕೀಯದ ಮಟ್ಟಿಗಂತೂ ಅದೊಂದು ಮಹತ್ವದ ತೀರ್ಪು ಆಗಿತ್ತು. ಈ ಎಲ್ಲಾ ಕಾರಣಗಳಿಂದಾಗಿ, ಆ ಸುದ್ದಿಗೆ ವಿಶೇಷ ಮಹತ್ವ ಸಿಕ್ಕಿತು.

ಇದರ ಗುಂಗಿನಲ್ಲಿದ್ದ ಜನರಿಗೆ ದೂರದ ತೈವಾನ್ ದೇಶದ ತೈಪೇನಲ್ಲಿ ನಡೆದ ಭೀಕರ ಬಸ್ ದುರಂತ ಗಮನಕ್ಕೆ ಬಾರಲಿಲ್ಲ. ಪ್ರವಾಸಿಗರು ತುಂಬಿದ್ದ ಆ ಬಸ್ ದುರಂತದಲ್ಲಿ 35ಕ್ಕೂ ಅಧಿಕ ಜನರು ಅಸುನೀಗಿದ್ದಾರೆ.

ಇನ್ನು, ಭಾರತದಲ್ಲಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದ ಹೈದರಾಬಾದ್ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ದಲಿತನಲ್ಲ ಎಂದು ಆಂಧ್ರ ಪ್ರದೇಶ ಸರ್ಕಾರ ಹೇಳಿದೆ.

ಪ್ರವಾಸಿಗರ ಸಾವು

ಪ್ರವಾಸಿಗರ ಸಾವು

ತೈವಾನ್ ನ ತೈಪೇ ನಗರದಲ್ಲಿ ಮಂಗಳವಾರ ಸಂಭವಿಸಿದ ಬಸ್ ದುರಂತವೊಂದರಲ್ಲಿ ಸುಮಾರು 35ಕ್ಕೂ ಹೆಚ್ಚು ಪ್ರಯಾಣಿಕರು ಅಸುನೀಗಿದ್ದಾರೆ. ಇವರೆಲ್ಲರೂ ಪ್ರವಾಸಕ್ಕಾಗಿ ಇತರೆಡೆಗಳಿಂದ ನಗರಕ್ಕೆ ಆಗಮಿಸಿದ್ದರೆಂದು ಹೇಳಲಾಗಿದೆ.

ಫ್ಯಾಷನ್ ನೋಡಲು ಬಂದರು

ಫ್ಯಾಷನ್ ನೋಡಲು ಬಂದರು

ನ್ಯೂಯಾರ್ಕ್ ನಲ್ಲಿ ನಡೆಯುತ್ತಿರುವ ಫ್ಯಾಷನ್ ವೀಕ್ ಗಾಗಿ ಆಗಮಿಸಿದ ಜನಪ್ರಿಯ ಮಾಡೆಲ್ ಹಾಗೂ ನಟಿ ಮಡೋನಾ. ಫ್ಯಾಷನ್ ವೀಕ್ ಕಾರ್ಯಕ್ರಮದ ಅಂಗವಾಗಿ ನಡೆದ ಫಿಲಿಪ್ ಪ್ಲೈನ್ ಎಂಬ ಕಾರ್ಯಕ್ರಮ ವೀಕ್ಷಿಸಿದರು.

ಜಾಕಿರ್ ಜಾದೂ

ಜಾಕಿರ್ ಜಾದೂ

ನವದೆಹಲಿಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಭಾರತದ ಜನಪ್ರಿಯ ತಬಲಾ ವಾದಕ ಜಾಕಿರ್ ಹುಸೇನ್ ಎಲ್ಲರ ಮನತಣಿಸಿದರು. ಉಸ್ತಾದ್ ವಿಲಾಯತ್ ಖಾನ್ ಸಂಗೀತ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿತ್ತು.

ಬಾಂಧ್ಯವಾಭಿವೃದ್ಧಿಗೆ ನಾಂದಿ

ಬಾಂಧ್ಯವಾಭಿವೃದ್ಧಿಗೆ ನಾಂದಿ

ವಾಷಿಂಗ್ಟನ್ ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ತಮ್ಮ ಅಧಿಕೃತ ನಿವಾಸವಾದ ವೈಟ್ ಹೌಸ್ ನಲ್ಲಿ ಕೆನಡಾದ ಅಧ್ಯಕ್ಷ ಜಸ್ಟಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಅಧ್ಯಕ್ಷೀಯ ಪಟ್ಟದ ಮೇಲೆ ಮರಿನ್ ಕಣ್ಣು

ಅಧ್ಯಕ್ಷೀಯ ಪಟ್ಟದ ಮೇಲೆ ಮರಿನ್ ಕಣ್ಣು

ಏಕ ನಗರ ದೇಶವಾದ ನೈಸ್ ನಲ್ಲಿ ಅಧ್ಯಕ್ಷೀಯ ಚುನಾವಣೆ ಪ್ರಚಾರ ಬಿರುಸಿನಿಂದ ನಡೆಯುತ್ತಿದ್ದು, ಫಾರ್ ರೈಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮರಿನ್ ಅವರು ಮತದಾರರತ್ತ ಕೈ ಬೀಸಿದ್ದು ಹೀಗೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As we immersed in political development in Tamilnadu on Tuesday, some of the other news may have been escaped from our attention. Here, are the few among them.
Please Wait while comments are loading...