ಥೈಲ್ಯಾಂಡ್ ರೆಸಾರ್ಟಿನಲ್ಲಿ ಸರಣಿ ಬಾಂಬ್ ಸ್ಫೋಟ

Posted By:
Subscribe to Oneindia Kannada

ಬ್ಯಾಂಕಾಕ್, ಆಗಸ್ಟ್ 12: ಥೈಲ್ಯಾಂಡಿನ ಹುವಾ ಹಿನ್ ರೆಸಾರ್ಟಿನಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ಮಹಿಳೆ ಹಾಗೂ 19 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರ ಪೈಕಿ ವಿದೇಶಿಯರೇ ಹೆಚ್ಚಾಗಿದ್ದಾರೆ.

ಸರಿಯಾಗಿ 50 ಮೀಟರ್ ಅಂತರದಲ್ಲಿದ್ದ ಹೂವಿನ ಕುಂಡದಲ್ಲಿ ಬಾಂಬ್ ಗಳನ್ನು ಅಡಗಿಸಿಡಲಾಗಿತ್ತು. ಮೊಬೈಲ್ ಫೋನ್ ಮೂಲಕ ಆಪರೇಟ್ ಮಾಡಲಾಗಿದೆ. ಅರ್ಧ ಗಂಟೆ ಅವಧಿಯಲ್ಲಿ ಎರಡು ಬಾರಿ ಬಾಂಬ್ ಸ್ಫೋಟಿಸಲಾಗಿದೆ.

Thailand bombs: Hua Hin resort hit by twin blasts

ರೆಸಾರ್ಟಿನಲ್ಲಿರುವ ಆಹಾರ ಮಳಿಗೆಗೆ ತೆರಳುತ್ತಿದ್ದ ಮಹಿಳೆಯೊಬ್ಬರು ಮೊದಲಿಗೆ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಥೈಲ್ಯಾಂಡಿನ ದಕ್ಷಿಣ ಪ್ರಾಂತ್ಯದಲ್ಲಿ ಬಾಂಬ್ ಸ್ಫೋಟ ಸಾಮಾನ್ಯ ಸಂಗತಿಯಾಗಿದ್ದರೂ, ವಿದೇಶಿ ಪ್ರವಾಸಿಗರಿರುವ ರೆಸಾರ್ಟ್ ಮೇಲೆ ದಾಳಿ ಅಪರೂಪವಾಗಿದೆ.

ಥೈಲ್ಯಾಂಡಿನ ದೊರೆ ಭುಮಿಬೊಲ್ ಅದುಯಾಡೆ ಅವರ ನೆಚ್ಚಿನ ಪ್ರದೇಶವಾದ ಥೈಲ್ಯಾಂಡಿನ ಕರಾವಳಿ ಭಾಗದಲ್ಲಿ ಈ ದುರಂತ ಸಂಭವಿಸಿರುವುದು ಸ್ಥಳೀಯರ ಆತಂಕ ಹೆಚ್ಚಿಸಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two bombs have exploded in the Thai resort of Hua Hin, killing one woman and injuring 19 people including foreign tourists as reported by BBC
Please Wait while comments are loading...