ಭಗವದ್ಗೀತೆ ಮೇಲೆ ಪ್ರಮಾಣ ಮಾಡಿದ ಆಸ್ಟ್ರೇಲಿಯಾದ ಭಾರತೀಯ ಸಂಸದ!
'ಭಗವದ್ಗೀತೆ' ಒಂದು ಧಾರ್ಮಿಕ ಗ್ರಂಥ ಎನ್ನುವುದಕ್ಕಿಂತ ಹೆಚ್ಚಾಗಿ, ಅದು ಮಾನವನಿಗೆ ಧರ್ಮಯುತವಾಗಿ ಬದುಕುವುದನ್ನು ಕಲಿಸುತ್ತದೆ. ಈ ಮಾತನ್ನು ನಾವು ಕೇಳಿರುತ್ತೀವಿ. ಈ ಕಾರಣಕ್ಕೆ 'ಭಗವದ್ಗೀತೆ' ಇಡೀ ಜಗತ್ತಿನಾದ್ಯಂತ ಶ್ರೇಷ್ಠ ಧಾರ್ಮಿಕ ಗ್ರಂಥ ಎಂದು ಪರಿಗಣಿಸಿ, ಗೌರವಿಸಲಾಗುತ್ತದೆ. ಆದರೆ ಇದೀಗ ಭಾರತ ಮೂಲದ ಸಂಸದ ಆಸ್ಟ್ರೇಲಿಯಾ ನೆಲದಲ್ಲೂ 'ಭಗವದ್ಗೀತೆ'ಗೆ ಬಹುದೊಡ್ಡ ಗೌರವ ಸಲ್ಲಿಸಿದ್ದಾರೆ.
ಅಂದಹಾಗೆ ಬ್ಯಾರಿಸ್ಟರ್ ವರುಣ್ ಘೋಷ್ ಅವರು ಇಂದು ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೀಗೆ 'ಭಗವದ್ಗೀತೆ'ಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಭಾರತ ಮೂಲದ ಸಂಸದ ಎಂಬ ದಾಖಲೆಯನ್ನು ಆಸ್ಟ್ರೇಲಿಯಾದಲ್ಲಿ ನಿರ್ಮಾಣ ಮಾಡಿದ್ದಾರೆ. ಈ ವಿಚಾರ ಈಗ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಹಾಗೇ 'ಭಗವದ್ಗೀತೆ' ಮೇಲೆ ಪ್ರಮಾಣವನ್ನು ಸ್ವೀಕಾರ ಮಾಡಿದ ವರುಣ್ ಘೋಷ್ ಅವರ ಬಗ್ಗೆ ಹೆಮ್ಮೆಯ ಮಾತು ಕೂಡ ಕೇಳಿಬಂದಿವೆ. ಹಾಗೇ ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದೆ.

ಭಾರತ ಮೂಲದ ವ್ಯಕ್ತಿಗೆ ಗೌರವ
ವರುಣ್ ಘೋಷ್ ಅವರನ್ನ ಈಗ ಆಸ್ಟ್ರೇಲಿಯಾ ಸಂಸತ್‌ನ ಕೆಳಮನೆ ಹಾಗೂ ಮೇಲ್ಮನೆ ಸೇರಿ ಅತ್ಯುತ್ತಮ ಹುದ್ದೆಗೆ ಆಯ್ಕೆ ಮಾಡಿ ಕಳುಹಿಸಿವೆ. ಈ ಮೂಲಕ ಫೆಡರಲ್ ಸಂಸತ್ತಿನ ಸೆನೆಟ್‌ನಲ್ಲಿ ಆಸ್ಟ್ರೇಲಿಯಾ ಪ್ರತಿನಿಧಿಸಲು ವರುಣ್ ಘೋಷ್ ಆಯ್ಕೆಯಾಗಿ ಹೋಗಿದ್ದಾರೆ. ಇನ್ನು ಪಶ್ಚಿಮ ಆಸ್ಟ್ರೇಲಿಯಾದ ವರುಣ್ ಘೋಷ್ ಹೊಸ ಸೆನೆಟರ್ ಆಗಿ ನೇಮಕ ಆಗಿದ್ದಾರೆ. ವರುಣ್ ಹೀಗೆ, ಆಸ್ಟ್ರೇಲಿಯಾದ ನೂತನ ಸೆನೆಟರ್ ಆಗಿದ್ದಕ್ಕೆ ಅಭಿನಂದನೆಗಳ ಮಹಾಪೂರ ಇದೀಗ ಹರಿದು ಬರುತ್ತಿದೆ. ಹಾಗೇ ಭಾರತ ಮೂಲದ ಹೊಸ ಸೆನೆಟರ್ ವರುಣ್‌ಗೆ ಆಸ್ಟ್ರೇಲಿಯಾ ವಿದೇಶಾಂಗ ಸಚಿವರಾದ ಪೆನ್ನಿ ವಾಂಗ್ ಶುಭ ಕೋರಿದ್ದಾರೆ.
ವರುಣ್ ಘೋಷ್ ರಾಜಕೀಯ ಹಿನ್ನೆಲೆ
ಆಸ್ಟ್ರೇಲಿಯಾದಲ್ಲಿ ವರುಣ್ ಘೋಷ್ ಅವರು ರಾಜಕೀಯ ಆರಂಭ ಮಾಡಿದ್ದು ಹಲವಾರು ವರ್ಷಗಳ ಹಿಂದೆ. ಇನ್ನು ವರುಣ್ ಘೋಷ್ ಅವರ ಪೋಷಕರು ಅಂದ್ರೆ ತಂದೆ & ತಾಯಿಯು ಸುಮಾರು 40 ವರ್ಷಗಳ ಹಿಂದೆ ಆಸ್ಟ್ರೇಲಿಯಾಗೆ ತೆರಳಿದ್ದರು. ವರುಣ್ ಅವರ ಪೋಷಕರು 1980ರ ದಶಕದಲ್ಲಿ ಭಾರತದಿಂದ ಆಸ್ಟ್ರೇಲಿಯಾಗೆ ಸ್ಥಳಾಂತರ ಆಗಿದ್ದರು. ಆಗ ವರುಣ್ ಅವರಿಗೆ ಇನ್ನೂ ಕೇವಲ 17 ವರ್ಷ ವಯಸ್ಸಾಗಿತ್ತು.
ಜಗತ್ತಿನಾದ್ಯಂತ ಸದ್ದು ಮಾಡಿದ ವರುಣ್
ಹೀಗೆ ಹಂತ ಹಂತವಾಗಿ ಆಸ್ಟ್ರೇಲಿಯಾದಲ್ಲಿ ರಾಜಕೀಯದ ಹಿಡಿತ ಪಡೆದ ವರುಣ್ ಘೋಷ್ ಇಂದು ಸಂಸದರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಇದೇ ವೇಳೆ ಅವರು 'ಭಗವದ್ಗೀತೆ' ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಈಗ ಇಡೀ ಜಗತ್ತಿನ ಗಮನ ಸೆಳೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವರುಣ್ ಘೋಷ್ ಅವರಿಗೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಹಾಗೇ ಭಾರತ ಮೂಲದ ವ್ಯಕ್ತಿ ಇಷ್ಟು ದೊಡ್ಡ ಹಂತಕ್ಕೆ ಬೆಳದಿರುವ ಹಿನ್ನೆಲೆ ಭಾರತೀಯರು ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ಒಟ್ನಲ್ಲಿ ಇತ್ತೀಚೆಗಷ್ಟೇ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಆಗಿತ್ತು. ಆಗಲೂ ಹೀಗೆ ಜಗತ್ತಿನಾದ್ಯಂತ ರಾಮನ ಜಪ ಮಾಡಿದ್ದರು ಭಕ್ತರು. ಇದೀಗ ವರುಣ್ ಘೋಷ್ ಅವರು, ಹಿಂದೂಗಳ ಪವಿತ್ರ ಧಾರ್ಮಿಕ ಗ್ರಂಥದ ಮೇಲೆ ಪ್ರಮಾಣ ಸ್ವೀಕಾರ ಮಾಡಿ ಆಸ್ಟ್ರೇಲಿಯಾ ಸಂಸತ್‌ಗೆ ಹೆಜ್ಜೆ ಇಟ್ಟಿದ್ದಾರೆ. ಹಾಗೇ ಅವರಿಗೆ ಮತ್ತಷ್ಟು ದೊಡ್ಡ ಗೆಲುವು ಸಿಗಲಿ ಅಂತಾನೆ ಬೆಂಬಲಿಗರು ಆಶಿಸುತ್ತಿದ್ದಾರೆ.
ಇನ್ನು ವರುಣ್ ಅವರ ಆಯ್ಕೆಗೆ ಇದೀಗ ಆಸ್ಟ್ರೇಲಿಯಾದಲ್ಲು ಕೂಡ ಸಂತಸ ವ್ಯಕ್ತವಾಗಿದೆ. ಆಡಳಿತ ಪಕ್ಷ ಸೇರಿದಂತೆ ವಿಪಕ್ಷದ ನಾಯಕರು ಕೂಡ ವರುಣ್ ಘೋಷ್ ಆಯ್ಕೆಯ ಬಗ್ಗೆ, ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತ ಮೂಲದವರಿಗೆ ಉನ್ನತ ಹುದ್ದೆ ಸಿಕ್ಕಿರುವ ಬಗ್ಗೆ ಭಾರತೀಯರಿಗೂ ಹೆಮ್ಮೆ ಇದೆ.












Click it and Unblock the Notifications