• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆತಂಕ ಸೃಷ್ಟಿಸಿದ್ದ ಓಝೋನ್‌ನಲ್ಲಿದ್ದ ದೊಡ್ಡ ರಂಧ್ರ ಕೊನೆಗೂ ಮುಚ್ಚಿತು

|

ಜಿನಿವಾ, ಮೇ 2:ಓಝೋನ್ ಪದರದಲ್ಲಿ 2011ರಿಂದ ಈಚೆಗೆ ಉಂಟಾಗಿದ್ದ ರಂಧ್ರ ಈಗ ಮುಚ್ಚಿದೆ ಎಂದು ವಿಶ್ವ ಸಂಸ್ಥೆಯ ವಿಶ್ವ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭೂಮಿಯ ಉತ್ತರ ಧ್ರುವದಲ್ಲಿರುವ ಆರ್ಕ್ಟಿಕ್ ಪ್ರದೇಶದಲ್ಲಿ ಓಝೋನ್ ಪದರದಲ್ಲಿ ಬೃಹತ್ ರಂಧ್ರ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದರು. ಆದರೆ ಓಝೋನ್ ಪದರದಲ್ಲಾದ ಈ ಬೆಳವಣಿಗೆಗೆ ಯಾವುದೇ ಮಾನವ ಚಟುವಟಿಕೆ ಅಥೌಆ ಕೊರೊನಾ ಲಾಕ್‌ಡೌನ್‌ನಿಂದಾಗಿ ಕಡಿಮೆಯಾಗಿರುವ ಮಾಲಿನ್ಯ ಇದಕ್ಕೆ ಕಾರಣವಲ್ಲ ಎಂದು ಹೇಳಲಾಗಿದೆ.

ಬೆಂಗಳೂರಲ್ಲಿ ಮಾರ್ಚ್‌ನಂತೆ ಏಪ್ರಿಲ್‌ನಲ್ಲೂ ಶೇ.50ರಷ್ಟು ತಗ್ಗಿದ ವಾಯುಮಾಲಿನ್ಯ

ಮಾರ್ಚ್‌ನಲ್ಲಿ ಆರ್ಕ್ಟಿಕ್ ಪ್ರದೇದಲ್ಲಿ ಧ್ರುವ ಸುಳಿ ಎಂದು ಕರೆಯಲ್ಪಟುವ ತಣ್ಣನೆಯ ಗಾಳಿಯಿಂದ ತುಂಬಿದ ಕಡಿಮೆ ಒತ್ತಡದ ವಾತಾವರಣ ಉಂಟಾಗಿತ್ತು. ಇದರಿಂದಾಗಿ ಎತ್ತರದ ಮೋಡಗಳ ರಚನೆಯಾಗಿದ್ದರಿಂದ ಓಝೋನ್‌ನಲ್ಲಿನ ರಂಧ್ರ ದುರಸ್ತಿಯಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಈಗ ಆರ್ಕ್ಟಿಕ್ ಪ್ರದೇಶದಲ್ಲಿ ಉಂಟಾಗಿರುವ ರಂಧ್ರವು ಅಂಟಾರ್ಕ್ಟಿಕಾದಲ್ಲಿ ಉಂಟಾಗಿದ್ದ ರಂಧ್ರಕ್ಕಿತ ಸಾಕಷ್ಟು ದೊಡ್ಡದಿತ್ತು. ಇದು ಮಾಂಟ್ರಿಯಲ್ ಒಪ್ಪಂದವನ್ನು ಗಂಭೀರವಾಗಿ ಪರಿಗಣಿಸದ ಫಲ. ನಾವೆಲ್ಲರೂ ಒಟ್ಟಿಗೆ ಸೇರಿ ವಾತಾವರಣದಲ್ಲಿ ಕ್ಲೋರಿನ್ ಮತ್ತು ಬ್ರೋಮೈನ್ ಪ್ರಮಾಣ ಹೆಚ್ಚಾಗದಂತೆ ತಡೆಯಬೇಕಾಗಿದೆ ಎಂದು ಪೀಚ್ ತಿಳಿಸಿದ್ದಾರೆ.

ಓಝೋನ್ ಪದರರಿಂದ ಪ್ರಯೋಜನವೇನು?

ಓಝೋನ್ ಪದರರಿಂದ ಪ್ರಯೋಜನವೇನು?

ಓಝೋನ್ ಪದರ ಸೂರ್ಯನಿಂದ ಬರುವ ನೇರಳಾತೀತ ಕಿರಣಗಳು ಭೂಮಿಗೆ ತಲುಪದಂತೆ ತಡೆದು ಭೂಮಿಯ ಮೇಲೆ ಜೀವರಾಶಿಗೆ ಯಾವುದೇ ತೊಂದರೆಯಾಗದಂತೆ ಕಾಪಾಡುತ್ತದೆ. ಆದರೆ ಇತ್ತೀಚೆಗೆ ವಾಯುಮಾಲಿನ್ಯ ಮತ್ತು ಹವಾಮಾನ ವೈಪರೀತ್ಯದಿಂದ ಓಝೋನ್ ಪದರಕ್ಕೆ ಧಕ್ಕೆಯುಂಟಾಗುತ್ತಿದೆ. ಆದರೆ ಪ್ರಸ್ತುತ ಆರ್ಕ್ಟಿಕ್ ಪ್ರದೇಶದಲ್ಲಿ ದೊಡ್ಡ ರಂಧ್ರ ಉಂಟಾಗಿದೆ.

ಇದು ವಾಯುಮಾಲಿನ್ಯದಿಂದ ಉಂಟಾದ ರಂಧ್ರವಲ್ಲ

ಇದು ವಾಯುಮಾಲಿನ್ಯದಿಂದ ಉಂಟಾದ ರಂಧ್ರವಲ್ಲ

ಇದು ವಾಯು ಮಾಲಿನ್ಯದಿಂದ ಉಂಟಾಗಿರುವ ರಂಧ್ರವಲ್ಲ. ಆರ್ಕ್ಟಿಕ್ ಪ್ರದೇಶದಲ್ಲಿ ಕಂಡು ಬಂದಿರುವ ವಿಪರೀತ ಚಳಿಯಿಂದಾಗಿ ಓಝೋನ್ ಪದರದಲ್ಲಿ ರಂಧ್ರ ಕಂಡು ಬಂದಿದೆ. ಇದರಿಂದ ಮನುಷ್ಯರಿಗೆ ಯಾವುದೇ ತೊಂದರೆಯಿಲ್ಲ. ಆದರೆ ರಂಧ್ರ ದೊಡ್ಡದಾಗಿ ದಕ್ಷಿಣ ಗ್ರೀನ್ ಲ್ಯಾಂಡ್ ಮತ್ತು ಮನುಷ್ಯರು ವಾಸಿಸುವ ಪ್ರದೇಶಗಳಿಗೆ ರಂಧ್ರ ತಲುಪಿದರೆ ಮನುಷ್ಯರಿಗೆ ಸನ್ ಬರ್ನ್ ಉಂಟಾಗಬಹುದು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಲವೇ ವಾರಗಳಲ್ಲಿ ರಂಧ್ರ ಮುಚ್ಚಿಕೊಂಡು ಮೊದಲಿಗೆ ಸ್ಥಿತಿಗೆ ಬರಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಸಾಮಾನ್ಯಕ್ಕಿಂತ ಹೆಚ್ಚಿನ ಸುಳಿಗಾಳಿ

ಸಾಮಾನ್ಯಕ್ಕಿಂತ ಹೆಚ್ಚಿನ ಸುಳಿಗಾಳಿ

ಕೋಪರ್ನಿಕಸ್ ವಾತಾವರಣ ಕೇಂದ್ರ ಆರ್ಕ್ಟಿಕ್ ಪ್ರದೇಶದಲ್ಲಿ ಉಂಟಾಗಿರುವ ಓಝೋನ್ ರಂಧ್ರವನ್ನು ಅಭ್ಯಸಿಸುತ್ತಿದೆ. ನಾವು ವಾತಾವರಣದ ಈ ವೈಚಿತ್ರದ ಕುರಿತು ಅಧ್ಯಯನ ನಡೆಸುತ್ತಿದ್ದೇವೆ. ಪ್ರಸ್ತುತ ಸನ್ನಿವೇಶ ಆರ್ಕ್ಟಿಕ್ ಪ್ರದೇಶದಲ್ಲಿ ಚಳಿಯ ವಾತಾವರಣ ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ಸುಳಿಗಾಳಿಯನ್ನು ಸೃಷ್ಟಿಸಿದೆ. ಇದು ಧ್ರುವ ಪ್ರದೇಶ ವಾಯುಮಂಡಳದ ಮೋಡಗಳನ್ನು ಸೃಷ್ಟಿಸಿದೆ. ಈ ಮೋಡಗಳು ಓಝೋನ್ ಪದರಕ್ಕೆ ಹಾನಿಯುಂಟುಮಾಡಿವೆ. ಕೊರೊನಾವೈರಸ್ ನಿಂದಾಗಿ ವಾಯುಮಾಲಿನ್ಯ ಕಡಿಮೆಯಾಗಿರುವುದಕ್ಕೂ ಮತ್ತು ಓಝೋನ್ ಪದರಕ್ಕೆ ಹಾನಿಯಾಗಿರುವುದಕ್ಕೂ ಸಂಬಂಧವಿಲ್ಲ ಎಂದು ಕೋಪರ್ನಿಕಸ್ ವಾತಾವರಣ ಕೇಂದ್ರದ ನಿರ್ದೇಶಕ ವಿನ್ಸೆಂಟ್ ಹೆನ್ರಿ ಪೀಚ್ ತಿಳಿಸಿದ್ದಾರೆ.

35 ವರ್ಷಗಳ ಹಿಂದೆ ರಂಧ್ರ ಕಾಣಿಸಿಕೊಂಡಿತ್ತು

35 ವರ್ಷಗಳ ಹಿಂದೆ ರಂಧ್ರ ಕಾಣಿಸಿಕೊಂಡಿತ್ತು

ದಕ್ಷಿಣ ಧ್ರುವದಲ್ಲಿರುವ ಅಂಟಾರ್ಕ್ಟಿಕಾದಲ್ಲಿ 35 ವರ್ಷಗಳ ಹಿಂದೆ ಓಝೋನ್ ಪದರದಲ್ಲಿ ರಂಧ್ರ ಕಂಡು ಬಂದಿತ್ತು. ಇದು ಜಗತ್ತಿನಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿತ್ತು. ಇದರ ಪರಿಣಾಮವಾಗಿ 1987ರಲ್ಲಿ ಓಝೋನ್ ಪದರಕ್ಕೆ ಹಾನಿಯುಂಟು ಮಾಡುವ ಮಾಲಿನ್ಯಕಾರಕಗಳು ವಾತಾವರಣಕ್ಕೆ ಸೇರದಂತೆ ತಡೆಯಲು ಮಾಂಟ್ರಿಯಲ್ ಒಪ್ಪಂದಕ್ಕೆ 46 ರಾಷ್ಟ್ರಗಳು ಸಹಿ ಹಾಕಿದ್ದವು. ಆದರೂ ಹಲವು ರಾಷ್ಟ್ರಗಳು ಓಝೋನ್ ಪದರಕ್ಕೆ ಹಾನಿಯುಂಟು ಮಾಡುವ ಮಾಲಿನ್ಯಕಾರಕಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುವುದನ್ನು ಮುಂದುವರೆಸಿವೆ.

English summary
Just as suddenly as it first formed, a record-breaking ozone hole has healed. The largest ozone hole to ever open up over the Arctic is now closed, after first opening up earlier this spring.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X