ಹಾವಿನೊಂದಿಗೆ ನಿಶ್ಚಿತಾರ್ಥ, ಮದುವೆ, ಸರಸ, ಹನಿಮೂನ್!

Posted By:
Subscribe to Oneindia Kannada

ಥಾಯ್ ಲ್ಯಾಂಡ್, ನವೆಂಬರ್, 12: ಮೂಢ ನಂಬಿಕೆ, ವಿಶ್ವಾಸಗಳು ಮನುಷ್ಯರನ್ನು ಅಜ್ಞಾನಕ್ಕೆ ದೂಡುತ್ತವೆ ಎಂಬುದಕ್ಕೆ ಈ ಸುದ್ದಿ ಒಂದು ಸ್ಪಷ್ಟ ನಿದರ್ಶನ. ಏಕೆಂದರೆ ಈಗಾಗಲೇ ಮರಣಿಸಿರುವ ತನ್ನ ಪ್ರೇಯಸಿ ಹಾವಿನ ರೂಪದಲ್ಲಿ ಬಂದಿದೆ ಎಂಬುದು ಈ ಯುವಕನ ಗಾಢ ವಿಶ್ವಾಸ.

ಈ ಅಂಧ ವಿಶ್ವಾಸದಿಂದ ಹಾವನ್ನೇ ಮದುವೆಯಾಗಿ ಅದರೊಂದಿಗೆ ಹನಿಮೂನ್ ಕೂಡ ಮುಗಿಸಿ ಯಾರ ಮಾತು ಕೇಳದೆ ಅದರೊಂದಿಗೆ ಸಂಸಾರವನ್ನೂ ನಡೆಸುತ್ತಿದ್ದಾನೆ.

ಈ ಯುವಕ ತನ್ನ ಪ್ರೇಯಸಿ ಎಂದು ಭಾವಿಸುತ್ತಿರುವ ಹಾವು ಸಾಮಾನ್ಯದ ಹಾವಲ್ಲ ಹತ್ತು ಅಡಿ ಉದ್ದದ ಭಯಂಕರ ಕಾಳಿಂಗ ಸರ್ಪ. ಅದನ್ನೇ ಮದುವೆಯಾಗಿರುವುದಾಗಿ ಹೇಳುತ್ತಿರುವ ಈ ಯುವಕನ ಹೆಸರು ವೊರ್ರಾನ್.

ತಾನು ಎಲ್ಲಿಗೆ ಹೋದರೂ ಅಲ್ಲಿಗೆ ಈ ಹಾವನ್ನು ಜತೆಗೇ ಕೊಂಡುಯ್ಯುತ್ತಿದ್ದಾನೆ ಈ ಯುವಕ. ಹಾವನ್ನು ಪಕ್ಕದಲ್ಲಿಟ್ಟುಕೊಳ್ಳುವುದು ಮರಣವನ್ನು ಜತೆಗಿಟ್ಟುಕೊಂಡಂತೆಯೇ ಎಂದು ಎಷ್ಟು ಮಂದಿ ಬುದ್ಧಿ ಹೇಳಿದರೂ ಈತ ಮಾತ್ರ ಯಾರ ಮಾತನ್ನೂ ಕೇಳುತ್ತಿಲ್ಲ.

Thai man marries cobra he thinks is his dead girlfriend

ಮರಣಿಸಿರುವ ತನ್ನ ಪ್ರೇಯಸಿಯೇ ಹಾವಿನ ರೂಪದಲ್ಲಿ ಮತ್ತೆ ಪುನರ್ಜನ್ಮ ಎತ್ತಿದೆ ಎಂದು ಬುದ್ಧಿವಾದ ಹೇಳಿದವರಿಗೆಲ್ಲಾ ಸಮಜಾಯಿಷಿ ನೀಡುತ್ತಿದ್ದಾನೆ.

ಇತ್ತೀಚೆಗಷ್ಟೇ ಈ ಹಾವಿನೊಂದಿಗೆ ಸಿಂಗಪೂರ್ ಗೆ ಹೋಗಿ ಹನಿಮೂನ್ ಸಹ ಮುಗಿಸಿಕೊಂಡು ಬಂದಿದ್ದಾನೆ ಈ ಯುವಕ. ಹಾವಿನೊಂದಿಗೆ ಸಹಜೀವನ ನಡೆಸುವುದು ವೊರ್ರಾನ್ ಚೆನ್ನಾಗಿಯೇ ಕಾಣುತ್ತಿದ್ದರೂ ಸಹ ಅವನನ್ನು ನೋಡಿದವರು ಮಾತ್ರ ದೂರ ದೂರ ಹೋಗುತ್ತಿದ್ದಾರೆ.

ಜನ ನನ್ನ ಬಳಿ ಬಾರದಿದ್ದರೇನಂತೆ. ಜನರಿಂದ ನನಗೇನು. ನನ್ನ ಹಾವು ನನ್ನ ಜತೆಗಿದ್ದರೆ ಸಾಕು ಎಂದು ಹೇಳುತ್ತಾನೆ ವೊರ್ರಾನ್. ಹಾವಿನೊಂದಿಗೆ ಸಿನಿಮಾ ನೋಡುವುದು, ಟಿವಿ ನೋಡುವುದು, ಜಿಮ್ ಮಾಡುವುದು, ಕೇರಂ ಆಡುವುದು, ಅದರೊಂದಿಗೆ ತಂಪುಪಾನೀಯಗಳನ್ನು, ಆಹಾರವನ್ನೂ ಸಹ ವೊರ್ರಾನ್ ಸೇವಿಸುತ್ತಿದ್ದಾನೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Thai man has married his pet snake believing it to be his dead girlfriend. He now spends most of his time with the 10 foot long snake, watching TV together, sharing romantic picnics by the lake, playing board games and going to the gym.
Please Wait while comments are loading...