ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಾವಲು ಪಡೆಯ ಉಪ ನಾಯಕಿಯನ್ನೇ ಮದುವೆಯಾದ ಥಾಯ್ಲೆಂಡ್ ರಾಜ

By ಅನಿಲ್ ಆಚಾರ್
|
Google Oneindia Kannada News

ಬ್ಯಾಂಕಾಕ್ (ಥಾಯ್ಲೆಂಡ್), ಮೇ 2: ಅಧಿಕೃತ ಪಟ್ಟಾಬಿಷೇಕಕ್ಕೂ ಕೆಲವೇ ದಿನಗಳ ಮುನ್ನ ಥಾಯ್ಲೆಂಡ್ ನ ರಾಜ ಮಹಾ ವಜಿರಲಾಂಗ್ ಕಾರ್ನ್ ಬುಧವಾರದಂದು ತಮ್ಮ ವೈಯಕ್ತಿಕ ಬೆಂಗಾವಲು ಪಡೆಯ ಉಪ ನಾಯಕಿಯನ್ನು ಮದುವೆಯಾಗಿದ್ದು, ಆಕೆಗೆ ರಾಣಿ ಸುಥಿದಾ ಎಂದು ಹೆಸರು ನೀಡಿದ್ದಾರೆ. ಅರವತ್ತಾರು ವರ್ಶದ ವಜಿರಲಾಂಗ್ ಕಾರ್ನ್ ಅವರನ್ನು ರಾಜ ರಾಮ X ಎಂದು ಕೂಡ ಕರೆಯಲಾಗುತ್ತದೆ.

ಮೂರು ವರ್ಷಗಳ ಹಿಂದೆ ತನ್ನ ತಂದೆ- ರಾಜ ಭುಮಿಬೊಲ್ ಅದುಲ್ಯದೇಜ್ ಸಾವಿನ ನಂತರ ವಜಿರಲಾಂಗ್ ಕಾರ್ನ್ ಸಾಂವಿಧಾನಿಕ ಅಧಿಕಾರ ವಹಿಸಿಕೊಂಡಿದ್ದರು. ದೀರ್ಘ ಕಾಲ ನಡೆದ ಪಟ್ಟಾಬಿಷೇಕ ಕಾರ್ಯಕ್ರಮದಲ್ಲಿ ಬೌದ್ಧ ಹಾಗೂ ಬ್ರಾಹ್ಮಣ ಸಂಪ್ರದಾಯವನ್ನು ಅನುಸರಿಸಲಾಗಿತ್ತು. ಕಳೆದ ಶನಿವಾರ ಆ ಕಾರ್ಯಕ್ರಮ ಹಾಗೂ ಮರುದಿನ ಬ್ಯಾಂಕಾಕ್ ನಲ್ಲಿ ಮೆರವಣಿಗೆ ನಡೆದಿತ್ತು.

ಥಾಯ್ ಏರ್ ವೇಸ್ ನಲ್ಲಿ ವಿಮಾನ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಥಿದಾ ತಿದ್ ಜೈ ಅವರನ್ನು ವಜಿರಲಾಂಗ್ ಕಾರ್ನ್ ತಮ್ಮ ಭದ್ರತಾ ತಂಡದ ಉಪನಾಯಕಿಯಾಗಿ ನೇಮಿಸಿದ್ದರು. ಇವರಿಬ್ಬರ ಮಧ್ಯೆ ಪ್ರಣಯ ಸಂಬಂಧ ಇರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ರಾಜ ಮನೆತನದ ಮೂಲಗಳಿಂದ ಯಾವುದೇ ಸ್ಪಷ್ಟನೆ ಬಂದಿರಲಿಲ್ಲ.

Thailand king marries bodyguards deputy head in surprise wedding ahead of coronation

ವಜಿರಲಾಂಗ್ ಕಾರ್ನ್ ಈ ಹಿಂದೆ ಮೂರು ಬಾರಿ ಮದುವೆಯಾಗಿ, ವಿಚ್ಛೇದನ ಪಡೆದಿದ್ದಾರೆ. ಅವರಿಗೆ ಏಳು ಮಕ್ಕಳಿದ್ದಾರೆ. ತನ್ನ ತಂದೆಯ ಸಾವಿನ ನಂತರ ರಾಜನಾಗಿ ಜವಾಬ್ದಾರಿ ತೆಗೆದುಕೊಂಡರೂ ರಾಜ ಭುಮಿಬೋಲ್ ರ ಸಾವಿನ ಶೋಕಾಚರಣೆ ಪೂರ್ಣಗೊಳ್ಳುವ ತನಕ ವಜಿರಲಾಂಗ್ ಕಾರ್ನ್ ಪಟ್ಟಾಭಿಷೇಕ ಆಗಿರಲಿಲ್ಲ.

English summary
Just days before his official coronation, Thailand's King Maha Vajiralongkorn on Wednesday married the deputy head of his personal guard force and gave her the title Queen Suthida.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X